
ಹಿಂದೂ ಜನಜಾಗೃತಿ ಸಮಿತಿಯಿಂದ ಹನುಮಂತನ ಮಂದಿರದಲ್ಲಿ ವಿಶೇಷ ಪೂಜಾ ಕನ್ಕಾರಿಗಳನ್ನು ಮಾಡಿ ಶಾಂತಿ ಸಂದೇಶವನ್ನು ಸಾರಿದರು,ಇಂತಹ ಸಮಯದಲ್ಲಿ ಪ್ರತಿಯೊಬ್ಬ ಹಿಂದೂವಿನಲ್ಲಿ ಮಾರುತಿಯಂತಹ ಶೌರ್ಯ, ಶಕ್ತಿ ಮತ್ತು ಭಕ್ತಿಯ ಜಾಗೃತಿಯಾಗಲಿ ಹಾಗೂ ಮುಂಬರುವ ಕಠಿಣ ಸಮಯದಲ್ಲಿ ಅವರ ಆಶೀರ್ವಾದದಿಂದ ಹಿಂದೂಗಳ ವಿಜಯವು ಖಚಿತವಾಗಲಿ ಎನ್ನುವ ಸಂಕಲ್ಪದೊಂದಿಗೆ, ಶ್ರೀ ಹನುಮ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ 850 ಸ್ಥಳಗಳಲ್ಲಿ ಹಾಗೂ ಬೆಂಗಳೂರಿನ ಹಲವು ಕಡೆಗಳಲ್ಲಿ ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು.

‘ಗದಾಪೂಜೆ’ ವಿಧಿ, ಶ್ರೀಹನುಮಂತನ ಆರತಿ, ಮಾರುತಿ ಸ್ತೋತ್ರ ಪಠಣ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ‘ಶ್ರೀ ಹನುಮತೇ ನಮಃ’ ಎಂಬ ಸಾಮೂಹಿಕ ನಾಮಜಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ಸ್ವೀಕರಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯು ಕಳೆದ 4 ವರ್ಷಗಳಿಂದ ದೇಶಾದ್ಯಂತ ಸಾಮೂಹಿಕ ‘ಗದಾಪೂಜೆ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದು, ಈ ವರ್ಷವೂ ಹಿಂದುತ್ವನಿಷ್ಠರು ಮತ್ತು ಶ್ರದ್ಧಾಳುಗಳ ಉತ್ಸಾಹಭರಿತ ಸಹಭಾಗಿತ್ವ ಕಂಡುಬಂದಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.