ಬೆಂಗಳೂರು: ಎಲ್ಲಾ ಸರ್ಕಾರಿ ಇಲಾಖೆಗಳು ಒಗ್ಗಟ್ಟಾಗಿ ಸಮುದಾಯಗಳಲ್ಲಿ ಕಾರ್ಯವನ್ನು ನಿರ್ವಹಿಸಿದರೆ ಮಕ್ಕಳಿಗೆ ಪೂರ್ಣವಾದ ಶಿಕ್ಷಣವನ್ನು ನೀಡಬಹುದು ಮತ್ತು ಬಾಲಕಾರ್ಮಿಕತೆಯನ್ನು ತಡೆಯಬಹುದು ಎಂದು ಕಾರ್ಮಿಕ ಇಲಾಖೆ ಜಂಟಿ ಆಯುಕ್ತರಾದ ರವಿಕುಮಾರ್ ತಿಳಿಸಿದರು.
ಬನ್ನೇರುಘಟ್ಟದ ಕಾರ್ಮಿಕ ಭವನದ ಮುಂದೆ ನನ್ನ ನಡೆ ಶಿಕ್ಷಣದೆಡೆಗೆ 2026 - 27’ ಆಂದೋಲನದ ಉದ್ಘಾಟನೆ ಮಾಡಿ ಮಾತನಾಡಿ, ಸಂವಿಧಾನದ ಪ್ರಕಾರ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕಾಗಿ ಶಿಕ್ಷಣ ಸಿಗಬೇಕು ಅದನ್ನು ನೀಡುವುದು ಇಲಾಖೆಯ ಮತ್ತು ಸಮಾಜದ ಜವಾಬ್ದಾರಿಯ ಆಗಿರುತ್ತದೆ. ಇಲ್ಲಿ ಕೇವಲ ಕಾರ್ಮಿಕ ಇಲಾಖೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ ಇದಕ್ಕೆ ವಿವಿಧ ಇಲಾಖೆಗಳು ಸಹಕರಿಸಬೇಕು. ಇದರ ಜೊತೆಗೆ ಮುಖ್ಯವಾಗಿ NGOಗಳು ಕಾರ್ಯಗಳನ್ನು ಮಾಡಬೇಕು ಅವು ಮಕ್ಕಳನ್ನು ಗುರುತಿಸುವುದು ಅವರನ್ನು ಸಮಾಲೋಚಿಸುವುದು ಮತ್ತು ಅದಕ್ಕೆ ಬೇಕಾಗಿರುವಂತಹ ಪರಿಕರ ನೀಡಿದರೆ ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ಸಮುದಾಯದಲ್ಲೂ ಕಾರ್ಯಗಳನ್ನು ಕೈಗೊಂಡರೆ ಉತ್ತಮವಾದಂತಹ ಫಲಿತಾಂಶವನ್ನು ನಾವು ನೋಡಬಹುದು ಎಂದು ಹೇಳಿದರು.
ಸ್ಪರ್ಶ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಗೋಪಿನಾಥ್ ತಿಳಿಸಿದರು. ಸಂವಿಧಾನದ ಪ್ರಕಾರ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕಾಗಿ ಶಿಕ್ಷಣ ಸಿಗಬೇಕು ಅದನ್ನು ನೀಡುವುದು ಇಲಾಖೆಯ ಮತ್ತು ಸಮಾಜದ ಜವಾಬ್ದಾರಿ. ಇಲ್ಲಿ ಕೇವಲ ಕಾರ್ಮಿಕ ಇಲಾಖೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ ಇದಕ್ಕೆ ವಿವಿಧ ಇಲಾಖೆಗಳು ಸಹಕರಿಸಬೇಕು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕಾಂಶ ಆಹಾರ,ಆರ್ಥಿಕ ಸದೃಡತೆ ನೀಡಬೇಕು, ಮಕ್ಕಳಿಗೆ ರಕ್ಷಣೆ ಒದಗಿಸಬೇಕು. ಕಳೆದ 16 ವರ್ಷಗಳಿಂದ ಮಕ್ಕಳಿಗೆ ಶಿಕ್ಷಣದ ಕಡೆ ಸೆಳೆಯುವ, ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ.
ಕಟ್ಟಡ ಕಾರ್ಮಿಕರು,ವಲಸಿಗ ಸಮುದಾಯದ, ಕೊಳಗೇರಿ ಸ್ಥಳಗಳು ಹೀಗೆ ಅನೇಕ ಕಡೆ ನೇರವಾಗಿ ಭೇಟಿ ನೀಡಿ ಶಾಲೆ,ಅಂಗನವಾಡಿಯಿಂದ ವಂಚಿತರಾದ ಅನೇಕ ಮಕ್ಕಳನ್ನು ಪುನಃ ಸೇರಿಸುವ ಕೆಲಸ ಮಾಡಿದ್ದೇವೆ. ಸರ್ಕಾರಿ ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ,ಸರ್ಕಾರಿ ಶಾಲೆಗಳನ್ನು
ಉಳಿಸುವ ನಿಟ್ಟಿನಲ್ಲಿ ಸಾಮೂಹಿಕ ಶಕ್ತಿ ಹಾಗೂ ಸ್ಪರ್ಶ ಟ್ರಸ್ಟ್ ಜಂಟಿಯಾಗಿ ಅಭಿಯಾನ ಮಾಡಿಕೊಂಡು ಬರುತ್ತಿದೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆಯ ವಿಭಾಗ ಮಟ್ಟದ ಬಂಡೇ ಕಾಲೋನಿಯಲ್ಲಿ ಕೊಳಗೇರಿ ನಿವಾಸಿಗಳಿಗೆ ಮೊಬೈಲ್ ವ್ಯಾನಿನಲ್ಲಿ ಶಿಕ್ಷಣದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ಸಂಘದ ದಾಧಿಕಾರಿಗಳು ಮಾಡಿದರು, ಅದರ ಜೊತೆಗೆ ಬೀದಿ ನಾಟಕಗಳು,ನೃತ್ಯಗಳು, ಸ್ಲೋಗನ್ ಗಳು, ಕೂಗುವ ಮೂಲಕ ವಿಭಿನ್ನ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು( ಇನ್ ಚಾರ್ಜ್) ಡಾ.ದಿನೇಶ್ ಕುಮಾರ್, ಮುಖ್ಯ ಅತಿಥಿಯಾಗಿ
ವಕೀಲರು ಮತ್ತು ಮಾಜಿ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಮಂಜುಳಾ, ಬೆಂಗಳೂರು ಉತ್ತರ2ರ ಬ್ಲಾಕ್ ಶಿಕ್ಷಣ ಅಧಿಕಾರಿ ಲತಮಣಿ, ಯೋಜನೆಯ ಮುಖ್ಯಸ್ಥರಾದ ಡಾ.ನೀಲಿಮಾ ಸೇರಿದಂತೆ ಕಾರ್ಮಿಕ ಇಲಾಖೆ ಅದ್ಇಕಾರಿಗಳು, ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.