LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಂದ ಮಕ್ಕಳಿಗೆ ಸಮವಸ್ತ್ರ ನೋಟ್ ಬುಕ್ ವಿತರಣೆ

ಬೆಂಗಳೂರು: ಆಡುಗೋಡಿಯ CAR ವಸತಿ ಸಮುಚ್ಚಾಯದ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯಲ್ಲಿ  (MARP Lane) ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ  ಮಕ್ಕಳಿಗೆ ಪುಸ್ತಕ,ಸಮವಸ್ರ್ತ,ನೀಡಲಾಯಿತು.


ನಂತರ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಾದರಿಯನ್ನಾಗಿ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ಆಯಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ,ಪಾಲಿಕೆ ಮಾಜಿ ಸದಸ್ಯರಿಗೆ ನೀಡಲಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಯಾವ ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲಾ ಎನ್ನುವ ನಿಟ್ಟಿನಲ್ಲಿ  ಅಭಿವೃದ್ದಿ ಮಾಡಲಾಗಿದೆ.


ಅದೇ ರೀತಿ ಆಡುಗೋಡಿಯ CAR ಕ್ವಾಟ್ರ್ಸ ನಲ್ಲಿರುವ MARP ,ಶಾಲೆಯ ಉಸ್ತುವಾರಿಯನ್ನು ಮಾಜಿ ಪಾಲಿಕೆ ಸದಸ್ಯ ಆಡಿಗೋಡಿ ಮೋಹನ್ ಅವರಿಗೆ ನೀಡಿದ್ದು ಅವರು ಶ್ರಮವಹಿಸಿ ಇಡೀ ಶಾಲೆಯ ಸ್ಥಿತಿಗತಿಯನ್ನು ತಿಳಿದುಕೊಂಡು ನಿರಂತರವಾಗಿ ಶಾಲೆ ಬೆಳೆಸುವ  ಕಾಯಕದಲ್ಲಿ ತೊಡಗಿದ್ದಾರೆ. ಯಾವ ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲಾ  ಎನ್ನುವ ಹಾಗೆ ಕೆಲಸ ಕಾರ್ಯ ಮಾಡಿದ್ದಾರೆ.


ನಂತರ ಮಾಜಿ ಪಾಲಿಕೆ ಸದಸ್ಯ ಮೋಹನ್ ಬಿ ಮಾತನಾಡಿ, ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ  ಶಿಕ್ಷಣಕ್ಕೆ  ಸಾಕಷ್ಟು ಮಹತ್ವನ್ನು ಕೊಟ್ಟು ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ಅದರಲ್ಲೂ ಕ್ಷೇತ್ರದ ಮುಖಂಡರಿಗೆ ಒಂದೊಂದು ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಂಡು ನಿರ್ವಹಣೆ ಜವಾಬ್ದಾರಿ ನೀಡಿದ್ದಾರೆ. ಅವು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿದ್ದು  ಅವರ ಹೆಗ್ಗಳಿಕೆಯಾಗಿದೆ.


ಆಡುಗೋಡಿಯ CAR ಪೋಲೀಸ್ ವಸತಿ ಸಮುಚ್ಚಾಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ ನೀಡಿದರು. ಅಲ್ಲದೆ ಆಡುಗೋಡಿ ಶಾಲೆಯಲ್ಲಿ ಶಿಕ್ಷಕರು ನಿವೃತ್ತರಾದರೆ ಅವರಿಗೆ ಬೀಳ್ಕೊಡುಗೆ ನೀಡುವ ಸಂಪ್ರದಾಯ ಇದೆ, ಅದೇರೀತಿ ಆಡುಗೋಡಿ ಮತ್ತು ಡೈರಿ ಶಾಲೆಯಲ್ಲಿ ಸತಥ 25 ವರ್ಷಗಳ ಕಾಲ ಸೇವೆ ಮಾಡಿ ನಿವೃತ್ತಿಯಾಗಿರುವ ಮುಖ್ಯೋಪದ್ಯಾನಿಯರಾದ ಶಶಿಕಲಾ ಹಾಗೂ ಮೀನಾಕ್ಷಿ ಜೆ ಅವರಿಗೆ ಸನಗಮಾನ ಮಾಡಿ ಬೀಳ್ಕೊಡಲಾಯಿತು.


ಕಾರ್ಯಕ್ರಮದಲ್ಲಿ ಆಡುಗೋಡಿಯ CAR ದಕ್ಷಿಣ DCP ಚೆನ್ನವೀರಪ್ಪ ಹಡಪದ, ACP ಸುರೇಶ್ ನಾಯಕ್ ,BEO ರಾಮಮೂರ್ತಿ, ಕೃಷ್ಣ ಮೂರ್ತಿ MRPL ಶಾಲೆಯ HM, ಈಜಿಪುರ ಎಲ್ ಆರ್ ನಗರದ HM ಸ್ಟೆಪೀಲಾ, ಶ್ರೀ ವಾಸವಿ ಅನ್ನದಾನ ಟ್ರಸ್ಟ್ ನ ಸೀತರಾಮಯ್ಯ, ರಾಮಸ್ವಾಮಿ,ವಿಜಯ್ ಕುಮಾರ್, ಜಯಮಾಲ, ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆನಂದ್, ಮಾಜಿ ಪಾಲಿಕೆ ಸದಸ್ಯೆ ಮಂಜುಳಾ ಸಂಪತ್,ಟಿ.ನಳಿನಾ ದೇವಿ ಮೋಹನ್ ಆಡುಗೋಡಿ ಅಭ್ಯರ್ಥಿ.


ಸುರೇಶ್ ನಾಯಕ್, ರೇವಮ್ಮ, ತ್ಯಾಗರಾಜ್ , ಪರಮೇಶ್ವರ್, ಶ್ರೀನಿವಾಸ್, ಅಲ್ಲದೆ ಆಡುಗೋಡಿ,ಕೋರಮಂಗಲ, ಈಜಿಪುರ ಸೇರಿದಂತೆ ಅನೇಕ ಶಾಲೆಯ HM ಗಳಾದ CRP ರೀಟಾ, ಸುಧಾ, ಮಹಿಳಾ ಅಧ್ಯಕ್ಷರಾದ ಮಂಜುಳಾ  ಚಂದ್ರಶೇಕರ್ , ರಂಗಸ್ವಾಮಿ,ಸಿಂತ್ಯ ವಿಲ್ಮಾ ಡಿಸಿಲ್ಲಾ ಸೇರಿದಂತೆ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು, ಎಲ್ಲಾ ಶಾಲೆಯ ಶಿಕ್ಷಕರು,HM ಅವರು ಉಪಸ್ಥಿತರಿದ್ದರು.


ಇನ್ನೂ ಇದೆ ವೇಳೆ ಸಾಹಸ ತಂಡದವರಿಂದ ಆಡುಗೋಡಿಯ ಜನರಿಗೆ ಹಾಗೂ ಸಾರ್ವಜನಿಕರಿಗೆ ಸ್ವತಹ ಮನೆಯಲ್ಲಿಯೇ ಹೇಗೆ ಗೊಬ್ಬರವನ್ನು ಮಾಡುವ ವಿಧಾನದ ಬಗ್ಗೆ ತಿಳಿಸಿಕೊಟ್ಟರು ಹಾಗೆ ಗೊಬ್ಬರ ಮಾಡುವ ಪರಿಕರಗಳನ್ನು ಸಾರ್ವಜನಿಕರಿಗೆ ಸಾಹಸ ಸಂಸ್ಥೆಯಿಂದ ನೀಡಲಾಯಿತು.


ಕಾರ್ಯಕ್ರಮದಲ್ಲಿ ಸಮವಹಿಸಿ ಶಾಲೆಯ ಉಲತೀಕರಣಕ್ಕೆ ಕಾರಣರಾದ ಪಾಲಿಕೆಯ ಮಾಜಿ ಸದಸ್ಯರಾದ ಬಿ ಮೋಹನ್ ಹಾಗೂ ಪತ್ತೆ ಹಾಗೂ ಆಡುಗೋಡಿ ಕಾಂಗ್ರೆಸ್ ಅಭ್ಯರ್ಥಿ ಟಿ ನಳಿನ ದೇವಿ ಮೋಹನ್ ದಂಪತಿಯನ್ನ ಶಾಲೆಯ ಶಿಕ್ಷಕರು ಕಾರ್ಯಕರ್ತರು ಎಲ್ಲರೂ ಒಟ್ಟುಗೂಡಿ ಸನ್ಮಾನವನ್ನು ಸಹ ಮಾಡಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ