
ಬೆಂಗಳೂರು ಉತ್ತರ ನಗರ ಪಾಲಿಕೆಯ ಮುಕ್ತ ಆಹ್ವಾನಕ್ಕೆ ಸ್ಪಂದಿಸಿ 120ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿ ಪಾದಚಾರಿ ಮಾರ್ಗಗಳ ಗುಣಮಟ್ಟವನ್ನು ಪರಿಶೀಲಿಸಿದರು. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದು 6ನೇ ವಾಕ್ ಆಗಿದ್ದು, ಇದುವರೆಗೆ 40 ಕಿ.ಮೀ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲಾಗಿದೆ. ನಗರ ಮಟ್ಟದಲ್ಲಿ ಒಟ್ಟು 78 ಕಿ.ಮೀ ಮಾರ್ಗಗಳನ್ನು ಒಳಗೊಂಡಿದೆ.
ಕಂದಾಯ ಸಚಿವರು ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣ ಬೈರೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್* ಹಾಗೂ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್* ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದರು. ಸ್ಥಳೀಯ ನಿವಾಸಿಗಳು, ನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ವಯೋಮಾನದ ಪಾದಚಾರಿಗಳು ಸೇರಿ 120ಕ್ಕೂ ಹೆಚ್ಚು ಮಂದಿ ವಾಕ್‌ನಲ್ಲಿ ಪಾಲ್ಗೊಂಡಿದ್ದರು.
ವಾಕ್ ಮಾರ್ಗವು ರೈಲ್ವೇ ಪ್ಯಾರಲೆಲ್ ರಸ್ತೆ ಜಂಕ್ಷನ್‌ನಿಂದ ಆರಂಭವಾಗಿ ಸಹಕಾರನಗರ ಹಾಗೂ ಕೋಡಿಗೆಹಳ್ಳಿ ಮುಖ್ಯರಸ್ತೆಗಳ ಭಾಗಗಳನ್ನು ಒಳಗೊಂಡಂತೆ ಸುಮಾರು 6 ಕಿ.ಮೀ ನಿರಂತರ ಪಾದಚಾರಿ ಮಾರ್ಗವನ್ನು ಒಳಗೊಂಡಿತ್ತು.

ನಿಗದಿತ ಮಾರ್ಗದಲ್ಲಿ ನಾಗರಿಕರು ಪಾದಚಾರಿ ಮಾರ್ಗದಲ್ಲಿ ನಡೆದು ಪ್ರಮುಖ ಅಡೆತಡೆಗಳನ್ನು ಗುರುತಿಸುವುದು. ಪಾದಚಾರಿ ಮಾರ್ಗದಿಂದ ರಸ್ತೆ ಮೇಲೆ ಇಳಿಯುವಂತೆ ಮಾಡುವ ಅಡೆತಡೆಗಳನ್ನು ದಾಖಲಿಸಿ ಫೋಟೋ ತೆಗೆದುಕೊಳ್ಳುವಂತೆ ಭಾಗವಹಿಸಿದವರಿಗೆ ಸೂಚಿಸಲಾಯಿತು.
*ಪರಿಶೀಲನೆ ಫಲಿತಾಂಶಗಳು:*
*6 ಕಿ.ಮೀ ವಾಕ್ ನಂತರ ಭಾಗವಹಿಸಿದವರು ಎದುರಿಸಿದ ಅಡೆತಡೆಗಳ ವಿವರ:*👇
* ಕಸದ ರಾಶಿ – 0
* ಮುಕ್ತ ಮೂತ್ರ ವಿಸರ್ಜನೆ ಸ್ಥಳಗಳು – 0
* ಮುರಿದ / ಕಾಣೆಯಾದ ಪಾದಚಾರಿ ಸ್ಲ್ಯಾಬ್‌ಗಳು – 1
* ಪಾದಚಾರಿ ಮಾರ್ಗ ಅಡ್ಡಿಯಾದ ದ್ವಿಚಕ್ರ ವಾಹನಗಳು – 0
* ಪಾದಚಾರಿ ಮಾರ್ಗ ಅಡ್ಡಿಯಾದ ಕಾರುಗಳು – 1
* ಕಟ್ಟಡ ಸಾಮಗ್ರಿಗಳ ಅಡ್ಡಿ – 0
* ಅಂಗಡಿ / ವ್ಯಾಪಾರಿಗಳ ಅಡ್ಡಿ – 0
* ಅಕ್ರಮ ಅತಿಕ್ರಮಣಗಳು – 0
* ಅನಧಿಕೃತ / ಅಕ್ರಮ ಪೋಸ್ಟರ್‌ಗಳು – 0
* ಬೆಸ್ಕಾಂ ಅಡೆತಡೆಗಳು – 4
* ಅಪಾಯಕಾರಿ ಸೂಚನಾ ಫಲಕಗಳು – 2
ಒಟ್ಟು 6–8 ಸಣ್ಣ ಅಡೆತಡೆಗಳು ಮಾತ್ರ ಕಂಡುಬಂದಿದ್ದು, ಕಸ, ಮೂತ್ರ ವಿಸರ್ಜನೆ ಅಥವಾ ಮುರಿದ ಪಾದಚಾರಿ ಮಾರ್ಗಗಳಂತಹ ಪ್ರಮುಖ ಸಮಸ್ಯೆಗಳು ಕಂಡುಬರಲಿಲ್ಲ. ಪಾದಚಾರಿ ಮಾರ್ಗಗಳು ಸ್ವಚ್ಛ, ಹಸಿರಿನಿಂದ ಕೂಡಿದ್ದು ಸುಗಮವಾಗಿ ನಡೆಯಲು ಅನುಕೂಲಕರವಾಗಿವೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ಕೆಲವು ಸಣ್ಣ ಸುಧಾರಣೆಗಳ ಸಲಹೆಗಳನ್ನು ಆಯುಕ್ತರು ಹಾಗೂ ಅಧಿಕಾರಿಗಳು ದಾಖಲಿಸಿಕೊಂಡರು.
*ಸಾಧನೆಯ ಮೈಲಿಗಲ್ಲು:*
✅ ಇಲ್ಲಿಯವರೆಗೆ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿಯೇ 40 ಕಿ.ಮೀ ಫುಟ್‌ಪಾತ್ ವಾಕ್ ಪೂರ್ಣಗೊಂಡಿದ್ದು, ವಿವರಗಳು ಈ ಕೆಳಗಿನಂತಿವೆ
• ಬಾಣಸವಾಡಿ - 5 ಕಿ.ಮೀ
• ಥಣಿಸಂದ್ರ - 7 ಕಿ.ಮೀ
• ಯಲಹಂಕ - 10 ಕಿ.ಮೀ
• ಆರ್.ಟಿ. ನಗರ (ಹೆಬ್ಬಾಳ) – 7 ಕಿ.ಮೀ
* ಸರ್ವಜ್ಞ ನಗರ - 5 ಕಿ.ಮೀ.
• ಹೊಸ ವರ್ಷದ ವಿಶೇಷ ನಡಿಗೆ: ಜೆ.ಸಿ. ನಗರದಿಂದ ಮೇಖ್ರಿ ವೃತ್ತದ ವರೆಗೆ
* ಕೊಡಿಗೇಹಳ್ಳಿ - 6.0 ಕಿ.ಮೀ.
*ಪ್ರಾಜೆಕ್ಟ್ ವಾಕಲೂರು ಹಿನ್ನೆಲೆ:*
2025 ನವೆಂಬರ್ 1 ರಂದು ಆರಂಭವಾದ ಈ ಕಾರ್ಯಕ್ರಮ ಈಗಾಗಲೇ ಐದು ನಗರ ಪಾಲಿಕೆಗಳಲ್ಲಿ ನಾಲ್ಕು ಪಾಲಿಕೆಗಳನ್ನು ಒಳಗೊಂಡಿದೆ. ಶಿವಾಜಿನಗರದ ರಾಜ್ಯೋತ್ಸವ 11ಕೆ (ಕೇಂದ್ರ ನಗರ ಪಾಲಿಕೆ), ನವೆಂಬರ್ 8ರ ಕೊರಮಂಗಲ 5ಕೆ , ನವೆಂಬರ್ 16 ರ ಜಯನಗರ 5ಕೆ (ದಕ್ಷಿಣ ನಗರ ಪಾಲಿಕೆ), ನವೆಂಬರ್ 22ರ ಬಾಣಸವಾಡಿ 5ಕೆ, ನವೆಂಬರ್ 29ರ ಥಣಿಸಂದ್ರ 8ಕೆ (ಉತ್ತರ ನಗರ ಪಾಲಿಕೆ), ಡಿಸೆಂಬರ್ 13ರ ಯಲಹಂಕ 10ಕೆ, ಜನವರಿ 1ರ ಬೆಂಗಳೂರು 26 ಕಿ.ಮೀ ವಾಕ್, ಕಮ್ಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಕ್ ಗಳು ನಡೆದಿವೆ.
ಇಂದಿನ 10ನೇ ವಾಕ್ ನೊಂದಿಗೆ ಒಟ್ಟು 78 ಕಿ.ಮೀ ಪಾದಚಾರಿ ಮಾರ್ಗಗಳನ್ನು ಒಳಗೊಂಡಿದೆ. ಮುಂದಿನ ತಿಂಗಳಲ್ಲಿ ಒಟ್ಟು 100 ಕಿ.ಮೀ ವಾಕಬಲ್ ಫುಟ್ ಪಾತ್ ಗುರಿ ಹೊಂದಲಾಗಿದೆ.
ಪ್ರಾಜೆಕ್ಟ್ ವಾಕಲೂರು ಜಿಬಿಎ ಮತ್ತು ನಾಗರಿಕರ ಸಂಯುಕ್ತ ಪ್ರಯತ್ನವಾಗಿದ್ದು, ಬೆಂಗಳೂರಿನ ನಡೆಯಲು ಯೋಗ್ಯ ಪಾದಚಾರಿ ಮಾರ್ಗಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ದೃಷ್ಟಿಕೋನ: ಬೆಂಗಳೂರು ಅನ್ನು ವಾಕಲೂರು ಆಗಿಸೋಣ”
ಪ್ರಾಜೆಕ್ಟ್ ವಾಕಲೂರು ಸಂಯೋಜಕ ಅರುಣ್ ಪೈ ಅವರು ಮಾತನಾಡಿ, ನಗರ ಪಾಲಿಕೆ ಅಧಿಕಾರಿಗಳು ನಾಗರಿಕರನ್ನು ತಮ್ಮ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲು ಆಹ್ವಾನಿಸುವುದು ಮೂಲಸೌಕರ್ಯದ ಮೇಲೆ ಅವರ ವಿಶ್ವಾಸ ಹಾಗೂ ನಾಗರಿಕರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮನೋಭಾವವನ್ನು ತೋರಿಸುತ್ತದೆ. ಈ ಕಾರ್ಯಕ್ರಮ ನಗರ ಪಾಲಿಕೆ ಮತ್ತು ನಾಗರಿಕರನ್ನು ಇನ್ನಷ್ಟು ಹತ್ತಿರ ತರಲು ಸಹಾಯ ಮಾಡಿದ್ದು, ಇಂತಹ ಮೊದಲ ಹತ್ತು ಕಾರ್ಯಕ್ರಮಗಳು ನಗರದ ಇನ್ನಷ್ಟು ಪ್ರದೇಶಗಳಲ್ಲಿ ಇದೇ ರೀತಿಯ ವಾಕ್‌ಗಳು ನಡೆಯುವಂತೆ ಪ್ರೋತ್ಸಾಹಿಸಿದೆ.