ಬೆಂಗಳೂರು: ಶ್ರೀ ಸರಸ್ವತಿ ವಿದ್ಯಾ ಮಂದಿರ ಸಂಸ್ಥೆ ಯಾವುದೇ ಡೊನೇಷನ್ ತೆಗೆದುಕೊಳ್ಳದೆ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಇತರ ಶಾಲೆಗಳಿಗೆ ಮಾದರಿಯಾಗಿದೆ, ಮಕ್ಕಳಿಗೆ ಪೊಷಕರು ಒತ್ತಡ ಹೇರುವುದನ್ನು ಬಿಟ್ಟು ಅವರಿಗೆ ಇಷ್ಟಬಂದಹಾಗೆ ಬಿಡಿ ಎಂದು ಉದ್ಯಮಿ, ಪರಿಸರವಾದಿ ರೇವತಿ ಕಾಮತ್ ತಿಳಿಸಿದರು.
ಬೆಂಗಳೂರಿನ ವಾಣಿವಿಲಾಸ ರಸ್ತೆಯ ಶ್ರೀ ಸರಸ್ವತಿ ವಿದ್ಯಾ ಮಂದಿರ ಸಮೂಹ ಸಂಸ್ಥೆಯ 75 ನೇ ವರ್ಷದ ವಜ್ರ ಮಹೊತ್ಸವ ಆಚರಣೆ ಸಮಾರಂಭದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪೊಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲಿಯಾಗಲಿ ಒತ್ತಡ ಹಾಕುವುದನ್ನು ಬಿಡಬೇಕು, ಸ್ವತಂ ನಿರ್ಧಾರ ತೆಗೆದುಕೊಳ್ಳುವ ಹಾಗೆ ಬಿಡಬೇಕು, ಅದರಲ್ಲೂ ಓದಿನ ವಿಚಾರದಲ್ಲಿ ಅವರಿಗೆ ಸ್ವಾತಂತ್ರ್ಯ ಕೊಡಬೇಕು ಎಂದರು.
ಮಕ್ಕಳಿಗೆ ಯಾವುದು ಇಷ್ಟ ಇದೆಯೊ ಅದರ ಕಡೆ ಹೆಚ್ಚು ಗಮನ ಕೊಡಬೇಕು. ಅತ್ತಕಡೆ ಪೋಷಕರು ನಿಗಾ ವಹಿಸಬೇಕಾಗಿದೆ. ಪ್ರಸ್ತುತ ವಿದ್ಯಾ ಸಂಸ್ಥೆಗಳು ಮಾರುಕಟ್ಟೆಗಳಾಗಿವೆ, ಇಂತಹ ಸನ್ನಿವೇಶದಲ್ಲಿ ಶ್ರೀ ಸರಸ್ವತಿ ವಿದ್ಯಾ ಮಂದಿರ ಸಮೂಹ ಸಂಸ್ಥೆಯ ದೃಢ ನಿರ್ಧಾರದಿಂದ ಶಾಲೆಗಳಿಂದ ಹಣ ಮಾವುದೇ ಕಾಯಕವಲ್ಲ ಗುಣಮಟ್ಟದ ಶಿಕ್ಷಣ ಕೊಡುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ ಎನ್ನುವಹಾಗೆ ಸಂಸ್ಥೆಯನ್ನು 75 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ವಿದ್ಯಾ ಸಂಸ್ಥೆಯನ್ನು 75 ವರ್ಷಗಳ ಕಾಲ ನಡೆಸಿಕೊಂಡು ವಜ್ರ ಮಹೋತ್ಸವ ಆಚರಿಸಿಕೊಂಡು ಬಂದಿರುವುದು ಸುಲಭದ ಮಾತಲ್ಲ, ಶಾಲೆ ಪ್ರಾರಂಭವಾದ ದಿನದಿಂದ ಇಂದಿನ ತನಕ ಡೊನೇಷನ್ ಎಂಬುದು ದೂರದ ಮಾತಾಗಿದೆ. 
ಪ್ರಸ್ತುತ ಪ್ರಕೃತಿ ಹಾಳಾಗಿದೆ ಯಾವ ಸರ್ಕಾರಗಳು,ಜನರು, ಪರಿಸರ ರಕ್ಷಣೆ ಮಾಡದ ಹಾಗೆ ಹಾಗಿವೆ. ಎಲ್ಲವೂ ಕಲುಷಿತವಾಗಿದ್ದು, ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲರೂ ಸರ್ಕಾರವನ್ನು ನೆಚ್ಚಿಕೊಳ್ಳದೆ ತಮ್ಮ ದುಡಿದ ಸಂಪಾದನೆಯಲ್ಲಿ ಪ್ರತಿಯೊಬ್ಬರು 1ರೂಪಾಯಿ ಯಂತೆ ಸಂಗ್ರಹ ಮಾಡಿದರೆ ಕೊಟ್ಯಾಂತರ ಹಣ ಸಂಗ್ರಹವಾಗುತ್ತದೆ, ಯಾರ,ಯಾವುದೇ ಸಹಾಯವನ್ನು ತೆಗೆದುಕೊಳ್ಳದೆ ಪ್ರಕೃತಿಯನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಸಫಲರಾಗುತ್ತೇವೆ ಎಂದು ಕರೆ ನೀಡಿದರು.
ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯಾಗಿ ಕೆಲಸ ಮಾಡಿದ ಶಿಕ್ಷಕರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇನ್ನೂ ಇದೆ ವೇಳೆ ಸಂಸ್ಥೆಗೆ 75 ವರ್ಷ ತುಂಬಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಸಂಗೀತ ಕಚೇರಿ ಎಲ್ಲವೂ ಒಂದೇ ವೇದಿಕೆಯಲ್ಲಿ ನಡೆದವು, ಇನ್ನು ಪರಿಸರ ವದಕ್ಕೆ ಹಾಗೂ ಉದ್ಯಮಿ ರೇವತಿ ಕಾಮತ್ ಅವರು ಸ್ವತಹ ವೀಣೆಯನ್ನು ತುಂಬಿಸುವ ಮೂಲಕ ಸಂಗೀತ ಕಚೇರಿಯನ್ನು ಏರ್ಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹರೀಶ್ ನಾಗರಾಜ್ ಭಾಗಿ, ಇದೇ ವೇಳೆ ಸಂಸ್ಥೆ ನಿರ್ದೇಶಕಿ ಲಕ್ಷ್ಮಿ,ಸುಬ್ರಮಣ್ಯ ಶಾಸ್ರಿ,ಟ್ರಸ್ಟಿ,ನಿತಂಜನ್ ಸಂಸ್ಥೆ ಕಾರ್ಯದರ್ಶಿ,ಸತ್ಯನಾರಾಯಣ, ಸಂಸ್ಥೆಯ ಟ್ರಸ್ಟಿ
ಶ್ರೀ ಶಾರದಾ ವಿದ್ಯಾಮಂದಿರದಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಹಾಗೂ ಹಳೆ ಶಿಕ್ಷಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.