LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆ

ಬೆಂಗಳೂರು: ಮನುಷ್ಯನ ದೇಹ ರಚನೆಯಾಗಿರುವುದೇ ವೇದ ,ಉಪನಿಷತ್ ಗಳಿಂದ, ಅದಕ್ಕೆ ಸಾಕಷ್ಟು ಅರ್ಥಗಳನ್ನ ಕಲ್ಪಿಸಲಾಗಿದೆ, ಅವುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹಿರಿಯ ಲೇಖಕಿ ಹಾಗೂ ಪ್ರವಚನಾಕಾರರಾದ ಎಂ ನಾಗರತ್ನ ತಿಳಿಸಿದರು.


ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ  ಸುಧರ್ಮ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಗಾಯನ,ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಸುಧರ್ಮ ರತ್ನ ಪ್ರಶಸ್ತಿ ಸ್ವೀಕರಿಸಿ  ಮಾತನಾಡಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ಎಂ ಗೌರಮ್ಮ ನವರ ನೇತೃತ್ವದಲ್ಲಿ ಹಲವಾರು ವಿಶೇಷ ಕಾರ್ಯಕ್ರಮ ನಡೆಯಿತು. ಕನ್ನಡ ನಾಡಿಗೆ ಸಾಕಷ್ಟು ಮನ್ನಣೆ ಇದೆ, ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆ ಶ್ರೇಷ್ಟ ಹಾಗೂ ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ಪರಂಪರೆ ಪುರಾತನ ಕಾಲದಿಂದ ಬೆಳೆದು ಬಂದಿದೆ. ಭಾಷೆ ಹುಟ್ಟು ದೇಹ ರಚನೆ,ಆತ್ಮ, ಪಂಚೇಂದ್ರಿಯಗಳಲ್ಲಿ ದೇವರು ಹೇಗೆ ಕಾಣಬಹುದು ಎಂಬುದನ್ನು ವಿಸೃತವಾಗಿ ತಿಳಿಸಿದರು.


ಕನ್ನಡ ಭಾಷೆ ಎಂಬುದು ತಾಯಿ ಭಾಷೆ ಆದರೆ ಬೇರೆ ಭಾಷೆಗಳನ್ನು ಗೌರವಿಸಬೇಕು ಆದರೆ ಮಾತೃಭಾಷೆ ನಮಗೆ ಎಲ್ಲವನ್ನು ಕೊಟ್ಟಿದೆ ಹೀಗಾಗಿ ಪ್ರೀತಿಸಿ ಹಾರಾವಿಸಿ ಕಾಪಾಡಿಕೊಳ್ಳಬೇಕಾಗಿರೋದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಹಿಳೆಯರಿಗೆ 11ನೇ ಹಾಗೂ 12ನೇ ಶತಮಾನದಲ್ಲಿ ಶಿವ ಶರಣರು ಒಂದಿಬ್ಬರನ್ನು ಬಿಟ್ಟರೆ ಅಲ್ಲಿ ಮಹಿಳಾ ಪ್ರಧಾನವಾಗಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಇತ್ತೀಚಿನ ಕಲಿಯುಗದಲ್ಲಿ ಮಹಿಳೆಯರು ಎಷ್ಟೇ ಶಿಕ್ಷಣ ಒಂತರಾಗಿದ್ದರು ದುಡಿಯುತ್ತಿದ್ದರು ಪುರುಷ ಪ್ರಧಾನವಾಗಿರುವುದನ್ನು ಎಲ್ಲೆಡೆ ನೋಡಬಹುದಾಗಿದೆ ಇಂದಿಗೂ ಸಹ ಮಹಿಳೆಯರಿಗೆ ಸ್ವತಂತ್ರವಾಗಿ ಸ್ವಾತಂತ್ರ್ಯವಾಗಿ ಹಕ್ಕುಗಳನ್ನು ಪಡೆಯುವುದು ಹೇಗೆ ಎನ್ನುವ ಚಿಂತೆ ಹಿಂದಿನ ಕಾಲಘಟ್ಟದ ಮಹಿಳೆಯರಲ್ಲಿ ಒಂದು ರೀತಿ ತೊಡಕಾಗಿಯೇ ಪರಿಣಮಿಸುತ್ತಿದೆ ಅದು ಸೂಚನೆಯ ವಾದಂತಹ ಸಂಗತಿಯಾಗಿದೆ ಎಂದರು.

ನಂತರ ಚುಟುಕು ಕವಯತ್ರಿ ಪದ್ಮಾವತಿ ಚಂದ್ರು ಅವರ  ಚುಟುಕುಧಾರೆ* *ಶೃಷ್ಟಿ* *ಸಾಹಿತ್ಯ ಐಸಿರಿ* *ವೃಕ್ಷಮಾತೆ*   ಸಂಪಾದಕತ್ವದ 4 ಕೃತಿಗಳು ಲೋಕಾರ್ಪಣೆಗೊಂಡಿತು. ನಂತರ ಮಾತನಾಡಿ, ಹಲವು ಮಜಲುಗಳ ಮೂಲಕ ಸಾಹಿತ್ಯಾಸಕ್ತರಿಗೆ ಅಭಿವೃಚಿ ತೋರಿಸುವ  ಸಲುವಾಗಿ ಕೃತಿಗಳನ್ನು ಹೊರತರಲಾಗಿದೆ. ಅದರಲ್ಲಿ ಸಾಕಷ್ಟು ಮಾಹಿತಿ,ನಗೆಗಡಲು,ಮನೋರಂಜನೆ, ಹಾಸ್ಯ, ಪುಸ್ತಕದ ರೂಪದಲ್ಲಿ ಹೊರತರಲಾಗಿದೆ. ಹತ್ತು ಸಾವಿರಕ್ಕಿಂತ ಹೆಚ್ಚು ಚುಟುಕುಗಳನ್ನು ಈಗಾಗಲೇ ಪ್ರಕಟ ಆಗಿದೆ ಅದರಲ್ಲಿ ಎಲ್ಲಾ ರೀತಿಯ ಚುಟುಕುಗಳು ಅಡಗಿವೆ..


ಈ ಕೃತಿಗಳ ಪರಿಚಯದೊಂದಿಗೆ ಲೇಖಕಿಯರ ಸಹಕಾರ ಮತ್ತು ಕೃತಿ ಮಾಡಿರುವ  ವಿಚಾರ ಸಂತಸವಿದೆ. ಉತ್ತಮ ವಿಚಾರಧಾರೆಯ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಬೇಕು ಎಂದು  ಹರ್ಷಿಸಿದರು.


ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಧೈರ್ಯವಾಗಿ ಮುನ್ನುಗ್ಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಅದಕ್ಕೆ ಬಹಳ ಮುಖ್ಯವಾದ ಕಾರಣ ಶಿಕ್ಷಣ ಮಹಿಳೆಯರು ಶಿಕ್ಷಣವನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಪುರುಷ ಪ್ರಧಾನವಾಗಿರುವ ಸಮಾಜದಲ್ಲಿ ಮಹಿಳೆಯರು ಏನು ಎಂಬುದನ್ನು ತೋರಿಸಬೇಕಾಗಿದೆ ತೋರಿಸುತ್ತಿದ್ದಾರೆ ಅಷ್ಟಿದ್ದರೂ ಸಹ ಮಹಿಳೆಯರಿಗೆ ಗೌರವ ಸಿಗದೇ ಇರುವುದು ಸೋಜಿಗದ ಸಂಗತಿಯಾಗಿದೆ ಎಂದರು.


ಮಹಿಳಾ ದಿನಾಚರಣೆ ಎಲ್ಲರೂ ಆಚರಣೆ ಮಾಡಬೇಕು, ವಿದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಾಗ ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ  ಮಹಿಳಾ ದಿನವನ್ನಾಗಿ ಘೋಷಿಸಿ ಆಚರಣೆ ಮಾಡುತ್ತಾರೆ ಅದು ನಮ್ಮ ದೇಶ ಹಾಗೂ ರಾಜ್ಯದಲ್ಲಿಯೂ ರೂಢಿಗತವಾಗಿದೆ.


ಈ ಬಾರಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೇಲೆ ಸುಧರ್ಮ ಸಾಂಸ್ಕೃತಿಕ ಸಂಘದ ವತಿಯಿಂದ ಹಿರಿಯ ಲೇಖಕಿ ಹಾಗೂ ಪ್ರವಚನಾಕಾರರಾದ ಎಂ ನಾಗರತ್ನ ಅವರಿಗೆ ಸುಧರ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿ, ಜಾನಪದನೃತ್ಯ, ಸಮೂಹ ಗಾಯನ ಸಂಸ್ಕೃತಿ  ನಾಟಕ ಪ್ರದರ್ಶನ, ಏಕಪಪಾತ್ರ ಅಭಿನಯ, ನೃತ್ಯ, ಪ್ರಶಸ್ತಿ ಪ್ರಧಾನ ಜರುಗಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಉಪನ್ಯಾಸಕರು ಹಾಗೂ ಕನ್ನಡ ಪರ ಹೋರಾಟಗಾರರು ವಹಿಸಿಕೊಂಡಿದ್ದರು  ಉದ್ಘಾಟನೆ ಯನ್ನು, ಲಾಸ್ಯ ಸಾಂಸ್ಕೃತಿಕ ಪ್ರತಿಷ್ಠಾನದ  ಅಧ್ಯಕ್ಷರು ಶ್ರೀಮತಿ ಡಾ. ಆರ್ ಅಂಬುಜಾಕ್ಷಿ ಬೀರೇಶ್ ನೆರವೇರಿಸಿಕೊಟ್ಟರು 4 ಕೃತಿಗಳನ್ನು ಚುಟುಕು ಕವಯತ್ರಿ, ಲೇಖಕಿ ಪದ್ಮಾವತಿ ಚಂದ್ರು ಅವರುಪರಿಚಯ ಮಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಡಾ. ಕುಮಾರ್ ಬಿ ಡಾ. ಗೋಪಿನಾಥ್ ಎಸ್ ಎಂ ಭಾಗವಹಿಸಿದ್ದರು  ಯುವ ಸಾಹಿತಿ ನಳಿನಾ ಡಿ  ಅವರು ಮಾತನಾಡಿ, ತಮ್ಮ ವೃತ್ತಿಯಲ್ಲಿ ಬಂದ ಅನುಭವದಿಂದ  ಜನ ಸಾಮಾನ್ಯರಿಗೆ  ಬದುಕುವ ಕಲೆ ಹಾಗೂ ಹೆಣ್ಣು ಮಕ್ಕಳ ರಕ್ಷಣೆಯತ್ತ ಎಲ್ಲರ ಚಿತ್ತಾವಿರಬೇಕು ಹೆಣ್ಣು ಮಕ್ಕಳಿಗೆ ಬದುಕಿಗೆ ಧೈರ್ಯ ನೀಡಬೇಕು  ಇತೀಚೆಗೆ  ಹೆಣ್ಣು ಮಕ್ಕಳು ಸೂಕ್ಷ್ಮತೆಗೆ ತವರು ಮನೆಯವರು ಆಶ್ರಯ ನೀಡಬೇಕು ಇದು ಕೂಡ ಸಾಮಾಜಿಕ ಚಿಂತನೆಯ ಬಹು ಮುಖ್ಯ ಭಾಗವಾಗಿದೆ  ಎಂದರು. ಸಮಾಜದಲ್ಲಿ ಹೆಣ್ಣಿನ ಸೂಚನೆ ನಿರಂತರವಾಗಿ ನಡೆಯುತ್ತಿದೆ 11ನೇ ಶತಮಾನದಲ್ಲಿ ನಡೆಯುತ್ತಿರುವ ಹಾಗೆ ಪ್ರಸ್ತುತ ಕಾಲಘಟ್ಟದಲ್ಲಿಯೂ ಸಹ ಹೆಣ್ಣಿನ ಮೇಲೆ ನಿರಂತರವಾಗಿ ದೌರ್ಜನ್ಯಗಳು ಶೋಷಣೆಗಳು ನಡೆಯುತ್ತಲೇ ಇವೆ ಅದರ ಬಗ್ಗೆ ಚಕಾರ ಎತ್ತುವವರು ಯಾರು ಇಲ್ಲದಂತಾಗಿರುವುದು ಬೇಸರದ ಸಂಗತಿಯಾಗಿದೆ ಕಾನೂನು ಕಟ್ಟಡಗಳು ಇದ್ದರೂ ಸಹ ನರಮಾತ್ರಕ್ಕೆ ಇರುವುದು ತಿಳಿದು ಬರುತ್ತದೆ.


 ಸಾಹಿತಿಗಳು ಉಪನ್ಯಾಸಕರು ಆದ ಪದ್ಮಲತಾ ಮೋಹನ್ ಅವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೋಷಕರ ಜವಾಬ್ದಾರಿಯನ್ನು ಎಚ್ಚರಿಸಿದ್ದರು. ಈ ಸಮಾಜಕ್ಕೆ ಪೋಷಕರು ಸಂಪೂರ್ಣ ಮಕ್ಕಳ ಜವಾಬ್ದಾರಿ ಹೊತ್ತಾರೆ  ಸಮಾಜ ಸುಧಾರಣೆ ಸಾಧ್ಯ ಎಂದರು.ವಿವಿಧ ಕ್ಷೇತ್ರದಿಂದ ಆಗಮಿಸಿದ್ದ ಗಣ್ಯರ ಮಾತು ಸಭೆಗೆ ಶೋಭೆ ತಂದಿತು. ಸಾಹಿತ್ಯ ಪ್ರಜ್ಞೆ ಮೂಡಿಸುವಲ್ಲಿನ ಮಾತು ಸಭಿಕರ ಗಮನ ಸೆಳೆಯುವಂತಿತ್ತು..


 ಮೋನಿಕಾ ತಂಡ, ಯಶೋದಾ ತಂಡ, ಶೈಲಾ ಹೆಚ್ ಪಿ ಇವರುಗಳ ಗಾಯನ ಮತ್ತು ನೃತ್ಯ ಅಮೋಘವಾಗಿ ಮತ್ತು ಮಧುರವಾಗಿ ಕೂಡಿತ್ತು.ವೇದಿಕೆಯಲ್ಲಿ ಸಾಲುಮರದ ತಿಮ್ಮಕ್ಕನವರ ಏಕಪಾತ್ರ ಅಭಿನಯವನ್ನು ರಾಜಮ್ಮನವರು ಅದ್ಭುತವಾಗಿ ನಟಿಸಿದರು.ಮಹಿಳಾ ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ಸಾಹಿತಿ,ಲೇಖಕಿ ಮಾನಸ ಕೆ ಕೆ ವಹಿಸಿಕೊಂಡು ನುರಿತ ಕವಯತ್ರಿಯರ ಕವಿತೆಗಳು ಹೆಣ್ಣಿನ ಬದುಕಿನ ಸತ್ವವನ್ನು ಮತ್ತು  ಹೆಣ್ಣಿನ ಸಾರ್ಥಕ ಬದುಕಿನ  ಎಳೆಯನ್ನು ತೆರೆದಿಟ್ಟಿತ್ತು.


ಈ ಎಲ್ಲಾ ಕಾರ್ಯಕ್ರಮದ ನಿರೂಪನೆಯನ್ನು  ಅಚ್ಚುಕಟ್ಟಾಗಿ ಶ್ರೀ ಶಿವಾನಂದ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಯು ಏನ್ ಸುಧಾರ್ಮನ್ ನೆರವೇರಿಸಿಕೊಟ್ಟರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ