LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಗರದಲ್ಲಿ ಒಣಗಿದ ಅಪಾಯಕಾರಿ ಮರಗಳ ತೆರವು

ಬೆಂಗಳೂರು : ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣಗಿದ/ಅಪಾಯಕಾರಿ ಮರಗಳು ಮತ್ತು ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ ಎನ್ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ ಎನ್ ರಮೇಶ್ ರವರ ಆದೇಶದ ಮೇರೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಕೆರೆಗಳಲ್ಲಿ ದಕ್ಷಿಣ ನಗರ ಪಾಲಿಕೆಯ ಅರಣ್ಯ ಘಟಕದಿಂದ 02-09-2025 ರಿಂದ ಇಲ್ಲಿಯವರೆಗೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಒಣಗಿದ ಹಾಗೂ ಅಪಾಯಕಾರಿ ಮರಗಳು ಮತ್ತು ಒಣಗಿದ ಹಾಗೂ ಅಪಾಯಕಾರಿ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

*ವಲಯವಾರು ತೆರವುಗೊಳಿಸಿದ ಮರ, ರೆಂಬೆ ಕೊಂಬೆಗಳ ವಿವರಗಳು ಕೆಳಗಿನಂತಿವೆ:*


*ವಲಯ-1 ರ ಜಯನಗರ ವ್ಯಾಪ್ತಿಯಲ್ಲಿ:*

* ಒಣಗಿದ ಮರಗಳು – 32
* ಒಣಗಿದ ರೆಂಬೆ-ಕೊಂಬೆಗಳು – 509
* ಅಪಾಯಕಾರಿ ಮರಗಳು – 27
* ಅಪಾಯಕಾರಿ ಕೊಂಬೆಗಳು –375

*ವಲಯ-2 ರ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ*

* ಒಣಗಿದ ಮರಗಳು – 47
* ಒಣ ಕೊಂಬೆಗಳು – 280
* ಅಪಾಯಕಾರಿ ಮರಗಳು – 21
* ಅಪಾಯಕಾರಿ ಕೊಂಬೆಗಳು – 225

*ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ತೆರವುಗೊಳಿಸಿದ ಒಟ್ಟು ವಿವರ:*👇

* ಒಣಗಿದ ಮರಗಳು – 79
* ಒಣಗಿದ ರೆಂಬೆ-ಕೊಂಬೆಗಳು – 789
* ಅಪಾಯಕಾರಿ ಮರಗಳು – 48
* ಅಪಾಯಕಾರಿ ಕೊಂಬೆಗಳು – 600

ನಗರದಲ್ಲಿ ಒಣಗಿದ ಹಾಗೂ ಅಪಾಯಕಾರಿ ಮರಗಳು ಹಾಗೂ ರೆಂಬೆ ಕೊಂಬೆಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯುವ ಹಾಗೂ ಸಾರ್ವಜನಿಕರ ಜೀವ, ಆಸ್ತಿ-ಪಾಸ್ತಿ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆಗಳನ್ನು ದಕ್ಷಿಣ ನಗರ ಪಾಲಿಕೆಯ ಅರಣ್ಯ ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಇದೇ ರೀತಿಯ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳು ನಿರಂತರವಾಗಿ ಕೈಗೊಳ್ಳಲಾಗುತ್ತದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಜನಕಲ್ಯಾಣ ಯೋಜನೆಗಳ ಬಗ್ಗೆ ಬಿಜೆಪಿಯವರ ಸುಳ್ಳು ವದಂತಿ ಅಂಕಿ ಅಂಶಗಳ ಸತ್ಯವೇ ಬೇರೆ: ಸುರ್ಜೆವಾಲಬೆಂಗಳೂರು ರಿಯಲ್ ಎಸ್ಟೇಟ್ ಗೆ  ‘ಡೀಲ್‌ಕ್ಲೇವ್’ ನಾಯಕತ್ವ ವೇದಿಕೆ: ಪ್ರಥಮ ಆವೃತ್ತಿ ಯಶಸ್ವಿಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಪರಂಪರೆ ಎಂದೆಂದಿಗೂ ಶಾಶ್ವತ: ಕರಜಗಿಬೆಂಗಳೂರು ಉಳಿಸಿ" – ಹಸಿರು, ಸ್ವಚ್ಛ ಮತ್ತು ವಾಸಯೋಗ್ಯ ಬೆಂಗಳೂರಿಗಾಗಿ ಎಎಪಿ ಹಸಿರು ಕಾರ್ಯಸೂಚಿ  ಪ್ರಣಾಳಿಕೆ ಬಿಡುಗಡೆಖ್ಯಾತ ಸಿನಿತಾರೆ ಕರಣ್ ಕುಂದ್ರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಅದ್ಧೂರಿ ಚಾಲನೆಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪದ್ಮನಾಭನಗರದಲ್ಲಿ ಗುರುಪಾದ ಪೂಜೆ, ಭಜನೆ ಹಾಗೂ ಧಾರ್ಮಿಕ ಜಾಗೃತಿ ಮೆರವಣಿಗೆ ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : BO, ಎ.ಜೆ.ಕೃಷ್ಣೇಗೌಡ ಅಭಿನಂದನೆಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದಿಂದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ!