LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿಜಿಟಲ್ ಬಸ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅತಿಯಾದ ದರ ಏರಿಕೆಗೆ ನಿಯಂತ್ರಣ ಅಗತ್ಯ

ಬೆಂಗಳೂರು : ಸುರಾಜ್ಯ ಅಭಿಯಾನವು ಕರ್ನಾಟಕ ಸರ್ಕಾರದ ಗಮನಕ್ಕೆ ಒಂದು ತುರ್ತು ವಿಷಯವನ್ನು ತಂದಿದೆ. ಪ್ರಸ್ತುತ ರೆಡ್‌ಬಸ್‌, ಮೇಕ್‌ಮೈಟ್ರಿಪ್‌ (MakeMyTrip) ಮುಂತಾದ ಆನ್‌ಲೈನ್‌ ಬಸ್‌ ಟಿಕೆಟ್‌ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್‌ಗಳು ಹಬ್ಬ-ಹರಿದಿನಗಳು ಹಾಗೂ ರಜಾದಿನಗಳ ಸಂದರ್ಭದಲ್ಲಿ ಅನಿಯಂತ್ರಿತ ದರ ಏರಿಕೆ (Surge Pricing) ಮಾಡುತ್ತಿವೆ ಸಂಯೋಜಕರು, ಸುರಾಜ್ಯ ಅಭಿಯಾನ – ಕರ್ನಾಟಕ. ನಾರಾಯಣ ಗೌಡ ತಿಳಿಸಿದರು.

ಪ್ರಯಾಣಿಕರು ಯಾವುದೇ ಪಾರದರ್ಶಕತೆ ಇಲ್ಲದೆ ಅತಿಯಾದ ಟಿಕೆಟ್‌ ದರಗಳನ್ನು ಕಟ್ಟುವಂತಾಗುತ್ತಿದೆ. ಕೇಂದ್ರ ಸರ್ಕಾರದ “ಮೋಟರ್ ವೀಹಿಕಲ್ ಅಗ್ರಿಗೇಟರ್ ಮಾರ್ಗಸೂಚಿ 2020” ಪ್ರಕಾರ ಗರಿಷ್ಠ ದರವನ್ನು ಮೂಲ ದರದ 1.5 ಪಟ್ಟು ನಿಗದಿ ಮಾಡಲಾಗಿದೆ. ಆದರೆ, ಖಾಸಗಿ ಬಸ್‌ ಆಪರೇಟರ್‌ಗಳು ಹಾಗೂ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ನಿಯಮಾವಳಿ ಇಲ್ಲದ ಕಾರಣ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು.

    *ಅತಿಯಾದ ದರ ಏರಿಕೆಯ ಉದಾಹರಣೆ (ಮಂಗಳೂರು–ಬೆಂಗಳೂರು ಮಾರ್ಗ)*


ದಿನಾಂಕ ಬಸ್ ಕಂಪನಿ ಬಸ್ ಪ್ರಕಾರ ದರ

5 ಅಕ್ಟೋಬರ್ 2025 ಸುಗಮಾ ಟೂರಿಸ್ಟ್‌ (Non AC Sleeper) ರೂ.1900

14 ಅಕ್ಟೋಬರ್ 2025 ಅದೇ ಬಸ್ ರೂ.700

18 ಅಕ್ಟೋಬರ್ 2025 ಅದೇ ಬಸ್ ರೂ.1450

ಗ್ರೀನ್‌ಲೈನ್ ಟ್ರಾವೆಲ್ಸ್ (AC Sleeper) 5 ಅಕ್ಟೋಬರ್ 2025 – ರೂ.3249, 14 ಅಕ್ಟೋಬರ್ 2025 – ರೂ.999, 18 ಅಕ್ಟೋಬರ್ 2025 – ರೂ.2249

ಈ ಅಂಕಿಅಂಶಗಳು ದರಗಳಲ್ಲಿ ನಡೆಯುತ್ತಿರುವ ಅತಿಯಾದ ಬದಲಾವಣೆ ಮತ್ತು ಶೋಷಣೆಯನ್ನು ಸ್ಪಷ್ಟಪಡಿಸುತ್ತವೆ.

*ಸುರಜ್ಯ ಅಭಿಯಾನದ ಆಗ್ರಹಗಳು :*


1. ಹಬ್ಬ–ರಜಾದಿನಗಳಲ್ಲಿ ದರ ಏರಿಕೆಗೆ ಸ್ಪಷ್ಟ ಮಿತಿ (Cap) ನಿಗದಿಪಡಿಸುವಂತೆ ಸರ್ಕಾರವು ನಿಯಂತ್ರಣ ಮಾರ್ಗಸೂಚಿ ತರಬೇಕು.

2. ಪಾರದರ್ಶಕ ದರ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಗ್ರಾಹಕರಿಗೆ ದರ ಏರಿಕೆಯ ವಿಧಾನವನ್ನು ತಿಳಿಸಬೇಕು.

3. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಈ ಪ್ಲಾಟ್‌ಫಾರ್ಮ್‌ಗಳನ್ನು ಕಾನೂನು ಬದ್ಧವಾಗಿ ಹೊಣೆಗಾರರನ್ನಾಗಿಸಬೇಕು.

4. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಖಾಸಗಿ ಬಸ್‌ ಪ್ಲಾಟ್‌ಫಾರ್ಮ್‌ಗಳನ್ನೂ ಸೇರಿಸುವಂತೆ ಶಿಫಾರಸು ಮಾಡಬೇಕು.

ಸಮಯೋಚಿತ ನಿಯಂತ್ರಣದಿಂದ ಗ್ರಾಹಕರನ್ನು ಶೋಷಕ ದರ ಏರಿಕೆಯಿಂದ ರಕ್ಷಿಸಿ, ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಬಹುದು. ಸುರಾಜ್ಯ ಅಭಿಯಾನವು ಈ ವಿಷಯದಲ್ಲಿ ಸರ್ಕಾರದ ತ್ವರಿತ ಕ್ರಮ ಹಾಗೂ ಪ್ರಯಾಣಿಕರ ಹಕ್ಕುಗಳ ರಕ್ಷಣೆಯ ನಿರೀಕ್ಷೆಯಲ್ಲಿದೆ.

ಎಡಗಡೆಯಿಂದ ಶ್ರೀ ರಾಮಲಿಂಗ ರೆಡ್ಡಿ, ಸಾರಿಗೆ ಸಚಿವರು, ಶ್ರೀ. ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ, ಶ್ರಿ.ಸುಂದರೇಶ್ ನರಗಲ್ ಶ್ರೀರಾಮ ಸೇನೆ, ಸೌ. ಜ್ಯೋತಿಗೌಡ ಸಮಾಜ ಸೇವಕರು, ಯೋಗ ರಮೇಶ್, ಶ್ರೀ.ಶಿವಯ್ಯ ಶಾಸ್ತ್ರಿ, ವಕೀಲರು ಶ್ರೀ. ತ್ಯಾಗರಾಜ್, ಶ್ರೀ.ನಾರಾಯಣ ಗೌಡ ಸುರಾಜ್ಯ ರಾಜ್ಯ ಅಭಿಯಾನದಲ್ಲಿ ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ