LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿವೇಶನಗಳಿಗೆ ನಕಲಿ e-PID ಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಖಾತೆ ಮಾಡಿ ಹಣ ಕೊಳ್ಳೆ

ಬೆಂಗಳೂರು: “ಎಕರೆ ಲೆಕ್ಕದಲ್ಲಿರುವ ಅನಧಿಕೃತ ಬಡಾವಣೆಯ 22 ನಿವೇಶನಗಳಿಗೆ ನಕಲಿ e-PID ಗಳನ್ನು ಸೃಷ್ಟಿಸಿ, ಕಾನೂನು ಬಾಹಿರವಾಗಿ ಖಾತಾಗಳನ್ನು ಮಾಡಿಕೊಡುವ ಮೂಲಕ ಪಾಲಿಕೆಗೆ ಹತ್ತಾರು ಲಕ್ಷ ರೂಪಾಯಿ ನಷ್ಟ ಉಂಟು ಮಾಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ರಮೇಶ್ ಎನ್. ಆರ್. ಆಗ್ರಹ ಮಾಡಿದರು.news_1787150869_1_181.webp

ಯಶವಂತಪುರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಚೂಡೇನಪುರ (ಕೋಡಿಪಾಳ್ಯ) ಗ್ರಾಮದ ಸರ್ವೆ ನಂಬರ್ 3/4 ರಲ್ಲಿ ಚಿಕ್ಕಮ್ಮ W/o ನಾರಾಯಣಪ್ಪ ಎಂಬುವವರ ಹೆಸರಿನಲ್ಲಿ 34 ಗುಂಟೆ ವ್ಯವಸಾಯದ ಜಮೀನು ಇರುತ್ತದೆ. ಸದರಿ ಜಮೀನನ್ನು ಚಿಕ್ಕಮ್ಮನವರು ಅವರ ಮಕ್ಕಳಾದ ಎನ್. ದೇವರಾಜು ಅವರಿಗೆ ದಿನಾಂಕ 10/04/2019 ರಂದು 24.08 ಗುಂಟೆ ಹಾಗೂ ಕೆ. ಎನ್. ಪ್ರಸನ್ನ ಅವರಿಗೆ ದಿನಾಂಕ 04/10/2019 ರಂದು 9.08 ಗುಂಟೆ ಜಮೀನನ್ನು ದಾನಪತ್ರದ ಮೂಲಕ ಬರೆದುಕೊಟ್ಟಿರುತ್ತಾರೆ.

ಈ ರೀತಿ ದಾನಪತ್ರದ ಮೂಲಕ ಬಂದಿರುವ ಜಮೀನಿನಲ್ಲಿ ಯಾವುದೇ ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪಡೆಯದೆ ಮತ್ತು ನಕ್ಷೆ ಮಂಜೂರಾತಿ ಪಡೆಯದೆ ಅಕ್ರಮ ಬಡಾವಣೆಗಳನ್ನು ನಿರ್ಮಿಸಲಾಗಿರುತ್ತದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅನಧಿಕೃತ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲಾಗಿರುತ್ತದೆ.

ಈ ರೀತಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿರುವ ಅನಧಿಕೃತ ಬಡಾವಣೆಯಲ್ಲಿರುವ 22 ನಿವೇಶನಗಳಿಗೆ 2026 ರ ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೊಸದಾಗಿ e-PID ಗಳನ್ನು ಕಾನೂನು ಬಾಹಿರವಾಗಿ ಸೃಷ್ಟಿಸಿ, ಖಾತಾಗಳನ್ನು ಮಾಡಿಕೊಟ್ಟಿರುವ ಪ್ರಕರಣ ದಾಖಲೆಗಳಿಂದ ಬಹಿರಂಗಗೊಂಡಿರುತ್ತದೆ.

ಇದಲ್ಲದೇ, Scanning ಆಗಿರುವ ಖಾತಾ ಪುಸ್ತಕದಲ್ಲಿ ಖಾಲಿ ಇರುವಂತಹ ನಂಬರ್ಗಳಿಗೆ ಹೊಸದಾಗಿ e-PID ಗಳನ್ನು ನೀಡಿರುವುದು ಸ್ಪಷ್ಟವಾಗಿರುತ್ತದೆ.

ಈ ಸಂಬಂಧ ಹಲವಾರು ಬಾರಿ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರೂ ಸಹ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಿಂದ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ. 

ಆದುದರಿಂದ, ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಎಕರೆಗಳ ಲೆಕ್ಕದಲ್ಲಿರುವ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಬಡಾವಣೆಗೆ ಕಾನೂನು ಬಾಹಿರವಾಗಿ ಮಾಡಲಾಗಿರುವ ಖಾತಾಗಳನ್ನು ಕೂಡಲೇ ರದ್ದುಪಡಿಸುವ ಸಂಬಂಧ ಹಾಗೂ ಸದರಿ ಅನಧಿಕೃತ ಬಡಾವಣೆ ನಿರ್ಮಿಸಿರುವ ಮಾಲೀಕರೊಂದಿಗೆ ಷಾಮೀಲಾಗಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಸಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಹೊಸದಾಗಿ ನಕಲಿ e-PID ಸಂಖ್ಯೆಗಳನ್ನು ಸೃಷ್ಟಿಸಿ, ಖಾತಾಗಳನ್ನು ವರ್ಗಾವಣೆ ಮಾಡಿಕೊಟ್ಟಿರುವ ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯಾಗಿ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ರಮೇಶ್ ರಾಥೋಡ್ (ಮೊ: 9731383407 / 9480685017) ಮತ್ತು ರಂಗಸ್ವಾಮಿ (ಮೊ: 9663000029 / 9480684560), ದ್ವಿತೀಯ ದರ್ಜೆ ಗುಮಾಸ್ತೆ ನಿಖಿತಾ (ಮೊ: 9535906124) ಮತ್ತು ಗಣಕಯಂತ್ರ ನಿರ್ವಾಹಕಿ ಲಕ್ಷ್ಮಿ (ಮೊ: 9060034935 / 8660912977) ಅವರುಗಳ ವಿರುದ್ಧ ಕಾನೂನು ರೀತ್ಯಾ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಲ್ಲದೇ, ಅವರ ವಿರುದ್ಧ “ಇಲಾಖಾ ವಿಚಾರಣೆ”ಗೆ ಆದೇಶಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ GBA ಮುಖ್ಯ ಆಯುಕ್ತರನ್ನು, ವಿಶೇಷ ಆಯುಕ್ತರು (ಕಂದಾಯ) ರವರನ್ನು ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನು ಆಗ್ರಹಿಸಲಾಗಿದೆ.

ಹಾಗೆಯೇ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯಾಗಿ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ರಮೇಶ್ ರಾಥೋಡ್ ಮತ್ತು ರಂಗಸ್ವಾಮಿ, ದ್ವಿತೀಯ ದರ್ಜೆ ಗುಮಾಸ್ತೆ ನಿಖಿತಾ ಮತ್ತು ಗಣಕಯಂತ್ರ ನಿರ್ವಾಹಕಿ ಲಕ್ಷ್ಮಿ ಅವರುಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಲೋಕಾಯುಕ್ತದ IGP ಅವರಿಗೆ ಸಂಪೂರ್ಣ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ.         

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೇಶನಗಳಿಗೆ ನಕಲಿ e-PID ಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಖಾತೆ ಮಾಡಿ ಹಣ ಕೊಳ್ಳೆರಿಯಲ್ ಎಸ್ಟೇಟ್ ಮಾಫಿಯಾಗೆ ಸರ್ಕಾರ ರೈತರ ಭೂಮಿಯನ್ನು ಕಸಿಯುತ್ತಿದೆಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆಗಳ ಅಕ್ರಮಗಳ ಬಗ್ಗೆ ಗೌಡರ ಕಿಡಿವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಿಸಿ, ಶಿಕ್ಷಣ ಸಚಿವರ ಮೂಲಕ ಪ್ರಜಾಪ್ರಭುತ್ವದ ಕಾರ್ಯವೈಖರಿ ಅರಿತ ವಿದ್ಯಾರ್ಥಿಗಳುಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ; CM ಜೊತೆ ಚರ್ಚಿಸಿ ಶೀಘ್ರ ತೀರ್ಮಾನ: ಸಚಿವ ಮಧು ಬಂಗಾರಪ್ಪವಿಧಾನ ಪರಿಷತ್‌ನ ನೂತನ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ : ವಿಜಯಾನಂದ ಕಾಶಪ್ಪನವರ್ ಅಭಿನಂದನೆಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿ ಮಂಕಾಳು ವೈದ್ಯ ಅವಿರೋಧ ಆಯ್ಕೆಆಕಾಶ್ ನಿಂದ ಆಂಥೆ 2026ರ ಪರೀಕ್ಷೆ ಸಿದ್ದತೆ ಪ್ರಾರಂಭಕೆನರಾ ಬ್ಯಾಂಕ್‌ನಿಂದ 80ನೇ ಸ್ವಾತಂತ್ರ್ಯ ದಿನಾಚರಣೆ: ರಾಷ್ಟ್ರ ನಿರ್ಮಾಣದ ಬದ್ಧತೆಯ ಪುನರುಚ್ಚಾರಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ. ರಮೇಶ್ ಗೌಡ ಕರೆ