LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

KTA ಅಧ್ಯಕ್ಷ ಗಣೇಶ್ ರಾವ್ ರಿಂದ ನ.,30ರಂದು ಸಮಾಜಮುಖಿ ಕಾರ್ಯಕ್ರಮ

ಬೆಂಗಳೂರು: ’ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್’ ಗೆ ಆಗಸ್ಟ್ 2026ರಂದು  ಚುನಾವಣೆ ನಡೆದು, ಅದರಲ್ಲಿ ಹಿರಿಯ ನಟ ಗಣೇಶ್‌ರಾವ್ ಕೇರ್ಸಕರ್ ಅತ್ಯದಿಕ ಮತಗಳಿಂದ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.news_1795696039_3_440.webp

ಇವರ ಸಾರಥ್ಯದಲ್ಲಿ ಸಂಘದ ಮಕ್ಕಳಿಗೆ ಮೊದಲನೇ ಕಾರ್ಯಕ್ರಮವಾದ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಸಂಘದಲ್ಲಿನ ಪದಾಧಿಕಾರಿಗಳ ಮಕ್ಕಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಘದ ಪದಾಧಿಕಾರಿಗಳು ಹಾಗೂ ಮಕ್ಕಳಿಗೆ ತಿಳಿಸುವು ಉದ್ದೇಶದಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದರು.

 ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ನ  ಅಧ್ಯಕ್ಷರಾದ ಗಣೇಶ್‌ರಾವ್ ಕೇರ್ಸಕರ್ ಮಾತನಾಡಿ, 2026ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಆರು ಸಾಧಕರುಗಳಿಗೆ ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರಧಾನ, ಪ್ರಣಯರಾಜ ಶ್ರೀನಾಥ್ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ, ಹಿರಿಯ ನಟಿ ಸವಿತಕ್ಕ ಜಾನಪದ ಗಾಯಕಿಗೆ ಕನ್ನಡ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುಂದಿನ ವರ್ಷ ಸಂಘವು ರಜತ ಮಹೋತ್ಸವ ಆಚರಿಸಲಿದೆ. ಅದರ ಕಾರ್ಯಕ್ರಮ ಹಮ್ಮಿಕೊಳ್ಳುವ ಸೌಭಾಗ್ಯ ನಮಗೆ ಸಿಕ್ಕಿದೆ. ನಿಂತುಹೊಗಿದ್ದ ’ಟಿವಿ ಠೀವಿ’ ಪತ್ರಿಕೆಯನ್ನು ಪ್ರಥಮ ಬಾರಿ ನೊಂದಣಿ ಮಾಡಿಸಿ ಚಾಲನೆಗೆ ತರಲಾಗಿದೆ ಎಂದರು.news_1795694893_4_380.webp

ಇವೆಲ್ಲದರ ಜೊತೆ ಸದಸ್ಯರುಗಳಿಗೆ ಗ್ರೂಪ್ ಇನ್ಸೂರೆನ್ಸ್ ಗೆ ಸರ್ಕಾರದಿಂದ ’ಕರ್ನಾಟಕ ಸಿನಿ ವರ್ಕರ‍್ಸ್ ಕಾರ್ಡ್’ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸಂಘಕ್ಕೆ ಸದಸ್ಯತ್ವ ಪಡೆಯಲು 2500 ರೂಪಾಯಿ ರಿಯಾಯತಿ ಮಾಡಲಾಗಿದೆ. ಸದಸ್ಯತ್ವ ಪಡೆಯದೇ ಇದ್ದವರಿಗೆ ಇದರಿಂದ ಅನುಕೂಲವಾಗಲಿದೆ. ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಕಿರುತೆರೆ ಅಕಾಡೆಮಿ, ಕಿರುತೆರೆ ನಿಗಮ/ಮಂಡಳಿ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

 ಸದಸ್ಯರುಗಳಿಗೆ ಗುರುತಿನ ಚೀಟಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ವಿಶೇಷವಾಗಿ ಮಾಧ್ಯಮದವರಿಗೆ ಸಂಘದಲ್ಲಿ ಸದಸ್ಯತ್ವ ಪಡೆಯಲು ಅನುವು ಮಾಡಿಕೊಡಲಾಗುವುದು. ಇನ್ನು ಅನೇಕ ವಿವಿಧ ಯೋಜನೆಗಳನ್ನು ಸಂಘದ ಸದಸ್ಯರುಗಳಿಗೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ತರಲು ಚಿಂತನೆ ನಡೆಸಲಾಗಿದೆ. ಇದಕ್ಕೆಲ್ಲಾ ಪದಾಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿದೆ ಎಂದು ಹೇಳಲು ಖುಷಿಯಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.news_1795696038_1_438.webp

 ಇದೇ 30, ಸೋಮವಾರದಂದು ಸಂಜೆ 4 ಗಂಟೆಗೆ ಡಾ.ಪುನೀತ್ ರಾಜ್‌ಕುಮಾರ್ ಆಡಿಟೋರಿಯಂ, ಯಡಿಯೂರು ಕೆರೆ ಮುಂಭಾಗದಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಸಚಿವರುಗಳು, ಲೋಕಸಭಾ ಸದಸ್ಯರು, ನಾಯಕ ನಟ ಧ್ರುವಸರ್ಜಾ ಸೇರಿದಂತೆ ಅನೇಕ ಗಣ್ಯರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

 ಪದಾಧಿಕಾರಿಗಳ ಮೆಚ್ಚುಗೆಯ ಮಾತು:

   ಚಿತ್ರೀಕರಣದ ಸೆಟ್‌ಗೆ ಭೇಟಿ ನೀಡಿ ಕಲಾವಿದರು, ತಂತ್ರಜ್ಘರುಗಳಿಗೆ ಅರಿವು ಮೂಡಿಸಿ ಸದಸ್ಯತ್ವ ಅಭಿಯಾನ ಶುರುಮಾಡಿದೆ ಎಂದು ಗೌರವಾಧ್ಯಕ್ಷೆ ಪದ್ಮವಾಸಂತಿ ಹೇಳಿದರು. ಗಣೇಶ್ ವ್ಯಕ್ತಿಯಲ್ಲ. ಶಕ್ತಿ ಅಂತ ಸುಂದರರಾಜ್ ಬಣ್ಣಿಸಿದರು. ಶಂಕರ್‌ನಾಗ್, ಪುನೀತ್‌ರಾಜ್‌ಕುಮಾರ್ ಅವರಂತೆ ಅಧ್ಯಕ್ಷರು ಕೆಲಸ ಮಾಡುತಿದ್ದಾರೆಂದು ’ಅಮೇರಿಕಾ ಅಮೇರಿಕಾ’ ಖ್ಯಾತಿಯ ಹೇಮಾ ಪಂಚಮುಖಿ ಹೇಳಿದರು. ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಗೌರವ ನೀಡುತ್ತಿರುವುದು ಸಂತಸ ತಂದಿದೆ ಅಂತಾರೆ ವನಿತಾವಾಸು. ಮೂರು ತಿಂಗಳಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇಷ್ಟಕ್ಕೆ ನಿಲ್ಲಿಸದೆ ಯಾರಿಗೂ ಬಗ್ಗದೆ,ಜಗ್ಗದೆ ವೇಗ ಕಡಿಮೆ ಮಾಡಿಕೊಳ್ಳಬೇಡಿ ಎಂದು ಅಭಿನಯ ಕಿವಿಮಾತು ಹೇಳಿದರು.

ಕಲಾವಿದರ ವಲಯದಿಂದ ಗಣೇಶ್ ಕೇರ್ಸಕರ್ ಆಯ್ಕೆಯಾಗಿರುವುದು ಇದೇ ಮೊದಲು ಎಂದು ಎಸ್ಕಾರ್ಟ್ ಶ್ರೀನಿವಾಸ್ ತಿಳಿಸಿದರು. ಆಂತರಿಕ ತೊಂದರೆ ಇರುವುದರಿಂದ ಸಂಘದಿಂದ ಒಂದು ರೂಪಾಯಿ ತೆಗೆಯದೆ, ಸಮಾರಂಭ ಏರ್ಪಡಿಸಲಾಗುತ್ತಿದೆ ಎಂದು ಕಾರ್ಯದರ್ಶಿ ಬೆಳ್ಳಿ ಚುಕ್ಕಿ ವೀರೇಂದ್ರ ಹೇಳಿದರು. ಬೇರೆ ಭಾಷೆಯಿಂದ ಬರುವ ಹಾಗೂ ಸ್ಥಳಿಯ ಕಲಾವಿದರಿಗೆ ಕಡ್ಡಾಯವಾಗಿ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕೆಂದು ವೀಣಾ ವೆಂಕಟೇಶ್ ಸಲಹೆ ನೀಡಿದರು. ಪ್ರತಿ ತಿಂಗಳು ನಾಲ್ಕನೇ ಭಾನುವಾರ ಸದಸ್ಯರುಗಳಿಂದ ಕರೋಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಘದ  ಪ್ರಧಾನ ಸಂಚಾಲಕ ಎನ್.ಟಿ.ರಾಮಸ್ವಾಮಿ ಗೌಡ ಹೇಳಿದರು.news_1795696039_2_998.webp

    ಇನ್ನು ಪತ್ರಿಕಾಗೋಷ್ಠಿಯಲ್ಲಿ ತಿಮ್ಮರಾಜು, ಖಜಾಂಚಿ ಗುರುಮೂರ್ತಿ ಹೆಗ್ದೆ, ಹರೀಶ್, ಹಿರಿಯೂರು ರಾಘವೇಂದ್ರ, ತನುಜಾ ಪ್ರಕಾಶ್ ಸೇರಿದಂತೆ ಸಂಘದ ಸದಸ್ಯರುಗಳು ಪದಾಧಿಕಾರಿಗಳು ಹಾಗೂ ಕಲಾವಿದರು ಸೇರಿದಂತೆ ಮುಂತಾದವರು ಉಪಸ್ತಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KTA ಅಧ್ಯಕ್ಷ ಗಣೇಶ್ ರಾವ್ ರಿಂದ ನ.,30ರಂದು ಸಮಾಜಮುಖಿ ಕಾರ್ಯಕ್ರಮಪ್ರೀತಿಯ ಸುತ್ತ ’ಆವರಿಸಿದೆ ಮಾನ್ಸೂನ್ ಸೀಸನ್ಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಕರ್ನಾಟಕದಲ್ಲಿ ಟೊಯೋಟಾ ವಿಸ್ತರಣೆಗೆ ಸಂಪೂರ್ಣ ಬೆಂಬಲ - ಸಿಎಂ ಶಿವಕುಮಾರ್ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪಬೆಂಗಳೂರು ಜಾತ್ರೆಯಲ್ಲಿ ಸ್ಥಳೀಯ ಪ್ರತಿಭೆಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆ : ಆಯುಕ್ತ ಕೆ. ಎನ್. ರಮೇಶ್ಕರವೇ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಮುಖಾಮುಖಿಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಸಾಹಿತ್ಯ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಲಿ, ವಿಭಜಿಸುವ ಸಾಧನವಾಗದಿರಲಿದಕ್ಷಿಣ ಕೊರಿಯಾ ಕೈಗಾರಿಕಾ ಟೌನ್ ಶಿಪ್ ಕುರಿತು ಕೌನ್ಸಲ್ ಜನರಲ್ ಜತೆ ಚರ್ಚೆ: ಎಂ ಬಿ ಪಾಟೀಲ