
ಭಾರತೀಯ ಸೇನೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿ ಆಕಾಶ ಸಂಸ್ಥೆಯ ಬಿಜಿನೆಸ್ ಹೆಡ್ ದೀರಜ್ ಕುಮಾರ್ ಮಿಶ್ರ ಮಾತನಾಡಿ,ಭಾರತೀಯ ಸೇನಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸುವ ನಿಟ್ಟಿನಲ್ಲಿ ಆಕಾಶ ಎಜುಕೇಶನ್ ಸಂಸ್ಥೆ ಪ್ರತಿ ವರ್ಷ ವಿನೂತನವಾದ ಅಂತಹ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಸಮಾಜದ ಕೆಳ ವರ್ಗದವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ದೇಶ ಕೈವ ಸೈನಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಹಾಗೂ ಅವರ ಕುಟುಂಬವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಂಸ್ಥೆಯು ದೇಶ ವ್ಯಾಪ್ತಿ ಶೈಕ್ಷಣಿಕ ಆಂದೋಲನವನ್ನೇ ಸೃಷ್ಟಿ ಮಾಡಿದೆ ಸಂಸ್ಥೆಯ ಯೋಜನೆಯನ್ನು ಎಲ್ಲಾ ಸೈನಿಕ ಕುಟುಂಬದವರು ಪ್ರಯೋಜನ ಪಡೆದುಕೊಳ್ಳಲಿ ಎಂದು ವಿನಂತಿಸಿಕೊಂಡರು.
ಒಪ್ಪಂದದ ಮುಖ್ಯ ಉದ್ದೇಶವೆಂದರೆ ಸಂಸ್ಥೆಯ ಶುಲ್ಕ ಕಟ್ಟುವುದು ಬಿಟ್ಟರೆ ಬೇರೆ ಯಾವ ಪರೀಕ್ಷಾ ತರಬೇತಿಗಳಿಗೆ ಶುಲ್ಕ ಕಟ್ಟಿಸಿಕೊಳ್ಳದೆ ಶಿಕ್ಷಣವನ್ನು ನೀಡುವ ಕಾರ್ಯ ಜಾರಿ ಮಾಡಲಾಗಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಲು ವಿನಂತಿಸಿಕೊಂಡರು.
ಸೈನಿಕರು, ನಿವೃತ್ತರು, ಶೌರ್ಯ ಪ್ರಶಸ್ತಿ ಪುರಸ್ಕೃತರು, ಅಂಗವಿಕಲ ಸಿಬ್ಬಂದಿ ಮತ್ತು ಸೇವೆಯಲ್ಲಿ ಮಡಿದವರ ಕುಟುಂಬಗಳು ಸೇರಿದಂತೆ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಭಾರತೀಯ ಸೇನೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದರು.
ಈ ಒಪ್ಪಂದದಡಿಯಲ್ಲಿ, AESL ತನ್ನ ಪ್ಯಾನ್ ಇಂಡಿಯಾ ಕೇಂದ್ರಗಳು ಮತ್ತು ಶಾಖೆಗಳಲ್ಲಿ ತನ್ನ ಕೋರ್ಸ್‌ಗಳಿಗೆ ದಾಖಲಾಗಲು ಬಯಸುವ ಭಾರತೀಯ ಸೇನಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಒಪ್ಪಂದಕ್ಕೆ ಭಾರತೀಯ ಸೇನೆಯ ಸೆರಿಮೋನಿಯಲ್ & ವೆಲ್ಫೇರ್ 3&4 ರ ಕರ್ನಲ್ ಮತ್ತು AESL ನ ದೆಹಲಿ-ಎನ್‌ಸಿಆರ್‌ನ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಡಾ. ಯಶ್ ಪಾಲ್ ಸಹಿ ಹಾಕಿದರು.

ಭಾರತೀಯ ಸೇನೆಯೊಂದಿಗೆ ಆಕಾಶ ಸಂಸ್ಥೆಯ ಒಪ್ಪಂದಗಳು:
● ಸೈನಿಕರು ನೋಂದಣಿ ಶುಲ್ಕವನ್ನು ಮಾತ್ರ ಪಾವತಿಸಬೇಕು, ಸಶಸ್ತ್ರ ಪಡೆಗಳಲ್ಲಿದ್ದಾಗ ಮರಣ ಹೊಂದಿದ ಸಿಬ್ಬಂದಿಯ ಮಕ್ಕಳಿಗೆ ಎಲ್ಲಾ ಇತರ ಶುಲ್ಕಗಳ ಮೇಲೆ 100% ವಿನಾಯಿತಿ.
● 20% ಕ್ಕಿಂತ ಹೆಚ್ಚು ಅಂಗವೈಕಲ್ಯ ಮತ್ತು ಶೌರ್ಯ ಪ್ರಶಸ್ತಿ ಪಡೆದ ಸಿಬ್ಬಂದಿಯ ಮಕ್ಕಳಿಗೆ 100% ಬೋಧನಾ ಶುಲ್ಕ ವಿನಾಯಿತಿ.
● ಸೇವೆಯಲ್ಲಿರುವ ಮತ್ತು ನಿವೃತ್ತ ಸಿಬ್ಬಂದಿಯ ಮಕ್ಕಳಿಗೆ ಇತರ ಎಲ್ಲ ವಿದ್ಯಾರ್ಥಿವೇತನಗಳ ನಂತರ 20% ಬೋಧನಾ ಶುಲ್ಕ ವಿನಾಯಿತಿ.
ಈ ವಿದ್ಯಾರ್ಥಿವೇತನಗಳು AESLನ ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಹೊರತಾಗಿದ್ದು, ಪ್ರವೇಶ ಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ ಇವು ಲಭ್ಯವಿದೆ.
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ (MD & CEO) ಚಂದ್ರ ಶೇಖರ್ ಗರಿಸಾ ರೆಡ್ಡಿ ಪ್ರತಿಕ್ರಿಯಿಸಿ "AESL ನಲ್ಲಿ, ಶಿಕ್ಷಣವು ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯ ಎಂದು ನಾವು ನಂಬುತ್ತೇವೆ. ಭಾರತೀಯ ಸೇನೆಯೊಂದಿಗಿನ ಪಾಲುದಾರಿಕೆಯು ನಮ್ಮ ಸೈನಿಕರ ತ್ಯಾಗಗಳನ್ನು ಗೌರವಿಸಲು, ಅವರ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಲು ಅನುವು ಮಾಡಿಕೊಡುತ್ತದೆ’ ಎಂದು ಹೇಳಿದರು.
ಗಡಿಯಲ್ಲಿ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವ ಹಾಗೂ ಅವರ ಕುಟುಂಬಗಳಿಗೆ ಉತ್ತೇಜನ ನೀಡುವ ಸಲುವಾಗಿ ಆಕಾಶ ಸಂಸ್ಥೆ ವಿಭಿನ್ನ ಪ್ರಯತ್ನವನ್ನು ಮಾಡಿದೆ. ಪ್ರತಿವರ್ಷವೂ ಸಂಸ್ಥೆಯಿಂದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಬಾರಿ ವಿಭಿನ್ನ ಕಾರ್ಯ ಚಟುವಟಿಕೆ ಕೈ ಎತ್ತಿಕೊಂಡು ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಸುಮಾರು ಆಕಾಶ ಸಂಸ್ಥೆಯ 400 ಕಚೇರಿಗಳಿದ್ದು ಎಲ್ಲೆಡೆಯೂ ಸೈನಿಕ ಮಕ್ಕಳು ಕೋರ್ಸುಗಳಿಗೆ ಬಯಸುವವರು ಸೇರಿಕೊಂಡು ಪ್ರಯೋಜನವನ್ನು ಪಡೆಯಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಆಕಾಶ ಸಂಸ್ಥೆಯ ವಿಜಯ ಭಾಸ್ಕರ್, ಸುರೇಶ್ ಬಾಬು, ವರುಣ್, ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.