LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಮಾಡಲಾಗುವುದು: ಸಚಿವ ಕೆ. ಎಂ. ಶಿವಲಿಂಗೇಗೌಡ

ಹಾಸನ:  ಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಪರಿವರ್ತಿಸುವ ನಿಟ್ಟಿನಲ್ಲಿ ಅನುಮೋದನೆ ಪಡೆದು ಕಾರ್ಯಗತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದರು.news_1793546879_1_831.webp

ನಗರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಸುಮಾರು 3 ಸಾವಿರ ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆಗೆ ಸಚಿವರು ಚಾಲನೆ ನೀಡಿದರು. ಬಳಿಕ ಮಾತನಾಡುತ್ತ ಹಾಸನದ ಎನ್‌.ಆರ್‌. ಸರ್ಕಲ್‌ನಲ್ಲಿ ಹೋಯ್ಸಳರ ಲಾಂಛನ ಸ್ಥಾಪನೆ ಮಾಡುವ ಕುರಿತು ಚಿಂತಿಸಲಾಗುವುದು. ಹಾಸನಕ್ಕೆ ಬಹುಮುಖ್ಯವಾಗಿ ಬೇಕಾಗಿರುವಂತಹ ನಾಲ್ಕು ಯೋಜನೆಗಳಾದ ವಿಮಾನ ನಿಲ್ದಾಣ, ಐಐಟಿ ಸ್ಥಾಪನೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ನೆನೆಗುದಿಗೆ ಬಿದ್ದಿರುವ ಹಾಸನ ವಿಮಾಣ ನಿಲ್ದಾಣದ ಕಾಮಗಾರಿ ಮರು ಆರಂಭಗೊಳ್ಳಲು ಅಗತ್ಯವಿರುವ ಧನ ಸಹಾಯ ಒದಗಿಸಲು ಹಾಗೂ ಎದುರಾಗಿರುವ ಅಡಚಣೆಗಳನ್ನು ಪರಿಹರಿಸಲು ಬದ್ಧನಾಗಿದ್ದೇನೆ. ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳುವ ಮೊದಲು ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಗುರಿಯನ್ನಿಟ್ಟುಕೊಂಡು ಕೆಲಸ ಆರಂಭಿಸಲಾಗಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟನಾ ಹಂತದಲ್ಲಿವೆ. ಇನ್ನು ಐಐಟಿಯನ್ನು ತರುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಹಾಸನಾಂಬ ಉತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಾದಿಗಳು ಸಂತೃಪ್ತಿಯೊಂದಿಗೆ ಹಿಂತಿರುಗುತ್ತಿದ್ದಾರೆ. ಕ್ರೀಡೋತ್ಸವ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಾರ್ಯಕ್ರಮಗಳು ಜನರನ್ನು ಹಾಸನ ಜಿಲ್ಲೆಗೆ ಕೈಬೀಸಿ ಕರೆಯುತ್ತಿವೆ ಎಂದರು.news_1793546879_2_142.webp

*ಕನ್ನಡ ಬಾವುಟಕ್ಕೆ ಮಾನ್ಯತೆ*
ಕರ್ನಾಟಕದ ಅಸ್ಮಿತೆಯಾಗಿರುವ ಕನ್ನಡ ಬಾವುಟಕ್ಕೆ ಪ್ರತ್ಯೇಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಶಾಸಕರಾದ ಸ್ವರೂಪ್‌ ಪ್ರಕಾಶ್‌, ಜಿಲ್ಲಾಧಿಕಾರಿ ಲತಾಕುಮಾರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಕೀಲರ ಮೇಲಿನ ಹಲ್ಲೆ ಕೊಲೆ ಕೊಲೆ ಯತ್ನಗಳಿಗೆ ಖಂಡನೆಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಮಾಡಲಾಗುವುದು: ಸಚಿವ ಕೆ. ಎಂ. ಶಿವಲಿಂಗೇಗೌಡಸಚಿವ ಕೆ. ಎಂ. ಶಿವಲಿಂಗೇಗೌಡ ಅವರಿಂದ ಹಸಿರು ಸಿರಿ ಸಾವಯವ ಗೊಬ್ಬರ ಉದ್ಘಾಟನೆಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ:  ಎಂ ಬಿ ಪಾಟೀಲಮಹಾರಾಷ್ಟ್ರದ ಕೃಷ್ಣಾ ನದಿ ನೀರು ತಿರುವು ಯೋಜನೆಗೆ ತೀವ್ರ ಆಕ್ಷೇಪ38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ : ಎಂ ಬಿ ಪಾಟೀಲಯಲಹಂಕ, ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ಕಳಾಮಂದಿರ್  (SSKL) ನ 87ನೇ ಮಳಿಗೆಕೃಪಾ ಆಳ್ವರಿಗೆ ಆರು ವರ್ಷ ಉಚ್ಚಾಟನೆಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ ಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್’ ಅನ್ನು ಬಿಡುಗಡೆ