LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ  ವಾರ್ಷಿಕೋತ್ಸವ ಆಚರಣೆ

ಅಬ್ಬಾಸ್ ಖಾನ್ ವಿದ್ಯಾ ಸಂಸ್ಥೆಯಲ್ಲಿ ಜ್ಞಾನಾರ್ಜನೆಗೆ ವಿಫುಲ ಅವಕಾಶಗಳಿವೆ. ಮಕ್ಕಳು ಅರ್ಥಮಾಡಿಕೊಂಡು ಪೋಷಕರಿಗೆ ನೆರಳಾಗಬೇಕೆ ಹೊರತು ಹೊರೆಯಾಗಬಾರದು. ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಸಾಧನೆ ಮಾಡಬೇಕು

ಬೆಂಗಳೂರು: ನಗರದ ಕಬ್ಬನ್‌ಪೇಟೆಯಲ್ಲಿರುವ Abbas Khan College for Women (ಅಬ್ಬಾಸ್ ಖಾನ್ ಮಹಿಳಾ ಕಾಲೇಜು) ವತಿಯಿಂದ ಕಾಲೇಜು ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ, ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಇಂದಿನ ಕಾಲದಲ್ಲಿ ಉನ್ನತ ಶಿಕ್ಷಣ ಅತ್ಯಂತ ಅಗತ್ಯವಾಗಿದೆ, ಯಾರಿಗೂ ಹೆದರುವ ಅವಶ್ಯಕಥೆಯಿಲ್ಲ, ಧೈರ್ಯವಾಗಿ ಮುನ್ನುಗ್ಗಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.news_1779392079_2_384.webpಮಹಿಳೆಯರು ಎಲ್ಲಿಯೂ ಸೋಲಭಾರದು,ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿರುವ ಕಾಲಘಟ್ಟದಲ್ಲಿ  ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಂ.ಎ ಅಧ್ಯಕ್ಷ  ಫಾರೂಕ್ ಮಹಮೂದ್ ವಹಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು, ಶಿಕ್ಷಣ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು, ಎಂದು ಹೇಳಿದರು.

 

ಸಂಸ್ಥೆಯ  PU  ಕಾಲೇಜಿನ ಪ್ರಾಂಶುಪಾಲೆ ಪ್ರೊ.ಡಾ.ಎಂ.ಎಸ್.ವಿದ್ಯಾ ಮಾತನಾಡಿ, ಮಹಿಳೆಯರಿಗೆ ವಿಫುಲ ಅವಕಾಶಗಳಿವೆ ಅದನ್ನು ಬಳಸಿಕೊಳ್ಳುವ ಬಗ್ಗೆ ತಿಳಿದಿರಬೇಕು‌. ಎಲ್ಲಾ ರಂಗದಲ್ಲಿ ಮಹಿಳೆಯರು ಮುಂದೆ ಇದ್ದಾರೆ, ಪುರುಷರಿಗೆ ಸಮಾನವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಉದ್ಯೊಗದಲ್ಲಿ ಮಹಿಳೆಯರಿಗೆ ಮೀಸಲಾತಿ ಇದೆ.

news_1779392080_3_492.webpಕಷ್ಟಪಟ್ಟು ಓದಿ ಅತ್ಯುನ್ನತ ಹುದ್ದೆಗಳಿಗೆ ಸೇರಿಕೊಂಡು ಇತರರಿಗೆ ಮಾದರಿಯಾಗಬೇಕು. ಅಬ್ಬಾಸ್ ಖಾನ್ ವಿದ್ಯಾ ಸಂಸ್ಥೆಯಲ್ಲಿ ಜ್ಞಾನಾರ್ಜನೆಗೆ ವಿಫುಲ ಅವಕಾಶಗಳಿವೆ. ಮಕ್ಕಳು ಅರ್ಥಮಾಡಿಕೊಂಡು ಪೋಷಕರಿಗೆ ನೆರಳಾಗಬೇಕೆ ಹೊರತು ಹೊರೆಯಾಗಬಾರದು. ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 

ಈ ಸಂದರ್ಭದಲ್ಲಿ ಸಿಎಂಎ ಉಪಾಧ್ಯಕ್ಷರಾದ ಸಯ್ಯದ್ ನೂರುಲ್ ಅಮೀನ್ ಹಾಗೂ ಮನ್ಸೂದ್ ಅಲಿ ಖಾನ್, ಸಯ್ಯದ್ ಮುರ್ತಜಾ ಹುಸೇನ್, ಖಜಾಂಚಿ ಪ್ರಧಾನ ಕಾರ್ಯದರ್ಶಿ ಅತ್ತರ್ ಯೂನಸ್ ಮೊಹಮ್ಮದ್, ಜಂಟಿ ಕಾರ್ಯದರ್ಶಿಗಳಾದ  ಹುಸೈನ್ ಶರೀಫ್ ಮತ್ತು ರಿಯಾಜ್ ಅಹ್ಮದ್ ಶರೀಫ್ ಉಪಸ್ಥಿತರಿದ್ದರು.

 

ಉಪ ಪ್ರಾಂಶುಪಾಲೆ ಡಾ.ಸಯಿದಾ ತಬಸ್ಸುಮ್, PU  ಕಾಲೇಜಿನ ಪ್ರಾಂಶುಪಾಲೆ ಪ್ರೊ.ಡಾ.ಎಂ.ಎಸ್.ವಿದ್ಯಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.news_1779392079_1_755.webp

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಂದ ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಮತ್ತು ಪೋಷಕರು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಟ್ಟ ಗಾಯ,ಆಸಿಡ್ ದಾಳಿ,ಅಫಘಾತದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ  ವಾರ್ಷಿಕೋತ್ಸವ ಆಚರಣೆಸರ್ಕಾರಿ ಇಲಾಖೆಗಳು ಒಗ್ಗಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಮಕ್ಕಳಿಗೆ ಪೂರ್ಣ ಶಿಕ್ಷಣ: ರವಿಕುಮಾರ್ಆಸಕ್ತ ಮಹಿಳಾ ಪುರುಷರಿಗೆ ಮಹಿಳಾ ಕಲ್ಯಾಣ ಇಲಾಖೆಯಿಂದ ವಾಹನ ಚಾಲನೆ ತರಬೇತಿಗೆ ಅರ್ಜಿ ಆಹ್ವಾನಸ್ಥಳೀಯ ರೈತರಿಗೆ 2 ಬೆಳೆಗೆ ನೀರು ಗ್ಯಾರಂಟಿ: ಎಂ ಬಿ ಪಾಟೀಲ₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಮಾಜಿ ಆಗ್ತಾರೆ, ಹಾಲಿ ಆಗಿರಲ್ಲ ಎಂದು ನಿಖಿಲ್ ತಿರುಗೇಟು ದೇಶಾದ್ಯಂತ ಇ-ಬಸ್‌, ಇ-ಟ್ರಕ್‌ ಬಳಕೆಗೆ ವೇಗ; ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ136 ಶಾಸಕರಿದ್ರೂ ನೀವು ಹರಿದಿದ್ದೇನು? ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ನಿಖಿಲ್  ಟಾಂಗ್ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಎಂ ಪರಿಹಾರವಿದೆ ಚೆಕ್ ಹಸ್ತಾಂತರ