LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯ ನ್ಯಾಯವಾದಿ ಕೆ ವೆಂಕಟರಮಣ ಅವರಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ 2026- 2031 ,ರ ಅವಧಿಗೆ ಸದಸ್ಯತ್ವ ಸ್ಥಾನದ ಅಭ್ಯರ್ಥಿ ಹೈಕೋರ್ಟ್ ನ ಹಿರಿಯ ವಕೀಲ ಕೆ ವೆಂಕಟರಮಣ(ವೆಂಕಟರಾಮ ರೆಡ್ಡಿ) ಅವರು ಪರಿಷತ್ ನಲ್ಲಿ ತಮ್ಮ ಉಮೇದುವಾರಿಯನ್ನು ಸರಳವಾಗಿ ಸಲ್ಲಿಸಿದರು.


ಫೆಬ್ರುವರಿ 10ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು, ಹೀಗಾಗಿ ಬೆಂಗಳೂರು ಗ್ರಾಮಾಂತರ  ಬಾಗೇಪಲ್ಲಿ ಮೂಲದವರಾದ ವಕೀಲರಾದ ಕೆ ವೆಂಕಟರಮಣ ಅವರು ತಾಲೂಕು ಜಿಲ್ಲಾ ಮಟ್ಟದಲ್ಲಿ ವಕೀಲ ವೃತ್ತಿಯನ್ನು ಮೂರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ಹೈಕೋರ್ಟ್ ನಲ್ಲಿಯೂ ಸಹ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ವೆಂಕಟರಮಣ ಅವರು ಹಿಂದುಳಿದ ವರ್ಗದವರಾಗಿದ್ದರು ಸಹ, ಅವರ ಬೆಂಬಲ ಹಾಗೂ ಬೆಂಬಲಿಗರು ಮಾತ್ರ ಅಪಾರ ಪ್ರಮಾಣದಲ್ಲಿ ಹೊಂದಿರುವುದು ನಾಮಪತ್ರ ಸಲ್ಲಿಸಲು ಬಂದಾಗ ಇದ್ದವರಿಂದಲೇ ತಿಳಿಯುತ್ತದೆ. ಎಲೆ ಮರೆ ಕಾಯಿಯಂತೆ  ವಕೀಲಿ ವೃತ್ತಿ ಸೇರಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.


 ರಾಜ್ಯದ ಎಲ್ಲಾ  ನ್ಯಾಯವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾರ್ ಕೌನ್ಸಿಲ್ ಅನ್ನು ಉನ್ನತಿಕರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದರು. ಸರಳವಾಗಿ ನಾಮಪತ್ರವನ್ನು ತಮ್ಮ ವಕೀಲ ಮಿತ್ರರ ಬೆಂಬಲಿಗರ ಸಹಾಯದಿಂದ ಸಲ್ಲಿಸಲಾಯಿತು ಇಂದು.


ವೆಂಕಟರಮಣ ಅವರ ಪ್ರಣಾಳಿಕೆಯ ಮೂಲ ಅಂಶಗಳು;


ಕೆ ವೆಂಕಟರಮಣ (ವೆಂಕಟರಾಮ ರೆಡ್ಡಿ) ಅವರ ಪ್ರಣಾಳಿಕೆ:


1.ವಕೀಲರಿಗಾಗಿ,ವಕೀಲರಿಗೋಸ್ಕರ,ವಕೀಲರ ಧ್ಯೇಯೋದ್ದೇಶಗಳಿಗಾಗಿ ಸಮಾನತೆ.


2.ನ್ಯಾಯವಾದಿಗಳಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಐಕ್ಯತೆ ತರುತ್ತೇನೆ.


3.ಲಾಯರ್ ಅವರಲ್ಲಿ ಸಾರ್ವಭೌಮತ್ವ, ಸಮಾನತೆ ಮತ್ತು ಅಖಂಡತೆ ಎತ್ತಿ ಇಡಿಯುತ್ತೇನೆ.


4.ಕಾಯಕವೇ ಕೈಲಾಸದಲ್ಲಿ ನಂಬಿಕೆ ಇಟ್ಟುಕೊಂಡು ಸಿದ್ದಾಂತದಲ್ಲಿ ನಡೆದವರು.


5.ವಕೀಲ ಪರಿಷತ್‌ನಲ್ಲಿ ಬರುವ ಹಲವಾರು ಲೋಪದೋಷಗಳನ್ನು ಸರಿಪಡಿಸುವುದು ಮೂಲ ಗುರಿಯಾಗಿರುತ್ತದೆ.


6.ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಹಳೆಯ ಕಟ್ಟಡವನ್ನು ತೆಗೆದು ಹೊಸ ಕಟ್ಟಡವನ್ನು 8 ಅಂತಸ್ತಿನವರೆಗೆ ನಿರ್ಮಾಣ ಮಾಡುವುದು ನನ್ನ ಮೊದಲ ಗುರಿಯಾಗಿರುತ್ತದೆ.


7. ಕರ್ನಾಟಕ ರಾಜ್ಯದ ವಕೀಲರ ಹಿತರಕ್ಷಣೆಗಾಗಿ ವಕೀಲರ ಕಲ್ಯಾಣ ನಿಧಿಯನ್ನು ರೂ.8 ಲಕ್ಷದಿಂದ, ರೂ.25 ಲಕ್ಷಗಳವರೆಗೆ ಏರಿಕೆ ಮಾಡುವುದು.


8. ಕರ್ನಾಟಕ ರಾಜ್ಯದ ಎಲ್ಲಾ ವಕೀಲರಿಗೆ ಅವರ ಕುಟುಂಬದ ಹಿತರಕ್ಷಣೆಗಾಗಿ ಆರೋಗ್ಯ ವಿಮೆಯನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಮಾಡಿಸುವುದು.


9.ವಕೀಲರ ಪರಿಷತ್ ನಲ್ಲಿ ಆರೋಗ್ಯ ಪೂರ್ಣ ಆಡಳಿತ ನಡೆಸಲು ಉದ್ದೇಶ.


10. ಪರಿಷತ್ ನಲ್ಲಿರುವ ಅನುದಾನವನ್ನು ವಕೀಲರ ಶ್ರೇಯೋಭಿವೃದ್ದಿ ಬಳಸಿಕೊಳ್ಳುವುದು.


ಹಿರಿಯ ನ್ಯಾಯವಾದಿ ಕೆ ವೆಂಕಟರಮಣ (ವೆಂಕಟರಾಮ ರೆಡ್ಡಿ) ಅವರ ಬೆಂಬಲಕ್ಕೆ ನೂರಾರು ಜನ ಹಿರಿಯ,ಕಿರಿಯ ವಕೀಲ ಮಿತ್ರರು ನಿಂತಿದ್ದು,ಚುನಾವಣೆಯಲ್ಲಿ  ಅಭೂತಪೂರ್ವವಾಗಿ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ನ್ಯಾಯಲಯದ ವಿಚಾರಗಳಿಗೆ ಸಂಬಂಧಿಸಿದಂತೆ ಅವರನ್ನು ಸಂಪರ್ಕಿಸಬಹುದು. 9448583265/7676959711

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ