ಬೆಂಗಳೂರು: ಮಕ್ಕಳಿಗೆ ಶಿಕ್ಷಣ ಪ್ರಬಲ ಹಸ್ರ್ತವಾಗಿದ್ದು ಎಲ್ಲದಕ್ಕೂ ಶಿಕ್ಷಣವೇ ಮೂಲಾಧಾರವಾಗಿದೆ, ವಿಪರ್ಯಾಸ ಎಂದರೆ ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮದ ಮೊರೆ ಹೋಗಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಕಿಗ್ಗಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ವಿದ್ಯಾರ್ಥಿಗಳು ಡಿಜಿಟಲ್ ಕಡೆ ವಾಲದೇ ಹೆಚ್ಚಾಗಿ ಓದಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಕೆ ಚಿರಂಜೀವಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಚಂದನ ಕ್ರಿಯೇಶನ್ಸ್ ಅಡಿಯಲ್ಲಿ ನಾರಾಯಣಸ್ವಾಮಿ ನಿರ್ಮಾಣ ಮಾಡಿರುವ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶಿಕ್ಷಣಧಾರಿ ಶೈಕ್ಷಣಿಕ ಸಾಕ್ಷಾ ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದವರು, ಶಿಕ್ಷಣಕ್ಕಿರುವ ಶಕ್ತಿ ಬೇರೆ ಯಾವುದೇ ವಿಚಾರಗಳಿಗೆ ಇಲ್ಲ, ಶಿಕ್ಷಣವು ಎಲ್ಲರ ಬದುಕಲ್ಲಿಯೂ ಸಹ ಒಂದು ಶಿಸ್ತುಬದ್ಧವಾದಂತಹ ಜೀವನವನ್ನು ಕಲಿಸಿಕೊಡುತ್ತದೆ, ಅಲ್ಲದೆ ಉನ್ನತ ಸ್ಥಾನಕ್ಕೂ ಸಹ ಕೊಂಡೊಯ್ಯುವಂತಹ ಕೆಲಸ ಮಾಡುತ್ತದೆ, ವಿದ್ಯಾರ್ಥಿಗಳು ಮೊಬೈಲ್ ಗಳಲ್ಲಿ ಮುಳುಗಿ ಹೋಗುವ ಬದಲು ದಿನನಿತ್ಯ ಪುಸ್ತಕ, ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಂಡು ಅಸಾಧ್ಯವಾದದನ್ನು ಸಾಧನೆ ಮಾಡಿ ತೋರಿಸುವ ಕೆಲಸ ಮಾಡಬೇಕು, ಯಾವುದು ಇಲ್ಲ ಎನ್ನುವ ಬದಲು ನಮ್ಮ ಶ್ರಮ ಪರಿಶ್ರಮ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಸ್ವತ: ನಾನು ಒಬ್ಬ ಬಡ ಕುಟುಂಬದಿಂದ ಬಂದವನು, ನನ್ನ ಹಾಗೂ ನಮ್ಮ ಕುಟುಂಬದವರು ಪೌರಕಾರ್ಮಿಕರು, ಕುಟುಂಬದ ಸುತ್ತಮುತ್ತ ಸಾಕಷ್ಟು ಸಂಕಷ್ಟಗಳು ಇದ್ದವು, ಆದರೆ ನನ್ನ ಪೋಷಕರು ನನಗೆ ಯಾವುದೇ ಕಷ್ಟಗಳನ್ನು ತೋರಿಸದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವನ್ನು ನೀಡಿದರು, ಅದರ ನನ್ನ ಉತ್ತಮ ಶಿಕ್ಷಣ ಮಾಡಿದ ಪ್ರತಿಫಲವಾಗಿ ನಾನು ಈಗ ನಿಮ್ಮ ಮುಂದೆ ನಿಂತು ಮಾತನಾಡಲು ಸಾಧ್ಯವಾಗಿದೆ. ಜೀವನದಲ್ಲಿ ಅಡೆತಡೆಗಳು ಕಷ್ಟಗಳು ಬರುತ್ತವೆ, ಆದರೆ ಅದಕ್ಕೆ ಕುಗ್ಗುವ ಪ್ರಶ್ನೆಯೇ ಇಲ್ಲ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ,ಗುಣಮಟ್ಟದ ಶಿಕ್ಷಣ ಪಡೆದರೆ ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬಹುದು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್ ಭೈರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡುತ್ತಿದ್ದರು ಸಹ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿ ಮುಖ ವಾಗುತ್ತದೆ. ಖಾಸಗಿ ಶಾಲೆಯಲ್ಲಿ ಮಾಡುವ ಹಾಗೂ ಕಲಿಯುವ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಅದಕ್ಕಿಂತ ಹೆಚ್ಚಿನದಾಗಿ ಕಲಿಯುವ ಅವಕಾಶಗಳಿವೆ. ಖಾಸಗಿ ಶಾಲೆಯಲ್ಲಿ ಮಕ್ಕಳು ಆಂಗ್ಲ ಭಾಷೆ ಕಲಿತ ಕ್ಷಣ ಎಲ್ಲವನ್ನು ಕಲಿಯುತ್ತಾರೆಂಬ ಬ್ರಹ್ಮ ಲೋಕದಲ್ಲಿ ಪೋಷಕರು ಇದ್ದಾರೆ, ಇವೆಲ್ಲ ತಪ್ಪು ತಿಳುವಳಿಕೆ.
ಶಿಕ್ಷಣಧಾರೆ ಸಾಕ್ಷ್ಯಚಿತ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತಾ ಒಬ್ಬ ವಿದ್ಯಾರ್ಥಿನಿ ಮುಂದೆ ಹಂತ ಹಂತವಾಗಿ ಓದಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುವ ತಿರುಳನ್ನು ಈ ಕಿರು ಚಿತ್ರದಲ್ಲಿ ತೋರಿಸಿ ಕೊಟ್ಟಿದ್ದಾರೆ.
ಇಂತಹ ಕಿರುಚಿತ್ರಗಳು ಮುಂದೆ ಹಲವು ಹಾಗಬೇಕಾಗಿದೆ, ಅಲ್ಲದೆ ಇಂತಹ ಸಾಕ್ಷ್ಯಚಿತ್ರ ಸರ್ಕಾರಿ ಶಾಲೆಗಳಿಗೆ ತಲುಪಿಸಿ ಮಕ್ಕಳಿಗೆ ಇಂತಹ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು. ಸರ್ಕಾರದಲ್ಲಿನ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವಾಗಬೇಕಾಗಿದೆ.
ಕಾರ್ಯಕ್ರಮದಲ್ಲಿ ಶಿಕ್ಷಣಧಾರಿ ಸಾಕ್ಷಾ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಪಾರ್ವತಮ್ಮ ಹಾಗೂ ನಾರಾಯಣಸ್ವಾಮಿ ದಂಪತಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ, ಛಾಯಾಗ್ರಾಹಕ ಎ ವಿ ಕೃಷ್ಣಕುಮಾರ್, ಹಿರಿಯ ಹಾಸ್ಯ ಕಲಾವಿದ ಬಿರಾದಾರ,ಆನಂದಪ್ಪ, ಖಜಾಂಚಿ ನಿವೃತ್ತ ನೌಕರರ ಸಂಘರೇವಣ್ಣ ಸಿದ್ದಪ್ಪ, ಸೇರಿದಂತೆ ಕಿರುಚಿತ್ರದ ಪಾತ್ರದಾರಿಗಳು, ಜಿಲ್ಲಾ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿವೃತ್ತ ಅಧಿಕಾರಿಗಳು, ಶಿಕ್ಷಕರು ಇದೇ ವೇಳೆ ಉಪಸ್ಥಿತರಿದ್ದರು.