LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ : ಎಂ ಬಿ ಪಾಟೀಲ

ಬೆಂಗಳೂರು: ಕಳೆದ ಹಣಕಾಸು ಸಾಲಿನಲ್ಲಿ ರಾಜ್ಯಕ್ಕೆ 12,939 ಮಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಬಂದಿದ್ದು, ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿದ್ದೇವೆ. ಕೇಂದ್ರ ಸರಕಾರವು 38 ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಹಲವು ವಲಯಗಳಲ್ಲಿ ರಫ್ತಿಗೆ ಯಥೇಚ್ಛ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದನ್ನು ಪರಿಣಾಮಕಾರಿ ಬಳಸಿಕೊಳ್ಳುವ ಮೂಲಕ ನಾವು ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.news_1793545692_2_883.webp

ಇಲ್ಲಿನ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಹಾಗೂ ರಾಜ್ಯದ ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಸಂಸ್ಥೆ ಮತ್ತು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟಗಳ ಸಹಯೋಗದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನ ಕುರಿತು ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಇತ್ತೀಚಿಗೆ ಸಂಯುಕ್ತ ಅರಬ್ ಸಂಸ್ಥಾನ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್, ಓಮಾನ್, ಯೂರೋಪಿಯನ್ ಒಕ್ಕೂಟ, ನ್ಯೂಜಿಲೆಂಡ್ ಸೇರಿದಂತೆ 38 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಸದ್ಯದಲ್ಲೇ ಅಮೆರಿಕದ ಜತೆಯೂ ಇಂತಹ ಒಪ್ಪಂದ ಅಂತಿಮರೂಪ ಪಡೆಯುವ ನಿರೀಕ್ಷೆ ಇದೆ. ಇದರಿಂದ ಸಹಜವಾಗಿಯೇ ನಮ್ಮ ಜಿಡಿಪಿ ವ್ಯಾಪ್ತಿ ಹಿಗ್ಗಲಿದ್ದು, ರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಉತ್ಪನ್ನಗಳು, ಕೃಷಿ ಮತ್ತು ಆಹಾರೋತ್ಪನ್ನಗಳು, ಜವಳಿ ಮತ್ತು ಸಿದ್ಧ ಉಡುಪು, ಸಾಗರೋತ್ಪನ್ನಗಳು, ಎಂಜಿನಿಯರಿಂಗ್ ಸಾಧನಗಳು ಮತ್ತು ಔಷಧ ಹಾಗೂ ಸಸ್ಯಾಧಾರಿತ ಉತ್ಪನ್ನಗಳ ರಫ್ತಿಗೆ ಒಳ್ಳೆಯ ಅವಕಾಶಗಳು ಸೃಷ್ಟಿಯಾಗಿವೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯವು ಐಟಿ, ಬಿಟಿ, ಸ್ವಾರ್ಟಪ್, ಏರೋಸ್ಪೇಸ್, ಇವಿ, ಜವಳಿ, ಪರಿಸರ ಸ್ನೇಹಿ ಇಂಧನ, ಸೆಮಿಕಂಡಕ್ಟರ್ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮರ್ಥ ನೀತಿಗಳನ್ನು ರೂಪಿಸಿದೆ. ಮರ್ಕಂಡೈಸ್ ರಫ್ತಿನಲ್ಲಿ ಕರ್ನಾಟಕವು 4ನೇ ಸ್ಥಾನದಲ್ಲಿದೆ. ಹೂಡಿಕೆ ಒಡಂಬಡಿಕೆಗಳಲ್ಲಿ ಹೆಚ್ಚಿನವನ್ನು ನೈಜ ಅರ್ಥದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಅವರು ನುಡಿದಿದ್ದಾರೆ.

ದೇಶದ ಒಟ್ಟು ಸಾಫ್ಟ್ವೇರ್ ಸಂಬಂಧಿತ ಸೇವೆಗಳ ರಫ್ತಿನ ಪಾಲಿನಲ್ಲಿ ರಾಜ್ಯವು ಶೇಕಡ 40ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದ ಕಂಪನಿಗಳಾದ ಫಾಕ್ಸ್ಕ ಕಾನ್, ಲ್ಯಾಮ್ ರೀಸರ್ಚ್, ಅಪ್ಲೈಡ್ ಮೆಟೀರಿಯಲ್ಸ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮುಂತಾದವು ನಮ್ಮಲ್ಲಿ ಹೂಡಿಕೆ ಮಾಡಿವೆ., ಇದರಿಂದಾಗಿ ಸ್ಥಳೀಯ ಪೂರೈಕೆದಾರರಿಗೂ ಸದವಕಾಶಗಳು ಸೃಷ್ಟಿಯಾಗುತ್ತಿವೆ. ಈಗ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.news_1793545692_1_861.webp

200ಕ್ಕೂ ಹೆಚ್ಚು ಉದ್ಯಮಿಗಳು, ರಫ್ತುದಾರರು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ , ಭಾರತ ವ್ಯಾಪಾರ ಉತ್ತೇಜನಾ ಸಂಘದ ಸಲಹೆಗಾರ್ತಿ ಡಾ.ತಮನ್ನಾ ಚತುರ್ವೇದಿ, ಜಂಟಿ ನಿರ್ದೇಶಕಿ ಸೋಮಾ ಚೌಧರಿ ಉಪ ಮಹಾನಿರ್ದೇಶಕ ಅರ್ಜುನ್ ಉಪಾಧ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಕೀಲರ ಮೇಲಿನ ಹಲ್ಲೆ ಕೊಲೆ ಕೊಲೆ ಯತ್ನಗಳಿಗೆ ಖಂಡನೆಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಮಾಡಲಾಗುವುದು: ಸಚಿವ ಕೆ. ಎಂ. ಶಿವಲಿಂಗೇಗೌಡಸಚಿವ ಕೆ. ಎಂ. ಶಿವಲಿಂಗೇಗೌಡ ಅವರಿಂದ ಹಸಿರು ಸಿರಿ ಸಾವಯವ ಗೊಬ್ಬರ ಉದ್ಘಾಟನೆಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ:  ಎಂ ಬಿ ಪಾಟೀಲಮಹಾರಾಷ್ಟ್ರದ ಕೃಷ್ಣಾ ನದಿ ನೀರು ತಿರುವು ಯೋಜನೆಗೆ ತೀವ್ರ ಆಕ್ಷೇಪ38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ : ಎಂ ಬಿ ಪಾಟೀಲಯಲಹಂಕ, ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ಕಳಾಮಂದಿರ್  (SSKL) ನ 87ನೇ ಮಳಿಗೆಕೃಪಾ ಆಳ್ವರಿಗೆ ಆರು ವರ್ಷ ಉಚ್ಚಾಟನೆಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ ಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್’ ಅನ್ನು ಬಿಡುಗಡೆ