LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾರ್ ಕೌನ್ಸಿಲ್ ಚುನಾವಣೆ :ಹೈಕೋರ್ಟ್ನ ಹಿರಿಯ ವಕೀಲ ಗೋಪಾಲ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ 2026-2031 ಬಾರ್ ಕೌನ್ಸಿಲ್ ಸದಸ್ಯತ್ವ ಸ್ಥಾನಕ್ಕೆ ಹಿರಿಯ ಹೈಕೋರ್ಟ್ ವಕೀಲರಾದ ಗೋಪಾಲ್ ಅವರು ಬಹಳ ವಿಶೇಷತೆಯುಳ್ಳ ತಮ್ಮ ಮ್ಯಾನಿಫೆಸ್ಟ್ ಮೂಲಕ ವಕೀಲ ಮಿತ್ರರಿಗೆ ಮನವಿ ಮಾಡಿಕೊಂಡರು.


ಮಾರ್ಚ್ 3ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸತ್ವ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಈಗಾಗಲೇ ಸುಮಾರು 130 ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ ನಾಮ ಪತ್ರ ಸಲ್ಲಿಸಲು ಫೆಬ್ರವರಿ 10ರಂದು ಕೊನೆಯ ದಿನವಾಗಿದೆ, ಹೀಗಾಗಿ ವಕೀಲ ವೃತ್ತಿಯಲ್ಲಿ ಸಾಕಷ್ಟು ದಶಕಗಳ ಅನುಭವ ಇರುವ ಹುಚ್ಚ ನ್ಯಾಯದಲ್ಲಿ ತಮ್ಮ ಅನುಭವವನ್ನು ಹೊಂದಿದ್ದಾರೆ.


ಗೋಪಾಲ್ ಅವರು ಎಂಎ ಎಲ್‌ಎಲ್‌ಬಿ ವಿದ್ಯಾಭ್ಯಾಸವನ್ನು ಮಾಡಿದ್ದು ಹಿರಿಯ ನ್ಯಾಯವಾದಿಗಳತ್ರ ಸಾಕಷ್ಟು ಅನುಭವವನ್ನು ಪಡೆದು ಇದೀಗ ಹಿರಿಯ ವಕೀಲರಾಗಿ ದಶಕಗಳ ಕಾಲ ಹಲವು ನ್ಯಾಯಾಲಯಗಳಲ್ಲಿ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.


ಗೋಪಾಲ್ ಅವರು ವಕೀಲರ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶ ಹಾಗೂ ವಕೀಲರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸುಮಾರು 10 ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.


ಗೋಪಾಲ್ ಅವರ ವಕೀಲರಿಗಾಗಿ ನನ್ನ ಗುರಿ ಮತ್ತು ಉದ್ದೇಶಗಳು:


1. ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಹಳೆಯ ಕಟ್ಟಡವನ್ನು ತೆಗೆದು ಹೊಸ ಕಟ್ಟಡವನ್ನು 8 ಅಂತಸ್ತಿನವರೆಗೆ ನಿರ್ಮಾಣ ಮಾಡುವುದು ನನ್ನ ಮೊದಲ ಗುರಿಯಾಗಿರುತ್ತದೆ.


2. ಕರ್ನಾಟಕ ರಾಜ್ಯದ ವಕೀಲರ ಹಿತರಕ್ಷಣೆಗಾಗಿ ವಕೀಲರ ಕಲ್ಯಾಣ ನಿಧಿಯನ್ನು ರೂ.8 ಲಕ್ಷದಿಂದ, ರೂ.25 ಲಕ್ಷಗಳವರೆಗೆ ಏರಿಕೆ ಮಾಡುವುದು.


3. ಕರ್ನಾಟಕ ರಾಜ್ಯದ ಎಲ್ಲಾ ವಕೀಲರಿಗೆ ಅವರ ಕುಟುಂಬದ ಹಿತರಕ್ಷಣೆಗಾಗಿ ಆರೋಗ್ಯ ವಿಮೆಯನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಮಾಡಿಸುವುದು.


4. ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನಲ್ಲಿ ಯುವ ವಕೀಲರಿಗೆ ಉಚಿತವಾಗಿ ನೊಂದಣಿ . (Free Enrollment)


5. ಕರ್ನಾಟಕ ರಾಜ್ಯದ ಯುವ ವಕೀಲರು ಹೊರ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬರುವ ಯುವ ವಕೀಲರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸುವುದು.


6. ಕರ್ನಾಟಕ ರಾಜ್ಯದ ಜಿಲ್ಲಾವಾರು ಮತ್ತು ನಗರ ಬೆಂಗಳೂರಿನಲ್ಲಿ ಬರುವ ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್ ವಿಭಾಗಗಳಲ್ಲಿ ಯುವ ವಕೀಲರಿಗೆ ಹಿರಿಯ ಹಾಗೂ ನಿವೃತ್ತಿ ಹೊಂದಿದ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರತಿ 6 ತಿಂಗಳಿಗೊಮ್ಮೆ ಕಾನೂನಿನ ಮತ್ತು ಸಂವಿಧಾನದ ಆಶಯದಂತೆ ಯುವ ವಕೀಲರ ಪ್ರಗತಿಗಾಗಿ ಶಿಬಿರಗಳನ್ನು ಅಳವಡಿಸುವುದು.


7. ಕರ್ನಾಟಕ ರಾಜ್ಯ ವಕೀಲ ಪರಿಷತ್ ಸಂವಿಧಾನ ಒಂದು ಸಂವಿಧಾನಿಕ ಪೀಠವಾಗಿದ್ದು, ಪ್ರತಿವರ್ಷದಂತೆ ಸಂವಿಧಾನದ ದಿನಾಚರಣೆಯನ್ನು ಮಾಡುವುದು ಪ್ರಮುಖ ಗುರಿಯಾಗಿರುತ್ತದೆ.


8. ವಕೀಲ ಪರಿಷತ್‌ನಲ್ಲಿ ಬರುವ ಹಲವಾರು ಲೋಪದೋಷಗಳನ್ನು ಸರಿಪಡಿಸುವುದು ಮೂಲ ಗುರಿಯಾಗಿರುತ್ತದೆ.


9. ವಕೀಲ ಪರಿಷತ್‌ನಲ್ಲಿ ಇರುವ ಆಡಳಿತ ವ್ಯವಸ್ಥೆಯನ್ನು ಉತ್ತುಂಗಕ್ಕೆ ಏರಿಸುವುದು ಹಾಗೂ ವಕೀಲ ಪರಿಷತ್ ಆಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಗೆ ಸೂಕ್ತ ಸಲಹೆ, ಸೂಚನೆ, ನಿದರ್ಶನಗಳನ್ನು ಸಂವಿಧಾನಿಕ ಅಡಿಯಲ್ಲಿ ನೀಡುವುದು.


10. ಕರ್ನಾಟಕ ರಾಜ್ಯದ ಎಲ್ಲಾ ವಕೀಲರಿಗಾಗಿ, ವಕೀಲರಿಗೊಸ್ಕರ ಘನತೆ ಗೌರವ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಅಖಾಂಡತೆಯನ್ನು ಎತ್ತಿ ಹಿಡಿಯುವುದು ಮೂಲ ಗುರಿಯಾಗಿರುತ್ತದೆ.


ಇವೆಲ್ಲದರ ನಡುವೆ ಬಾರ್ ಕೌನ್ಸಿಲಗ ಆವರಣದಲ್ಲಿ  ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿದೆ. ಪ್ರಮುಖ ಉದ್ದೇಶವೆಂದರೆ ಬಾರ್ ಕೌನ್ಸಿಲ್ ಕಾಯ್ದೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಕೀಲರ ಪರಿಷತ್ ಕಚೇರಿಯಲ್ಲಿ ಅಳವಡಿಸದೇ ಇರುವುದು ವಕೀಲ ವೃತ್ತಿಗೆ ಆದಂತಹ ಅವಮಾನ ಎಂದು ತಿಳಿಸಿದರು.


ರಾಜ್ಯ ವಕೀಲರ ಪರಿಷತ್ತಲ್ಲಿ ಸಾಕಷ್ಟು ಲೋಪ ದೋಷಗಳು ಇದ್ದು ನಾನು ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ವಕೀಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನವನ್ನು ಸಂಗ್ರಹ ಮಾಡಿಕೊಂಡು ಪರಿಷತ್ತನ್ನುಕೆ ಕೊಂಡೊಯ್ಯುವ ಹಾಗೂ ವಕೀಲರಿಗೆ ಎಲ್ಲಾ ಆಯಾಮಗಳಲ್ಲಿ ಅನುಕೂಲಕರವಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.


ನನಗೆ ಬೆನ್ನೆಲುಬಾಗಿ ಕರ್ನಾಟಕ ರಜದ ಸಾಕಷ್ಟು ಜನ ವಕೀಲ ಮಿತ್ರರು ಬೆಂಬಲವಾಗಿ ನಿಂತಿದ್ದು ಅದರಲ್ಲಿ ಆನಂದ ಸಹ ಒಬ್ಬರಾಗಿದ್ದಾರೆ ಅಂಬೇಡ್ಕರ್ ಬುದ್ಧ ಬಸವ ತತ್ವಗಳ ಅನುಸಾರವಾಗಿ ಜೀವನದಲ್ಲಿ ರೂಡಿಸಿಕೊಂಡಿದ್ದು ಅವುಗಳನ್ನು ಪರಿಷತ್ನಲ್ಲು ಅಳವಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.


ವಕೀಲರ ಪರಿಷತ್ ನಲ್ಲಿ ಅವ್ಯವಹಾರಗಳ ಮಹಾಪೂರ;


ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಲ್ಲಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿದೆ ಹಲವು ವರ್ಷಗಳಿಂದ ಪರಿಷತ್ ನಲ್ಲಿ ಸಾಕಷ್ಟು ಅವ್ಯವಹಾರಗಳು ಆಗಿದ್ದು ಅಲ್ಲಿ ವಕೀಲರು ಹಾಗೂ ಅಧಿಕಾರಿಗಳು ವಜಾ ಆಗಿದ್ದಾರೆ, ಅದರಲ್ಲಿ ವಕೀಲರ ಕೈವಾಡ ಎದ್ದು ಕಾಣುತ್ತದೆ ಹಾಗೂ ಶಾಮೀಲು ಸಹ ಆಗಿದ್ದಾರೆ ಅವೆಲ್ಲವೂ ಸಹ ವಕೀಲ ವೃತ್ತಿಗೆ ಮಾರಕವಾಗಿವೆ ಹಾಗೂ ವಕೀಲರ ಕಲ್ಯಾಣಕ್ಕೆ ತೊಂದರೆ ಆಗುತ್ತಿದೆ ಎಂದರು.


ಹೀಗಾಗಿ ಕರ್ನಾಟಕ ರಾಜ್ಯ ವಕೀಲರ ಪ್ರಶಸ್ತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರವನ್ನು ನಮ್ಮ ವಕೀಲ ಮಿತ್ರರ ಸ್ನೇಹ ಬಳಗದ ಮೂಲಕ ಸಲ್ಲಿಸಿದ್ದೇನೆ ಪರಿಷತ್ ನಲ್ಲಿ ಬದಲಾವಣೆಯನ್ನು ತೆರವು ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ ಎಂದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ