ಬೆಂಗಳೂರು: ಚಾರುವಸಂತ ಮಹಾ ಕಾವ್ಯ ಮೂಲ ಬಂಗಾಳಿ ಭಾಷೆಯಲ್ಲಿದ್ದರೂ ಸಹಾ ನಾಡಿನ ಜನತೆಗೆ ಒಂದೊಳ್ಳೆ ಪುಸ್ತಕ ಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಲ್ ಎನ್ ಮುಕುಂದರಾಜ್ ಅಭಿಪ್ರಾಯಪಟ್ಟರು.
ಕಮಲಾ ಹಂಪನ ಸಾಹಿತ್ಯ ವೇದಿಕೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ಚಾರುವಸಂತ (ದೇಸಿಕಾವ್ಯ) ಜನಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಖ್ಯಾತ ಸಾಹಿತಿ,ಕವಿ, ಸಂಶೋಧಕ ಹಂಪ ನಾಗರಾಜಯ್ಯ ಚಾರುವಸಂತ ಮಹಾಕಾವ್ಯವನ್ನು 23 ವರ್ಷಗಳ ಹಿಂದೆಯೇ ಬರೆದಿದ್ದಾರೆ, ನಮ್ಮ ಗುರುಗಳಾದ ನಾಗರಾಜಯ್ಯ, ಬಂಗಾಳಿ ಭಾಷೆಯನ್ನು ಅನುವಾದಿಸಿಕೊಂಡು ಕನ್ನಡಕ್ಕೆ ಭಾಷೆಯಲ್ಲಿ ಅರ್ಥಗರ್ಭಿತವಾಗಿ ಬರೆದಿದ್ದಾರೆ. ನಾಗರಾಜಯ್ಯ ಅವರ ಬದುಕು ಬವಣೆ ಹಾಗೂ ಅವರ ಪ್ರೇರಣೆಯಿಂದ ಕಾವ್ಯ, ನಾಟಕ, ಪುಸ್ತಕಗಳನ್ನು ನಾನು ಬರೆದಿದ್ದೇನೆ. ಅನುವಾದದ ಮೂಲಕ ಜಗತ್ತಿಗೆ ಸಾಕಷ್ಟು ವಿಚಾರಗಳನ್ನು ತೋರಿಸಬಹುದು, ಅನುವಾದಗಳಿಂದ ಒಳೆದು ಕೆಡುಕು ಎರಡು ಇರುತ್ತವೆ, ಇಡೀ ಅನುವಾದದ ಸಾರಾಂಶ ಬರೆಯುವ ಕಲೆಗಾರಿಕೆ ಅನುವ ವಾದಕರಲ್ಲಿ ಇರುತ್ತದೆ . ಎಷ್ಟೋ ಮೇದಾವಿಗಳಿಗೆ ನಮ್ಮದನ್ನು ನಾವು ಹೇಳಿಕೊಂಡಿಲ್ಲ, ಅದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಕನ್ನಡ ನಡೆದು ಬಂದ ದಾರಿ, ಆಧುನಿಕ ಮನಸ್ಸು, ಬುದ್ದಿ, ಎಲ್ಲವನ್ನು ಸಹ ಪುಸ್ತಕ ರೂಪದಲ್ಲಿ ಹೊರತದಿದ್ದಾರೆ.
ಚಾರುವಸಂತ ದೇಸಿ ಕಾವ್ಯ, ಇದೊಂದು ಪರಕಾಯ ಪ್ರವೇಶವಾಗಿದೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾತನಾಡಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ. ಬಂಗಾಳಿ ಭಾಷೆ ನಮಗೆ ಅರ್ಥವಾಗಿಲ್ಲ, ಆದರೂ ಒಂದು ಸುಂದರ ವಾಗಿದೆ. ಈ ಪುಸ್ತಕ 18ನೇ ಭಾಷೆಯಾಗಿದೆ.
ಚಾರುವಸಂತ ಸ್ವರ್ಗಕ್ಕೆ ಹೊದಾಗ ಇಲ್ಲಿಯೇ ಇರು, ಅಂದಾಗ ನಾನು ಭೂಮಿಗೆ ಹೋಗುತ್ತೇನೆ ಎಂದು ಹೇಳಿದರು. ಸ್ವರ್ಗಕ್ಕಿಂತ ನಮ್ಮ ಜನ್ಮ ಭೂಮಿ ಲೇಸು. ಕನ್ನಡಕ್ಕೆ ಮುಖ್ಯವಾದ ಕಾವ್ಯವನ್ನು ಕೊಟ್ಟಿದ್ದಾರೆ. ಕನ್ನಡ ಅನುವಾದನ್ನು ಬಂಗಾಳಿಗೆ ತಲುಪಿಸಿದ್ದಾರೆ. ಮುಖ್ಯವಾಗಿ ದೇಶ,ಭಾಷೆ,ತಂದೆತಾಯಿಯನ್ನು ಪ್ರೀತಿಸುವ ಕೆಲಸ ಆಗುತ್ತದೆ. ಸ್ರೀಯನ್ನು ಅನುವಾದದ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ರಾಜಕಾರಣಿಗಳು ಸರಿಯಾಗಿ ಆಳಿದರೆ ಎಷ್ಟು ಬೇಕಾದರೂ ಆಡಳಿತ ನಡೆಸಬಹುದು, ಆದರೆ ವಿಪಕ್ಷಗಳು ಕೊಂಕು ಮಾತುಗಳನ್ನು ಮಾತನಾಡುತ್ತಿರುವುದು ಸರಿಯಲ್ಲ. ಅವರಿಗೆ ಶುಭ ಸಂದೇಶ ನೀಡಬೇಕು, ಅದನ್ನು ಬಿಟ್ಟು ಕಾಲ್ ಎಳೆಯುವ ಕೆಲಸ ಜನಪ್ರತಿನಿಧಿಗಳಿಗೆ ಶೋಭೆ ತರುವಂತದ್ದಲ್ಲ. ಯಾರು ಎಷ್ಟೇ ವೈಶಮ್ಯ ದ್ವೇಷಗಳಿದ್ದರೂ ಸಹ ಒಳ್ಳೆಯ ಕೆಲಸಗಳು ಮೂಡಿ ಬಂದಾಗ ಬೆನ್ನು ತಟ್ಟುವ ಕೆಲಸ ಮಾಡಬೇಕಾಗಿದೆ.
ಅನುವಾದದಿಂದ ಸಾಂಸ್ಕೃತಿಕ , ಭಾಷೆ ಎಲ್ಲವನ್ನು ಒಂದುಗೂಡಿಸುತ್ತದೆ. ಭಾಷೆಯ ಅನುವಾದ ನಮಗೆ ಗೊತ್ತಿರಬೇಕು, ಆಗ ಬೇರೆ ರಾಜ್ಯ, ದೇಶಗಳ ನಡುವಿನ ಭಾಂದವ್ಯ ಹೆಚ್ಚುತ್ತದೆ. ರಾಮಕೃಷ್ಣ ಆಶ್ರಮದಲ್ಲಿ ಇದ್ದಾಗ ವಿವೇಕಾನಂದರ ಬಗ್ಗೆ ಕುವೆಂಪು ಹೆಚ್ಚು ತಿಳಿದುಕೊಂಡಿದ್ದಾರೆ. ವಿದ್ವತ್ ಅನ್ನು ಶೃಜನಶೀಲತೆಯನ್ನು ನಾಗರಾಜಯ್ಯ ಅವರು ರೂಡಿಸಿಕೊಂಡಿದ್ದಾರೆ. ಜಗತ್ತಿನ ಹಲವು ಭಾಷೆಗಳ ಕಡೆ ಪುಸ್ತಕ ಪಸರಿಸುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.
ಕನ್ನಡ ಪ್ರೊ.ಎಲ್ ಎನ್ ಮುಕುಂದ್ ರಾಜ್ ಅಧ್ಯಕ್ಷತೆ,ಹಂಪನ ನಾಗರಾಜಯ್ಯ, ಚೆನ್ನಪ್ಪ ಕಟ್ಟಿ ಪುಸ್ತಕ ಬಿಡುಗಡೆ , ಸೌಮ್ಯಜಿತ್ ಆಚಾರ್ಯ ವಂಗ ಭಾಷೆಗೆ ಅನುವಾದಕ, ವೋಡೆಪಿ ಕೃಷ್ಣ, ಶಾಮಲ್ ಬಟ್ಟಾಚಾರ್ಯ, ರಾಜಶ್ರೀ, ಆರ್ಥಿ ಇತರ ಕನ್ನಡ ಮನಸ್ಸುಗಳು ಉಪಸ್ಥಿತರಿದ್ದರು.