ಬೆಂಗಳೂರು: ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಆಶಾ ಕಾರ್ಯಕರ್ತೆಯರೊಂದಿಗೆ ಗೃಹ ಕಚೇರಿ ಕೃಷ್ಣದಲ್ಲಿ ಸುದೀರ್ಘ ಚರ್ಚೆ ನಡೆಸಿ, ಅವರ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಇದಕ್ಕೂ ಮುನ್ನ, ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಬೆಳಿಗ್ಗೆ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿ, ಅವರ ಬೇಡಿಕೆಗಳನ್ನು ಆಲಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿದ್ದೆ.
ಈ ನಿರ್ಧಾರದಿಂದ ಜನವರಿ 1ರಿಂದ ರಾಜ್ಯದ 40,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಕಾರ್ಯನಿರ್ವಹಣೆ ಆಧಾರಿತ ಪ್ರೋತ್ಸಾಹಧನದ ಜೊತೆಗೆ ಪ್ರತಿ ತಿಂಗಳು ಖಚಿತ ₹10,000 ಸಿಗಲಿದೆ.
ಕೇಂದ್ರದ ಹೆಸರಿನಲ್ಲಿ ಸಿಗುವ ₹2,000 ನಿಗದಿತ ಗೌರವಧನ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಬರುತ್ತದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು 60:40 ಅನುಪಾತದಲ್ಲಿದೆ. ಅಂದರೆ ಕೇಂದ್ರ ಕೊಡುವುದು ₹1,200 ಮಾತ್ರ, ಉಳಿದ ₹800 ರಾಜ್ಯ ಸರ್ಕಾರವೇ ಭರಿಸುತ್ತಿದೆ.
ತಂಡ ಆಧಾರಿತ ಪ್ರೋತ್ಸಾಹಧನ: ರಾಜ್ಯ ₹600, ಕೇಂದ್ರ ₹400
ಕಾರ್ಯನಿರ್ವಹಣೆ ಆಧಾರಿತ ಪ್ರೋತ್ಸಾಹಧನ: ರಾಜ್ಯ ₹600, ಕೇಂದ್ರ ₹900
ಇದರ ಜೊತೆಗೆ ₹5,000 ಗೌರವಧನವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ನೀಡುತ್ತಿದೆ.
ಆಶಾ ಕಾರ್ಯಕರ್ತೆಯರಿಗೆ ಇಂದು ಸಿಗುತ್ತಿರುವ ಹಣದಲ್ಲಿ ರಾಜ್ಯದ ಪಾಲು ₹7,000 (74%), ಕೇಂದ್ರದ ಪಾಲು ಕೇವಲ ₹2,500 (26%).
2018-19ರ ನಂತರ ಕೇಂದ್ರ ಸರ್ಕಾರ ತನ್ನ ನಿಗದಿತ ಪಾಲನ್ನು ಇನ್ನೂ ಹೆಚ್ಚಿಸಿಲ್ಲ. ಆದಾಗ್ಯೂ, ಆಶಾ ಕಾರ್ಯಕರ್ತೆಯರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಈ ಹೆಚ್ಚಳ ಮಾಡಿದೆ.
ಸರ್ಕಾರದ ಮೇಲೆ ವಿಶ್ವಾಸವಿಟ್ಟು ಪ್ರತಿಭಟನೆ ಹಿಂಪಡೆದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಜನವರಿಯಿಂದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಇದಕ್ಕೆ ರಜಾದ ಎಲ್ಲಾ ಆಶಾ ಕಾರ್ಯಕರ್ತೆಯರು ಸಮಯಾವಕಾಶ ನೀಡಬೇಕೆಂದು ಎದೆ ವೇಳೆ ಮನವಿ ಮಾಡಿಕೊಂಡರು. ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ಹೇಳಿದ್ದನ್ನು ಮಾಡಿ ತರುತ್ತದೆ ಎಂದರು.