LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆಗಳ ಅಕ್ರಮಗಳ ಬಗ್ಗೆ ಗೌಡರ ಕಿಡಿ

ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಸತ್ಯವನ್ನು ಮುಚ್ಚಿಟ್ಟು ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಆರೂಪಿಸಿದರು.news_1787073143_0_201.webp

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬಿಡದಿ ಟೌನ್‌ಶಿಪ್ ವಿರೋಧಿ ಬೃಹತ್ ಪ್ರತಿಭಟನಾ ಸಭೆ ಮತ್ತು ವಿಧಾನಸೌಧ ಛಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಏಳೂವರೆ ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಟೌನ್ ಶಿಪ್ ವಿರೋಧಿಸಿ ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿ ಈ ಟೌನ್ಷಿಪ್ ಯೋಜನೆಯನ್ನು ಮುಂದುವರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸತ್ಯವನ್ನು ಮರೆಮಾಚಿ ಯೋಜನೆಯನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ನಿಖಿಲ್ ಕುಮಾರಸ್ವಾಮಿಯವರು ವಾಸ್ತವ ಸಂಗತಿಯನ್ನು ಹೇಳಿದ್ದಾರೆ. ಸಣ್ಣ ಸಣ್ಣ ರೈತರ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರದವರು ಹೊರಟಿದ್ದಾರೆ. ಆ ಭಾಗದಲ್ಲಿ ಫಲವತ್ತಾದ ಕೃಷಿ ಭೂಮಿ ಇದೆ. ತರಕಾರಿ, ತೆಂಗು, ಬಾಳೆ ಬೆಳೆಯುತ್ತಾರೆ. ಲಕ್ಷಾಂತರ ಲೀಟರ್ ಹಾಲನ್ನು ಅಲ್ಲಿನ ಜನರು ಉತ್ಪಾದಿಸುತ್ತಾರೆ. ಇಂತಹ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದರು.

ಸಣ್ಣ ಮತ್ತು ಅತಿ ಸಣ್ಣ ರೈತರು ಆ ಭಾಗದಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. 1,2 3 ಗುಂಟೆ ಜಮೀನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಅಂತವರ ಪರ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ನಾನು ಕೂಡ ಆ ಭೂಮಿಗಳನ್ನು ನೋಡಿದ್ದೇನೆ. ಫಲವತ್ತಾದ ಭೂಮಿ, ಭೂಮಿ ವಶ ಮಾಡಿಕೊಳ್ಳಬೇಡಿ ಎಂದು ಕೋರ್ಟ್ ಹೇಳಿದೆ. ನಾವು ಮೊದಲ ಹಂತದಲ್ಲಿ ನಾವು ಇದ್ದೇವೆ. ಕುಮಾರಸ್ವಾಮಿ ಅವರು ‌ಸಿಎಂಗೆ ಪತ್ರ ಬರೆದಿದ್ದಾರೆ. ನಮ್ಮ ಪಕ್ಷದ ನಿಲುವು ಹೇಳಿದ್ದಾರೆ. ಬಿಜೆಪಿ ಅವರು ಕೂಡ ಈ ಯೋಜನೆಗೆ ವಿರೋಧ ಮಾಡಿದ್ದಾರೆ ಎಂದು ದೇವೇಗೌಡರು ಹೇಳಿದರು. 

ನೈಸ್ ಯೋಜನೆ ಬಗ್ಗೆ ಕೂಡ ಕುಮಾರಸ್ವಾಮಿ ಅವರು ದನಿಯತ್ತಿ ಹೋರಾಟ ನಡೆಸುತ್ತಿದ್ದಾರೆ. ಗೌರವಾನ್ವಿತ ರಾಜ್ಯಪಾಲರು ಕೂಡ ನೈಸ್ ಭೂಮಿಯ ಬಗ್ಗೆ ಮಾತನಾಡಿದ್ದಾರೆ. ನನ್ನ ಕಾಲದಲ್ಲಿ ಸಹಿ ಆಗಿತ್ತು. ಅದು ಜೀವಂತವಾಗಿ ಉಳಿದಿಲ್ಲ. ರಾಜ್ಯಪಾಲರು ಬಿಡದಿ ರೈತರ ಜಮೀನಿಗೆ ಕೈ ಹಾಕಬೇಡಿ ಅಂದಿದ್ದಾರೆ. ಸಿಎಂ ಅವರು ವಿಷಯ ಗೊತ್ತಿಲ್ಲ ಅಂದರೆ ಅವರಿಗೆ ಅವರೇ ವಂಚನೆ ಮಾಡಿಕೊಂಡ ಹಾಗೆ. 25-26 ವರ್ಷದಿಂದ ದಂಧೆ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿಗಳು ಕಿಡಿಕಾರಿದರು.

ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜವಾಬ್ದಾರಿಗಳನ್ನು ಅವರು ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುತ್ತಲೇ ಇರುತ್ತದೆ. ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಮಾನಗಳನ್ನು ಅನುಷ್ಠಾನ ಮಾಡುವ  ಜವಾಬ್ದಾರಿ ಕಾರ್ಯಾಂಗದ್ದು. ಕಾರ್ಯಾಂಗ ಅಸಡ್ಡೆ ತೋರಿಸಿದರೆ ಒಪ್ಪಲು ಸಾಧ್ಯವಿಲ್ಲ. ಶಾಸಕಾಂಗದಲ್ಲಿ ನುರಿತ ಮಾಜಿ ಸಿಎಂ, ಮಂತ್ರಿಗಳು, ಶಾಸಕರ ಇದ್ದಾರೆ. ಎಲ್ಲಾ ಪಕ್ಷಗಳು ಸೇರಿ ಹಿಂದೆ ಸುದೀರ್ಘವಾಗಿ ಮಾತಾಡಿದ್ದಾರೆ. ಹೀಗಾಗಿ ನೈಸ್ ಯೋಜನೆ ವಿರುದ್ಧ ಕ್ರಮ ಜರುಗಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ ಎಂದು ದೇವೇಗೌಡರು ಒತ್ತಿ ಹೇಳಿದರು.

ಸದನದಲ್ಲಿ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು ಎಂದು ಚರ್ಚೆ ಮಾಡಿದ್ದಾರೆ. ಈ ಯೋಜನೆಯ ಒಪ್ಪಂದಕ್ಕೆ ನಾನೇ ಸಹಿ ಹಾಕಿದ್ದೆ. ನೈಸ್ ರಸ್ತೆ ಪೂರ್ಣ ಮುಗಿದ ಮೇಲೆ ಟೌನ್ ಶಿಪ್ ನಿರ್ಮಾಣವಾದ ಮೇಲೆ  ಟೋಲ್ ಸಂಗ್ರಹ ಮಾಡಬೇಕು ಎಂದು ಅಗ್ರಿಮೆಂಟ್ ಇದೆ. ಆದರೆ ಚೌಕಟ್ಟು ಒಪ್ಪಂದ (ಫ್ರೇಮ್ ವರ್ಕ್ ಅಗ್ರಿಮೆಂಟ್) ಉಲ್ಲಂಘಿಸಿ ನೈಸ್ ಕಂಪನಿಯವರು ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಅದರ ವಿರುದ್ಧ ಚರ್ಚೆ ನಡೆದ ಸಂದರ್ಭದಲ್ಲಿ ಇದ್ದ ಸರ್ಕಾರ ನೈಸ್ ಕಂಪನಿಗೆ ನೋಟಿಸ್ ನೀಡುತ್ತದೆ. ಆದರೆ ನೈಸ್ ಕಂಪನಿಯವನು ಅದಕ್ಕೆ ನ್ಯಾಯಾಲಯದಿಂದ ತಡೆ ತರುತ್ತಾನೆ. ಆದರೆ ಆ ತಡೆಯಾಜ್ಞೆಯನ್ನು ತೆರವು ಮಾಡಿಸಲು ಕಾರ್ಯಾಂಗ ವಿಫಲವಾಗುತ್ತದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವನ್ನು ಬಿಜೆಪಿ ಅವರು ನಾಶ ಮಾಡ್ತಾ ಇದ್ದಾರೆ ಅಂತ ಕಾಂಗ್ರೆಸ್ ಹೇಳುತ್ತೆ. ಆದರೆ ಕೋರ್ಟ್ ಟೋಲ್ ಸಂಗ್ರಹ ಅಕ್ರಮ ಅಂತ ಹೇಳಿದೆ. ಕಂಡಿಷನ್ ವಿರುದ್ದ ಯೋಜನೆ ಇದೆ ಅಂತ ಕೋರ್ಟ್ ಹೇಳಿದೆ. ಹೀಗಿದ್ದರೂ ಕಾರ್ಯಾಂಗ ಕಣ್ಣು ಮುಚ್ಚಿ ಕೂತಿದೆ. ಈ ಸರ್ಕಾರ ಶಾಸಕಾಂಗ, ಕಾರ್ಯಾಂಗ, ಅಂಬೇಡ್ಕರ್ ಸಂವಿಧಾನಕ್ಕೆ ಬೆಲೆ ಕೊಟ್ಟಿಲ್ಲ. ನೋವಿನಿಂದ ಹೇಳ್ತಾ ಇದ್ದೇನೆ. ಹೈಕೋರ್ಟ್ ಕಠಿಣ ಭಾಷೆಯಲ್ಲಿ ಹೇಳಿದೆ. ಇದರ ಬಗ್ಗೆ ‌ಮಾತಾಡೋ ನೈತಿಕ ಶಕ್ತಿ ಕೆಲವು ಮುಖಂಡರು ಕಳೆದುಕೊಂಡಿದ್ದಾರೆ.ಸರ್ಕಾರಕ್ಕೆ ಅಭಿವೃದ್ಧಿ ಮಾಡೋಕೂ ಹಣ ಇಲ್ಲ. ಮತ್ತೊಂದು ಕಡೆ ನಿತ್ಯ ನೈಸ್ ನಲ್ಲಿ ಹಣ ಲೂಟಿ ಆಗ್ತಿದೆ. ಕೋರ್ಟ್ ಒಪ್ಪಂದ ಉಲ್ಲಂಘನೆ ಮಾಡಿದೆ ಅಂತ ಹೇಳಿದೆ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಬಿಡದಿ ಬಗ್ಗೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದಕ್ಕೆ ಸಿಎಂ ಉತ್ತರ ಕೊಟ್ಟಿಲ್ಲ. ಬಿಡದಿ ರೈತರ ಪರ ನಾನು ಪಾದಯಾತ್ರೆಗೆ ನಾನು ಹೋಗಿದ್ದೆ. ನನ್ನ ನಿಲುವಿಂದ ನಾನು ಹಿಂದೆ ಹೋಗೊಲ್ಲ. ಅವಶ್ಯತೆ ಬಿದ್ದಾಗ ನಾನು ಹೋರಾಟ ಮಾಡ್ತೀನಿ. ಸರ್ಕಾರ ಅತಿಯಾಗಿ ವ್ಯಕ್ತಿಯನ್ನ ಪರೀಕ್ಷೆ ಮಾಡಬೇಡಿ. ಮುಂದೆ ಯಾವ ಪರಿಣಾಮ ಆಗುತ್ತೋ ಗೊತ್ತಿಲ್ಲ. ಬಿಡದಿ ಟೌನ್ ಶಿಪ್ ಕೈ ಬಿಡಬೇಕು. ಕೋರ್ಟ್ ನಿರ್ಣಯ ಅನುಷ್ಠಾನ ಮಾಡಿ. ಇಲ್ಲವಾದರೆ ನಾನು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಾಜಿ ಪ್ರಧಾನಿಗಳು ನೇರ ಎಚ್ಚರಿಕೆ ನೀಡಿದರು.

ಅವಶ್ಯಕತೆ ಬಿದ್ದರೆ ಮುಂದಿನ ದಿನದಲ್ಲಿ ಸತ್ಯಾಗ್ರಹ ಮಾಡ್ತೀನಿ. ಹಿಂದೆ ಸರಿಯಲ್ಲ. ನೈಸ್ ವಿರುದ್ದವೂ ಕ್ರಮ ಆಗಬೇಕು. ಅಕ್ರಮವಾಗಿ ಕೋರ್ಟ್ ಆದೇಶದ ವಿರುದ್ದ ಹಣ ಸಂಗ್ರಹ ಆಗ್ತಿದೆ. ಇದರ ಬಗ್ಗೆಯೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ದೇವೇಗೌಡರು ಒತ್ತಾಯ ಮಾಡಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಿಯಲ್ ಎಸ್ಟೇಟ್ ಮಾಫಿಯಾಗೆ ಸರ್ಕಾರ ರೈತರ ಭೂಮಿಯನ್ನು ಕಸಿಯುತ್ತಿದೆಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆಗಳ ಅಕ್ರಮಗಳ ಬಗ್ಗೆ ಗೌಡರ ಕಿಡಿವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಿಸಿ, ಶಿಕ್ಷಣ ಸಚಿವರ ಮೂಲಕ ಪ್ರಜಾಪ್ರಭುತ್ವದ ಕಾರ್ಯವೈಖರಿ ಅರಿತ ವಿದ್ಯಾರ್ಥಿಗಳುಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ; CM ಜೊತೆ ಚರ್ಚಿಸಿ ಶೀಘ್ರ ತೀರ್ಮಾನ: ಸಚಿವ ಮಧು ಬಂಗಾರಪ್ಪವಿಧಾನ ಪರಿಷತ್‌ನ ನೂತನ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ : ವಿಜಯಾನಂದ ಕಾಶಪ್ಪನವರ್ ಅಭಿನಂದನೆಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿ ಮಂಕಾಳು ವೈದ್ಯ ಅವಿರೋಧ ಆಯ್ಕೆಆಕಾಶ್ ನಿಂದ ಆಂಥೆ 2026ರ ಪರೀಕ್ಷೆ ಸಿದ್ದತೆ ಪ್ರಾರಂಭಕೆನರಾ ಬ್ಯಾಂಕ್‌ನಿಂದ 80ನೇ ಸ್ವಾತಂತ್ರ್ಯ ದಿನಾಚರಣೆ: ರಾಷ್ಟ್ರ ನಿರ್ಮಾಣದ ಬದ್ಧತೆಯ ಪುನರುಚ್ಚಾರಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ. ರಮೇಶ್ ಗೌಡ ಕರೆಯಾರನ್ನೂ ಗುರಿಯಾಗಿಸಿ ಹೇಳಿಲ್ಲ; ನೋವಾಗಿದ್ದರೆ ವಿಷಾದ – ವಿಜಯಾನಂದ ಕಾಶಪ್ಪನವರ್