ಹಾಸನ : ಮಾನ್ಯ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹಾಸನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಹಸಿಕಸದಿಂದ ವೈಜ್ಞಾನಿಕವಾಗಿ ತಯಾರಿಸಲಾದ ಹಸಿರು ಸಿರಿ ಸಾವಯವ ಗೊಬ್ಬರಕ್ಕೆ ಚಾಲನೆ ನೀಡಿದರು.
ಹಾಸನಾಂಬ ಉತ್ಸವದ ಪ್ರಯುಕ್ತ ಜಿಲ್ಲಾಡಳಿತವು ಸಾವಯವ ಗೊಬ್ಬರ ಮಾರಟ ಮಳಿಗೆಯನ್ನು ತೆರೆದಿದ್ದು, ಸ್ವಚ್ಛ ಹಾಸನ ಸುಂದರ ಹಾಸನ ಅಭಿಯಾನದಡಿ ತಯಾರಿಸಲಾದ ಈ ಸಾವಯವ ಗೊಬ್ಬರವು ಉತ್ಕೃಷ್ಟದ ಗುಣಮಟ್ಟವನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖರೀದಿಸಬೇಕು. ಕಸವನ್ನು ರಸವಾಗಿಸುಲ ಪಾಲಿಕೆಯ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದು ಕರೆನೀಡಿದರು.