ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಗರುಡಾಚಾರ್ ಅವರ ನೇತೃತ್ವದಲ್ಲಿ ಕಚೇರಿಯಲ್ಲಿ ಅದ್ದೂರಿಯಾಗಿ ಆಯಧ ಪೋಜೆ ಮಾಡಲಾಯಿತು. 
ನಗರದ ಚಿಕ್ಕಪೇಟೆ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಮುಂದೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಸೇರಿಕೊಂಡು 3 ಕಚೇರಿಯಲ್ಲಿ ಹಾಗೂ ವಾಹನಗಳಿಗೆ ವಿಶೇಷವಾಗಿ ಆಯಧ ಪೋಜೆಯನ್ನು ಮಾಡಲಾಯಿತು. ಅಲ್ಲದೆ ಕಚೇರಿಯಲ್ಲಿ ಆನೆ ಮೇಲೆ ಚಾಮುಂಡೇಶ್ವರಿ ಪೋಟು ಕೋರಿಸಿ ಫಲಪುಸ್ಪಗಳಿಂದ ಅಲಂಕಾರ ಮಾಡಲಾಯಿತು. ಅಲ್ಲದೆ ವಿಶೇಷ ಪೋಜಾಕೈಂಕರ್ಯಗಳು ನಡೆದವು.
ಪುರೋಹಿತರಿಂದ ಚಾಮುಂಡೇಶ್ವರಿಗೆ, ವಾಹನಗಳಿಗೆ ವಿಶೇಷ ಪೂಜೆಗಳು ನಡೆದವು,ವಾಹನಗಳಿಗೆ ಎಲ್ಲಿಯೂ ತೊಂದರೆಯಾಗದಿರಲಿ ಎಂದು ದೇವರಲ್ಲಿ ಬೇಡಿಕೊಂಡರು.
ನಂತರ ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು, ಕಚೇರಿ ಸಿಬ್ಬಂಧಿ ವರ್ಗದವರು,ಮಹಿಳೆಯರು, ಪೂಜಾ ಕಾರ್ಯದಲ್ಲಿ ಭಾಗಿಯಾದರು. ಅವರಿಗೆ ಶಾಸಕರು ಹಾಗು ಅವರ ಶ್ರೀಮತಿಯವರು ಕಾರ್ಯಕರ್ತರಿಗೆ ಹಿತೈಷಿಗಳಿಗೆ ಹುಡುಗೊರೆಯನ್ನು ನೀಡಿದರು. 
ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಲಘು ಉಪಹಾರ ನೀಡಿ ಸತ್ಕರಿಸಲಾಯಿತು. ಈ ವೇಳೆ ಕ್ಷೇತ್ರದ ಮಂಡಲ ಅಧ್ಯಕ್ಷ ಧನರಾಜ, ಕಚೇರಿಯ ಉಸ್ತುವಾರಿ ರಮೇಶ್ ಸೇರಿದಂತೆ ಅನೇಕರು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದರು.