ಬೆಂಗಳೂರು : ಪರಂಪರಾಗತ (ಲೆಗಸಿ) ಜಾಹೀರಾತುಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಅನುಮತಿ ಪಡೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025ರ ನಿಯಮಗಳ ನಿಯಮ-8 ರಡಿಯಲ್ಲಿ ಲೆಗಸಿ ಜಾಹೀರಾತುಗಳಿಗೆ (Legacy Advertisements) ಅನುಮತಿ ಪಡೆಯಲು ಹಾಗೂ ಸ್ವಯಂ ಜಾಹೀರಾತುಗಳನ್ನು (Self Advetisements) ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪ್ರದರ್ಶಿಸಲು One Time Opportunity (OTO) ಅವಕಾಶವನ್ನು ಕಲ್ಪಿಸಿದ್ದು, ಕೇಂದ್ರೀಕೃತವಾಗಿ ಮೇಲ್ವಿಚಾರಣೆ ನಡೆಸಲು ಶ್ರೀ ಕರಿಗೌಡ, ಭಾ.ಆ.ಸೇ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂ.ಘ.ತ್ಯಾ.ನಿ. ಬೆಂಗಳೂರು ಇವರನ್ನು ನೋಡಲ್ ಅಧಿಕಾರಿಯಾಗಿ ಸರ್ಕಾರದಿಂದ ನೇಮಿಸಲಾಗಿರುತ್ತದೆ.
ದಿನಾಂಕ:13-01-2026 ರಂದು ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025ರ ನಿಯಮ-8.7(1) ರಲ್ಲಿ ಬಿ.ಬಿ.ಎಂ.ಪಿ. ಜಾಹೀರಾತು ಉಪವಿಧಿಗಳು-2006 ರಡಿಯಲ್ಲಿ ಖಾಸಗಿ ಆಸ್ತಿಯ ಮೇಲೆ ಜಾಹೀರಾತು ಅಳವಡಿಸಲು ಅನುಮತಿ ಪಡೆದಿರುವ ಹಾಗೂ ಸಂಪೂರ್ಣ ಜಾಹೀರಾತು ತೆರಿಗೆ ಪಾವತಿಸಿರುವ ಜಾಹೀರಾತು ಸಂಸ್ಥೆಗಳನ್ನು ಪರಂಪರಾಗತ/ಲೆಗಸಿ ಜಾಹೀರಾತು ಸಂಸ್ಥೆಗಳೆಂದು ಪರಿಗಣಿಸಲಾಗಿರುತ್ತದೆ ಹಾಗೂ ನಿಯಮ-8.7(vii) ರಲ್ಲಿ ಯಾವುದೇ ಹಿಂದಿನ ಜಾಹೀರಾತು ಉಪ ವಿಧಿಗಳ ಅಡಿಯಲ್ಲಿ ಎಲ್.ಇ.ಡಿ. ಜಾಹೀರಾತು ಪ್ರದರ್ಶನ ಫಲಕಕ್ಕಾಗಿ ಪಡೆಯಲಾದ ಮತ್ತು ಚಾಲ್ತಿಯಲ್ಲಿರುವ ಹಾಗೂ ಅನುಮತಿ ಅವಧಿಯೊಳಗೆ ಇರುವ ಎಲ್.ಇ.ಡಿ. ಸ್ವಯಂ ಜಾಹೀರಾತುಗಳನ್ನು (Self Advetisements) ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಲು One Time Opportunity (OTO) ಅವಕಾಶವನ್ನು ಕಲ್ಪಿಸಿದ್ದು,
ಅರ್ಹ ಜಾಹೀರಾತುದಾರರು ಜಾಹೀರಾತು ನಿಯಮಗಳ 2025 ರಲ್ಲಿನ ನಮೂನೆ-(IV) ರಲ್ಲಿ ಬೆರಳಚ್ಚು ಮಾಡಿರುವ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ (Please submit Form- IV in typed form With all the relevant supporting documents) ದಿನಾಂಕ:13-04-2026 ರೊಳಗಾಗಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರು ರವರ ಕಛೇರಿ, 10ನೇ ಮಹಡಿ, ನೇತಾಜಿ ಸುಭಾಸ್ ಚಂದ್ರ ಬೋಸ್ (ಪಿಯುಬಿ ಕಟ್ಟಡ), ಎಂ.ಜಿ. ರಸ್ತೆ, ಬೆಂಗಳೂರು-560001 ಈ ವಿಳಾಸದಲ್ಲಿ ಕಛೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ.