LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

79ನೇ ಸ್ವಾತಂತ್ರ್ಯ ದಿನಾಚರಣೆ :KSMPLWCST ವತಿಯಿಂದ ರೋಗಿಗಳಿಗೆ ಹಣ್ಣು ವಿತರಣೆ

ಬೆಂಗಳೂರು : ಕರ್ನಾಟಕ ರಾಜ್ಯ ವಿವಿಧ ವರ್ಗಗಳ ಕೂಲಿ ಕಾರ್ಮಿಕರ ಚಾರಿಟೇಬಲ್ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.


ಸೇವಾ ಟ್ರಸ್ಟ್ ನ ಸಂಸ್ಥಾಪಕ ಮುಖ್ಯಸ್ಥರಾದ ಬಿ ಎಲ್ ಪರಮೇಶ್ ಸಮಾಜಮುಖಿ ಕಾರ್ಯಕ್ರಮ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬಡ ಕೂಲಿ ಕಾರ್ಮಿಕರ ಪರವಾಗಿ ಅವರ ಸಹಾಯಕ್ಕೆ ನಾವು ನಿಂತಿದ್ದು ಯಾರ ಅನುದಾನವಿಲ್ಲದೆ ಯಾರ ಪ್ರತಿಫಲ ಅಪೇಕ್ಷೆಗಳಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಬಡ ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿತ್ಯ ಕಾಯಕವಾಗಿ ಶ್ರಮಿಸುತ್ತಿದ್ದೇವೆ ಎಂದರು.


ಸ್ವಾತಂತ್ರ್ಯ ದಿನಾಚರಣೆ, 2000 ಹಣ್ಣು ವಿತರಣೆ:


ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ನಮ್ಮ ಸೇವಾ ಸಮಿತಿಯ ಪದಾಧಿಕಾರಿಗಳು ಸುಮಾರು 2000 ಕ್ಕಿಂತ ಹೆಚ್ಚು ಸೇಬು ಹಾಗೂ ಮೂಸಂಬಿ ಹಣ್ಣುಗಳನ್ನು ರೋಗಿಗಳಿಗೆ, ಪುರೋಹಿಗಳ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ವಿತರಣೆ ವಿತರಣೆ ಮಾಡಿದರು.


ಸಹಾಯ ಹಸ್ತ ನೀಡಿದರೆ ಸಮಾಜ ಸೇವೆ ಮತ್ತಷ್ಟು ಹೆಚ್ಚಳ


ನಮ್ಮ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು ಸರ್ಕಾರಗಳಾಗಲಿ ಸಂಘ ಸಂಸ್ಥೆಗಳಾಗಲಿ ಯಾವುದೇ ರೀತಿಯಿಂದಲೂ ಸಹ ಸಹಾಯ ಹಸ್ತ ನೀಡಿದರೆ ನಮ್ಮ ಸಮಾಜಮುಖಿ ಸೇವೆಯು ದುಪ್ಪಟ್ಟಾಗಲಿದೆ ಎಂದು ತಿಳಿಸಿದರು. ನಾನು ಒಬ್ಬ ಕೂಲಿ ಕಾರ್ಮಿಕನಾಗಿ ಕೂಲಿ ಕಾರ್ಮಿಕರ ಸಮಸ್ಯೆ ಬದುಕು ಭವಣೆ ನನಗೆ ಚೆನ್ನಾಗಿ ಅರಿವಿದೆ ಹೀಗಾಗಿ ಅವರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎನ್ನುವ ನಿಟ್ಟಿನಲ್ಲಿ ಅಳಿಲು ಸೇವೆ ಮಾಡಲು ಸುಮಾರು ಹದಿನೈದು ವರ್ಷಗಳಿಂದ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ.


ಇನ್ನು ಇದೇ ವೇಳೆ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಪರಮೇಶ್ವರ್ ಅವರ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿ, ಪರಮೇಶ್ ಅವರ ಬೆನ್ನಿಗೆ ಸಂಸ್ಥೆಯ ಪದಾಧಿಕಾರಿಗಳು ನಿಂತು ಅವರ ಹೆಗಲಿಗೆ ಹೆಗಲು ಕೊಟ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವುದು ನಮಗೆ ಅತಿ ಸಂತೋಷದಾಯಕವಾಗಿದ್ದು ಇನ್ನು ಮುಂದೆ ಇನ್ನೂ ಹಲವು ರೀತಿಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಬಡಬಗ್ಗರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ.


ಕೂಲಿ ಕಾರ್ಮಿಕರ ಮಕ್ಕಳಿಗೂ ಸಾರ್ವಜನಿಕರಿಗೂ ಸಹಾಯ ಹಸ್ತ:


ಬರೀ ಕೂಲಿ ಕಾರ್ಮಿಕರಿಗೆ ಅಲ್ಲದೆ ಕೂಲಿ ಕಾರ್ಮಿಕರ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಸಮವಸ್ತ್ರಗಳನ್ನು ಸಹ ನೀಡುತ್ತಾ ಬಂದಿದ್ದೇವೆ. ಹಲವು ಸಮಾಜಮುಖಿ ಕಾರ್ಯಗಳನ್ನು 15 ವರ್ಷಗಳಿಂದ ಎಲೆಮರೆಕಾಯಿಯಂತೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು. ಇಲ್ಲಿಯ ತನಕ ನಮ್ಮನ್ನು ಯಾರೂ ಸಹ ಗುರುತಿಸುವ ಕಾರ್ಯವನ್ನು ಮಾಡಿಲ್ಲ. ಸರ್ಕಾರವು ಸಹ ಇದರ ಬಗ್ಗೆ ಎಚ್ಚೆತ್ತುಕೊಂಡು ನಮಗೆ ಸಹಾಯ ಸಹಕಾರ ನೀಡಿದರೆ ನಮ್ಮಂತಹ ಸಂಘಟನೆಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಲು ಮುಂದಾಗುತ್ತವೆ ಎಂದು ತಿಳಿಸಿದರು.


ದೊಡ್ಡ ಸಮಾವೇಶ ಮಾಡುವ ಗುರಿ:


ಕೂಲಿ ಕಾರ್ಮಿಕರ ಎಲ್ಲರನ್ನು ಸಹ ಒಟ್ಟು ಮಾಡಿಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ದೊಡ್ಡ ಮಟ್ಟದಲ್ಲಿ ಸಮಾವೇಶವನ್ನು ಮಾಡುವುದಾಗಿ ಇದೆ ವೇಳೆ ಪರಮೇಶ್ ಅವರು ತಿಳಿಸಿದರು.


ಈ ವೇಳೆ  ಪರಮೇಶ್, ಮುಖ್ಯಸ್ಥರು,  ಪರಮೇಶ್ ಅವರ ಧರ್ಮಪತ್ನಿ ಮಕ್ಕಳು , ರವಿ ಕುಮಾರ್, ಗೌರವ ಅಧ್ಯಕ್ಷರು, ಶೈಲಜಾ, ಮಹಿಳಾ ಕಾರ್ಯದರ್ಶಿ, ನೀಲಮ್ಮ ಕೆ ಆರ್, ಉಪಾಧ್ಯಕ್ಷರು, ಬಿ.ಚಂದ್ರ ಬಾಯ್, ಅಧ್ಯಕ್ಷರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು  ಇದೇ ವೇಳೆ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ