ಬೆಂಗಳೂರು: ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ರತ್ನ ಪ್ರಶಸ್ತಿ ಪುರಸ್ಕೃತರಾದ ಟಿ ಎನ್ ರಾಧಕೃಷ್ಣ ಬಿಇ ಅವರಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. 
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಚೇರಿಯಲ್ಲಿ ಅಭಿಮಾನಿಗಳು,ಹಿತೈಷಿಗಳು,ಬಂದುಬಳಗ,ಕಾಂಗ್ರೆಸ್ ಕಾರ್ಯಕರ್ತರು,ಕೈ ಮುಖಂಡರು ಸಾಹಿತ್ಯಾಸಕ್ತರು ಆಗಮಿಸಿ ಶುಭಾಷಯಕೋರಿದರು. ಇನ್ನು ಟಿ ರಾಧಾಕೃಷ್ಣ ಅವರು ಕನ್ನಡ ಸಾಹಿತ್ಯದ ಬಗ್ಗೆ ಅಪಾರಜ್ಞಾನವನ್ನು ಹೊಂದಿದ್ದು ಸಾಕಷ್ಟು ಚಿಂತನಾಶೀಲರಾಗಿದ್ದಾರೆ ಅಲ್ಲದೆ ಉತ್ತಮ ಅಗ್ನಿಯು ಕೂಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಚಿರಪರಿಚಿತರಾಗಿದ್ದು ಸಾಹಿತ್ಯ ಪರಂಪರೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ.
ಟಿ ರಾಧಕೃಷ್ಣ ಅವರು ಕ್ಷೇತ್ರದಲ್ಲಿ ಸಕ್ರಿಯ ಕಾಂಗ್ರೆಸ್ ಮುಖಂಡರಾಗಿದ್ದು, ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ, ಅಲ್ಲದೆ ಸಾಹುತ್ಯಾಸಕ್ತರಾಗಿದ್ದು ಮುಂಬರುವ ಕನ್ನಡ ಸಾಹಿತ್ಯ ಪತಿಷತ್ ಗೆ ರಾಜ್ಯಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ.
ಕನ್ನಡ ಬೆಳೆಸುವ, ಉಳಿಸುವ ನಿಟ್ಟಿನಲ್ಲಿ ಹಲವು ಸಾಹಿತ್ಯ ಶಿಬಿರಗಳನ್ನು ನಡೆಸಿ ಕ್ಷೇತ್ರದಲ್ಲಿ ಕನ್ನಡ ಭಾಷೆ,ಸಂಸ್ಕೃತಿ,ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಹಲವು ಹೋರಾಟ ಮಾಡಿಕೊಂಡು ಬರಲಾಗಿದೆ. ಸಾಹಿತ್ಯದ ಜೊತೆ ಜೊತೆಯಲ್ಲಿಯೇ ರಾಜಕಾರಣಿಯು ಹಾಗಿದ್ದು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ರಾಧಾಕೃಷ್ಣ ಅವರು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಜನಾನುರಾಗಿದ್ದಾರೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜನರ ಪ್ರೀತಿ ಗಳಿಸುವಲ್ಲಿ ಇವರು ಸಹ ಒಬ್ಬರಾಗಿದ್ದಾರೆ. ಕೇವಲ ರಾಧಾಕೃಷ್ಣ ಅವರು ರಾಜಕೀಯ ಸಾಹಿತ್ಯ ಕ್ಷೇತ್ರ ಬಲದ ಸಮಾಜಮುಖಿ ಕೆಲಸಗಳನ್ನು ಸಹ ಮಾಡಿಕೊಂಡು ಬರುತ್ತಿದ್ದಾರೆ ಎರೆಮರೆಕಾಯಿಯಂತೆ ಸಮಾಜದಲ್ಲಿ ನಿರ್ಗತಿಕರಿಗೆ ಬಡವರಿಗೆ ಅಸಹಾಯಕರಿಗೆ ಕೈಲಾಗದವರಿಗೆ ಸಹಾಯವನ್ನು ಮಾಡಿಕೊಂಡು ಬರುತ್ತಿದ್ದಾರೆ.
ರಾಜಾಜಿನಗರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಅಧ್ಯಕ್ಷರಾಗಿಯೂ ರಾಧಕೃಷ್ಣ ಅವರು ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಅಧ್ಯಕ್ಷ ಎಲ್ ಲೋಕೇಶ್ ಅವರು ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದರು.
ರಾಧಕೃಷ್ಣ ಅವರ ಬರ್ತಡೆ ಕಾರ್ಯಕ್ರಮದಲ್ಲಿ ನೂರಾರು ಜನ ಅಭಿಮಾನಿಗಳು ಭಾಗವಹಿಸಿ ನೆಚ್ಚಿನ ನಾಯಕನಿಗೆ ಶುಭಹಾರೈಸಿದರು.