LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅನ್ಯಭಾಷಿಗರಿಗೆ ಕನ್ನಡ ಭಾಷೆ,ಸಂಸ್ಕತಿ ಕಲಿಸಿ: ನಟ ರಿಷಬ್ ಶೆಟ್ಟಿ

ಬೆಂಗಳೂರು: ಅನ್ಯಭಾಷಿಗರು ಕರ್ನಾಟಕಕ್ಕೆ ಬಂದಾಗ,ನಾವು ಅವರಿಗೆ ಮೊದಲು  ಕನ್ನಡ ಭಾಷೆ ಕಲಿಯಿರಿ ಕನ್ನಡ ನೆಲ, ಜಲವನ್ನು ಗೌರವಿಸಿ, ನಿಮ್ಮ ಭಾಷೆಯಂತೆ ಕನ್ನಡವನ್ನು ಪ್ರೀತಿ ಮಾಡಿ ಎಂದು ಮುಖ್ಯವಾಗಿ ಹೇಳಿಯೆ ಹೇಳುತ್ತೇವೆ ಎಂದು ನಟ ರಿಷಬ್ ಶೆಟ್ಟಿ ಹೇಳಿದರು.

ಕೇಂದ್ರೀಯ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆ, ಬೆಂಗಳೂರು ವಲಯ ಕನ್ನಡಸಂಘದ ವತಿಯಿಂದ ಕಾವೇರಿ ಭವನದಲ್ಲಿ ಹಮ್ಮಿಕೊಂಡ 25ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಗಾಟನೆ ಮಾಡಿ ಮಾತನಾಡಿದ ಅವರು, ಕನ್ನಡಿಗರು ವಿಶಾಲ ಹೃದಯ ಉಳ್ಳವರು. ದೇಶದ ಯಾವುದೇ ಭಾಗದ ಜನರು ಕರ್ನಾಟಕಕ್ಕೆ ಬಂದರೆ, ಅವರನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಅಪ್ಪಿಕೊಳ್ಳುತ್ತೇವೆ. ಅದರೊಂದಿಗೆ ಅವರಿಗೆ ನಾವು ಕನ್ನಡ ಕಲಿಯಿರಿ, ಕನ್ನಡ ನೆಲ, ಜಲವನ್ನು ಗೌರವಿಸಿ, ನಿಮ್ಮ ಭಾಷೆಯಂತೆ ಕನ್ನಡವನ್ನು ಪ್ರೀತಿಸಿ ಎಂದು ಹೇಳುತ್ತೇವೆ ಎಂದರು.

ಕನ್ನಡದ ಸಂಗತಿ ಸಿನೆಮಾದಲ್ಲಿ ತೋರಿಸಿದ್ದೇನೆ:

ಕನ್ನಡ ರಾಜ್ಯೋತ್ಸವ ನಮಗೆ ನಿತ್ಯೋತ್ಸವವಾಗಿದೆ. ಕರ್ನಾ ಟಕದ ಏಕೀಕರಣದ ಸಂದರ್ಭದಲ್ಲಿ ಗಡಿಭಾಗದಲ್ಲಿ ಆದಂತಹ ಸಂಗತಿಗಳನ್ನು ಸಿನಿಮಾದಲ್ಲಿ ತಿಳಿಸಿದ್ದೇನೆ. ಗಡಿಯನ್ನು ದಾಟಿ ಬೇರೆ ರಾಜ್ಯಕ್ಕೆ ಹೋದ ಗಡಿನಾಡ ಕನ್ನಡಿಗರು ಇವತ್ತಿಗೂ ಕನ್ನಡದ ಮೇಲೆ ಅದೇ ಅಭಿಮಾನ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ನಾವು ಎಲ್ಲಿಗೆ ಹೋದರೂ ಆಯಾ ಭಾಷೆಯನ್ನು ಗೌರವಿಸಬೇಕು ಎಂದರು..

ಕೇಂದ್ರೀಯ ತೆರಿಗೆ ಇಲಾಖೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಇದು ನಮ್ಮ ರಾಜ್ಯದ ಹೆಮ್ಮೆ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ವೈಭವವಾಗಿ ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡು ಉದ್ಯೋಗಿಗಳು ಕನ್ನಡ ಮಯವನ್ನಾಗಿ ಇಡೀ ಕಚೇರಿಯನ್ನು ಮಾಡುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.

ಮುಖ್ಯ ಆಯುಕ್ತರು ಹೇಳಿದ ಹಾಗೆ ನನಗೂ ಸಹ ನಟನೆ ಮಾಡುವುದಕ್ಕೆ ಇಷ್ಟ ಎಂದರು, ಕಾಜಲ್ ಅವರು ಹೊರ ರಾಜ್ಯದವರು ಆಗಿದ್ದರು ಸಹ ಕರ್ನಾಟಕವನ್ನು ಇಷ್ಟಪಡುತ್ತಿರುವುದು ಹೆಗ್ಗಳಿಕೆ ವಿಚಾರವಾಗಿದೆ. ಕೊನೆಯಲ್ಲಿ ಸಿನಿಮಾದ ಡೈಲಾಗನ್ನು ಸಹ ಪ್ರೇಕ್ಷಕರ ಮೇರೆಗೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರೀಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರದ ಕಾಜಲ್ ಸಿಂಗ್ (ಐ ಆರ್ ಎಸ್) ಮಾತನಾಡಿ ಬೇರೆ ರಾಜ್ಯದ ನಿವಾಸಿಯಾದರೂ ಸಹ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಜಲ್ ಅವರು ಕನ್ನಡದಲ್ಲಿ ಒಂದೆರಡು ಮಾತುಗಳನ್ನಾಡಿದರು, ಕರ್ನಾಟಕ ರಾಜ್ಯದ ಸಂಸ್ಕೃತಿ ಭಾಷೆ ಬಣ್ಣ ಎಲ್ಲವೂ ಸಹ ವಿಶಿಷ್ಟವಾಗಿವೆ, ನಾನು ಸಹ ಕನ್ನಡ ಬಾವುಟದ ಉಡುಪನ್ನೇ ಧರಿಸಿದ್ದೇನೆ.

ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ನನಗೆ ಸೇವೆ ಸಲ್ಲಿಸಲು ವಿಶೇಷ ಅನುಭವ ನೀಡಲಾಗಿದೆ. ಹೀಗಾಗಿ ನಾನು ಕರ್ನಾಟಕವನ್ನು ಬಹಳ ಇಷ್ಟಪಡುತ್ತೇನೆ ಎಂದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಆಡಳಿತ ವ್ಯವಸ್ಥೆ ನನಗೆ ಸಾಕಷ್ಟು ಸಂತೋಷವನ್ನು ತಂದಿದೆ. ಹೀಗಾಗಿ ನಾನು ಕರ್ನಾಟಕದಲ್ಲಿ ವಾಸಿಸಲು ಇಷ್ಟಪಡುತ್ತೇನೆ ಎಂದರು..

ಇನ್ನು ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಮಾತನಾಡಿ, ಕೇಂದ್ರ ತೆರಿಗೆ ಇಲಾಖೆ ಕನ್ನಡ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಬಹಳ ವಿಶೇಷವಾಗಿದ್ದು ನನಗೆ ಸಾಕಷ್ಟು ಖುಷಿಯಾಗಿದೆ ಇದನ್ನ ಆಡಳಿತ ವರ್ಗ ಕನ್ನಡದ ಕಂಪನ್ನು ಎಲ್ಲೆಡೆ ಪ್ರಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಾನು ಮೊದಲ ಬಾರಿಗೆ ತೆರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳಲ್ಲಿ ಗೆದ್ದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ಮುಖ್ಯ ಆಯುಕ್ತೆ ಕಾಜಲ್ ಸಿಂಗ್, ಮುಖ್ಯ ಆಯುಕ್ತ ಆಶಿಸ್ ಚಂದನ್, ಬೆಂಗಳೂರು ಉತ್ತರ ಆಯುಕ್ತ ಡಾ. ಕೊಟ್ರ ಸ್ವಾಮಿ, ಸಂಘದ ಕಾರ್ಯಾಧ್ಯಕ್ಷ ಶ್ರೇಯಸ್ ಕೆಎಂ,  ಹರಿಕೃಷ್ಣ, ಸೇರಿದಂತೆ ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೇಂದ್ರ ತೆರಿಗೆ  ಹಾಗೂ ಸೀಮಾ ಸುಂಕ ಇಲಾಖೆಯಲ್ಲಿ ಸೇವೆ ಸಲ್ಲಿಸುವದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ರಿಗೆ ಗೌರವ ನೀಡಲಾಯಿತು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ