LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರ

ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಜೈನ ಸಮುದಾಯದ ಯುವಕ ಯುವತಿಯರು ಸಾಲಿನಲ್ಲಿದ್ದು, ಐಎಎಸ್ ಕೇಂದ್ರಿತ ಉನ್ನತವಾದಂತಹ ತರಬೇತಿಯನ್ನು ನೀಡಿದಾಗ ಅತ್ಯುನ್ನತ ಹುದ್ದೆಗಳಿಗೆ ಸಮುದಾಯದ ಮಕ್ಕಳು ಹೋಗಲು ಸಾಧ್ಯ , ಮಹಾವೀರರು ಅಹಿಂಸೆಯ ಮೂಲಕವೇ ಇಡೀ ಜಗತ್ತನ್ನು ಶಾಂತಿ ಸಂದೇಶದ ಮೂಲಕ ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹಿರಿಯ ವಿದ್ವಾಂಸರು ಹಾಗೂ ಸಂಶೋಧಕರಾದ ಹಂಪ ನಾಗರಾಜಯ್ಯ ಅವರು ಇಂದಿನ ಯುವಕರಿಗೆ ಸಲಹೆ ನೀಡಿದರು.

ಕರ್ನಾಟಕ ಜೈನ ಸಂಘದಿಂದ 25 26ನೇ ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು, 48 ವರ್ಷಗಳ ಹಿಂದೆ ಜೈನ ಸಮುದಾಯದಲ್ಲಿ ಸುಮಾರು ಏಳು ಜನ ಐಎಎಸ್ ನಂತಹ ಉನ್ನತ ಅಧಿಕಾರದಲ್ಲಿ ಇದ್ದರು ಆದರೆ ಇದೀಗ ಮನೋಜ್ ಕುಮಾರ್ ಜೈನ್ ಅವರನ್ನು ಬಿಟ್ಟರೆ ಉಳಿದ ಯಾರು ಸಹ ಉನ್ನತ ಹುದ್ದೆಗಳಿಗೆ ಹೋಗುತ್ತಿಲ್ಲ ಇದು ನೋವಿನ ಸಂಗತಿ ಆಗಿದೆ ಎಂದರು. ಎರಡನೇ ಹಂತದಲ್ಲಿ ಮಕ್ಕಳಿಗೆ ವ್ಯವಹಾರದ ಜ್ಞಾನ ನೀಡಿದರೆ ಅವರ ಜೀವನದಲ್ಲಿ ಕಲಿಕೆ ಮತ್ತಷ್ಟು ಸುಲಭಗೊಳಿಸಲು ಸಹಕಾರಿಯಾಗುತ್ತದೆ. ಸಮುದಾಯದ ಯುವಕ ಯುವತಿಯರಿಗೆ ಐಎಎಸ್, ಕೆ ಎಸ್ ಐಪಿಎಸ್ ಅಂತ ದೊಡ್ಡ ಮಟ್ಟದ ತರಬೇತಿಗಳನ್ನು ನೀಡಿದಾಗ ಮಾತ್ರ ದೊಡ್ಡ ಮಟ್ಟದ ಅಧಿಕಾರಿಗಳಾಗಲು ಸಾಧ್ಯವಾಗುತ್ತದೆ ಎಂದರು.

ಯುದ್ಧದ ಕಾರುಮೋಡ ಕವಿದಿದೆ:

ಜಗತ್ತಿನಲ್ಲಿ ಯುದ್ಧದ ಕಾರ್ಮೋಡವೆ ಕವಿದಂತಾಗಿದೆ ಇಸ್ರೇಲ್ ಇರಾನ್ ಇರಾಕ್ ಸೌದಿ ಅರೇಬಿಯಾ ದಂತಹ ದೇಶಗಳಲ್ಲಿ ಯುದ್ಧಗಳ ಆರ್ಭಟವೇ ನಡೆಯುತ್ತಿದೆ ಅದರಲ್ಲಿ ಅಮಾಯಕರು ಏನೂ ಗೊತ್ತಿಲ್ಲದವರು ಸಾಯುತ್ತಿರುವುದು ದುರಂತದ ಸಂಗತಿಯಾಗಿದೆ, ಇಂತಹ ಸಂದರ್ಭದಲ್ಲಿ ಮಹಾವೀರರು ತಂದೆ ಅಹಿಂಸೆ ತತ್ವವನ್ನು ಅನುಸರಿಸಿ ಇಡೀ ಜಗತ್ತಿಗೆ ಸಾರಿದರು ಹಿಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಮಹಾವೀರರ ಅಹಿಂಸಾ ಮಾರ್ಗ ಹೌಚಿತ್ಯ ಪೂರ್ಣ ಎನಿಸುತ್ತದೆ.

ಕನಕಗಿರಿ ಮಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,ಭಗವಾನ್ ಮಹವೀರ ಅವರು ಅಹಿಂಸೆ ಮೂಲಕ ಜಗತ್ತುಗೆ ಸಾರಿದ್ದಾರೆ, ಜಗತ್ತಿಗೆ ಶಿಕ್ಷಣ ಕೊಟ್ಟಿದ್ದಾರೆ, ಇವರೊಬ್ಬ ಕಾಲ್ಪನಿಕ ವ್ಯಕ್ತಿಯಲ್ಲ ಇತಿಹಾಸ ಪುರುಷರಾಗಿದ್ದಾರೆ ಎಂದು ಸ್ವಾಮಿ ಹೇಳಿದರು. ನಾಡಿನ ಶಾಲಾ  ಪಠ್ಯದಲ್ಲಿ ಮಹವೀರರ ಸಂದೇಶಗಳನ್ನು ಸಾರಿದ್ದಾರೆ, ಬಿಹಾರದಲ್ಲಿ ಹುಟ್ಟಿದ್ದರು ಕರ್ನಾಟಕದಲ್ಲಿ ಮಹತ್ವ ಒಡೆದುಕೊಂಡಿದ್ದಾರೆ .

ಕನ್ನಡದಲ್ಲಿ ಮಹಾವೀರರ ಕೊಡುಗೆ ಅಪಾರ, ಅವರ ಸಿದ್ದಾಂತ, ಆಚರಣೆ,ವುಚಾರಗಳು ಪ್ರಸ್ತುತವಾಗಿವೆ. ಇಡೀ ವಿಶ್ವಕ್ಕೆ ಜೈನರು ಹತ್ತಿರವಾಗುತ್ತಿದ್ದಾರೆ. ಶಾಕಹಾರಿಗಳು,ಸಸ್ಯಹಾರಿಗಳು ಎಂಬ ಅನೇಕ ವಿಚಾರಗಕಲನ್ನು ಭಗವಾನ್ ಮಹಾವೀರರು ಅಳವಡಿಸಿಕೊಂಡಿದ್ದಾರೆ. ಅವರು ಅಹಿಂಸಾ ಪದ್ದತಿಗಳನ್ನು ಅಳವಡಿಸಿಕೊಂಡಿದ್ದರು.

ಪ್ರಾಕೃತ ಹಾಗೂ ಕನ್ನಡದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮಹಾವೀರರ ಸಂದೇಶಗಳು ಒಳಗೊಂಡಿವೆ. ಆಚಾರ್ಯತ್ರಯತು ಕರ್ನಾಟಕದವರಾಗಿದ್ದಾರೆ. ಇಡೀ ರಾಜ್ಯಕ್ಕೆ ಶಿಕ್ಷಣ ಕೊಟ್ಟಿದ್ದಾರೆ. ಪ್ರಯಳ ಕಾಲದಲ್ಲಿಯೂ ಕರ್ನಾಟಕದಲ್ಲಿ ಧರ್ಮ ಉಳಿಯುತ್ತದೆ. ಬೆಂಗಳೂರಿನ ಬೇಗೂರಿನಲ್ಲಿ ಜೈನ ಶಾಸನಗಳು ಇವೆ, ಅವರ ಅನುಯಾಯಿಗಳು ಇದ್ದಾರೆ. ರಾಜ್ಯದಲ್ಲಿ ಜೈನರ ಕುರುಹುಗಳು ಅನೇಕ ಕಡೆ ಇವೆ, ಈ
ಮೂಲಕ ಜೈನರ ಮಹಿಮೆ ಸಾಕಷ್ಟು ಇದೆ ಎಂಬುದು ಎಲ್ಲರು ತಿಳಿಯಬೇಕು.
ಭಗವಾನ್ ಮಹಾವೀರರು ಓಳ್ಳೆದು ಮಾಡುತ್ತಾರೆ ಎಂಬುದನ್ನು ಮುಕ್ತವಾಗಿ ಹೇಳುವವರು ಯಾರು ಇಲ್ಲದಂತಾಗಿದೆ. ಇದರ ಬಗ್ಗೆ ಎಲ್ಲೆಡೆ ಜಾಗೃತಿಯಾಗಬೇಕಾಗಿದೆ. ಅವರ ಸಂದೇಶಗಳನ್ನು ನಾಡಿನಾದ್ಯಂತ ಪಸರಿಸಬೇಕಾಗಿದೆ ಎಂದರು.

ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದಲ್ಲಿ  ನಿವೃತ್ತ ಎಂಜಿನಿಯರ್ ರಾಜಕೀರ್ತಿ, ಲೋಕಾಯುಕ್ತದ ನಿವೃತ್ತ ರಿಜಿಸ್ಟ್ರಾರ್ ಎಂ.ಜಿ.ಇಂದ್ರಕುಮಾರ್ ಮತ್ತು ಎಸ್‌ಬಿಐ ನಿವೃತ್ತ ಸಹಾಯಕ ಮಹಾ ಪ್ರಬಂಧಕ ವೈ.ಎಸ್. ರಾಜೇಂದ್ರ ಕುಮಾರ್ ಅವರ ಸಮಾಜದ ಬಗ್ಗೆ ಇದ್ದ ಕಳಕಳಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ಗುರುತಿಸಿ ಸಂಘವು'ಜೈನ ಸಮಾಜ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು,

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆತಾ ಪ್ರಭು, ಸ್ವಾಮೀಜಿ, ನ್ಯಾಯಮೂರ್ತಿ ಎಂ.ಐ.ಅರುಣ್ ಹಂಪ ನಾಗರಾಜಯ್ಯ ಸಹ ಕಾರ್ಯದರ್ಶಿ ನೀರಜಾ ರಾಜೇಂದ್ರಕುಮಾರ್ ಶಿಕ್ಷಣ ತಜ್ಞ ಮುನಿರಾಜ ರೆಂಜಾಳ, ಐಎಎಸ್ ಅಧಿಕಾರಿ ಮನೋಜ್ ಜೈನ್ ಕನಕಗಿರಿ ಜೈನಪೀಠದ ಭುವನಕೀರ್ತಿ ಭಟ್ಟಾರಕ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾ‌ರ್ ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ