LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಪರವಾಹಣೆಗೆ ಭೂ ಮಾಪಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಪರವಾನಗಿ ಭೂಮಾಪಕರ ಸರ್ಕಾರಿ ಹುದ್ದೆಗಳಲ್ಲಿ ವಿನಿಯೋಗ ಗೊಳಿಸುವ ವಿಚಾರ ಸೇರಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ವಿಚಾರವಾಗಿ ಸೇರದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿಯನ್ನು ಸಹ ಮಾಡಿಕೊಳ್ಳಲಾಯಿತು

news_1778855238_0_359.webp

ಬೆಂಗಳೂರು: ಪರವಾನಗಿ ಭೂಮಾಪಕರ ಸರ್ಕಾರಿ ಹುದ್ದೆಯಲ್ಲಿ ವಿಲನೆಗೊಳಿಸಲು ವಿಶೇಷ ನೇಮಕಾತಿ ಮಾಡಿಕೊಳ್ಳುವುದು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಭಾರಿ ಸರ್ಕಾರಕ್ಕೆ ಮನವಿ,ಧರಣಿ ಮಾಡಿದರು ಪ್ರಯೋಜನವಾಗಿಲ್ಲ, ಈಗಾಗಲೇ ಮನವಿಯನ್ನು ಮಾಡಲಾಗಿದ್ದು , ಸರ್ಕಾರದ ಜೊತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪೂರ್ವ ಪರಿಶೀಲನೆ ನಡೆಸಿ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮ ಮಾಪಕರ ಸಂಘದ ರಾಜ್ಯಾಧ್ಯಕ್ಷ ತಿರುಮಲೈ ಗೌಡ ಒತ್ತಾಯವನ್ನ ಮಾಡಿದರು.

ಈ ಸಂಬಂಧ ಬೆಂಗಳೂರಿನ ಪ್ರೆಸ್ ಕಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಕರ್ನಾಟಕದಲ್ಲಿ ಸುಮಾರು 6,000 ಕ್ಕಿಂತ ಹೆಚ್ಚು ಜನ ಭೂ ಮಾಪಕರ ಪರವಾನಗಿ ಪಡೆದವರು ಕೆಲಸವನ್ನು ಮಾಡುತ್ತಿದ್ದಾರೆ. 23 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ ಆದರೆ ಸಂಭಾವನೆ ವಿಚಾರದಲ್ಲಿ ಸಾಕಷ್ಟು ಎರಡು ತೊಡಗುಗಳಿವೆ. ಕರ್ನಾಟಕದಲ್ಲಿ ಸರ್ಕಾರಿ ಸರ್ವೆಯರು ಮತ್ತು ಲೈಸೆನ್ಸ್ ಸರ್ವೇಯರ್ ಎಂದು ಎರಡು ಭಾಗಗಳಿದ್ದು ಅದರಲ್ಲಿ ಸರ್ಕಾರಿ ಸರ್ವೆಯರು 3000 ಇದ್ದು ಲೈಸೆನ್ಸ್ ಪಡೆದ ಸರ್ವೆಯರು 6,000 ಇದ್ದಾರೆ. 

ಲೈಸೆನ್ಸ್ ಪಡೆದ ಸರ್ವೆಯರಿಗೆ ಸರ್ಕಾರ್ದಿಂದ ಬರಬೇಕಾಗಿರುವ ಸಂಭವನಗಳು ಸಕಾಲಕ್ಕೆ ಬರುತ್ತಿಲ್ಲ, ಮೊದಲನೇದಾಗಿ ಇಂಕ್ಲುಮೆಂಟಿಲ್ಲ ಯಾವುದೇ ಭದ್ರತೆಯಲ್ಲ ಸರ್ಕಾರದಿಂದ ಹೀಗಾಗಿ ಲೈಸೆನ್ಸ್ ಪಡೆದಿರುವ ಸರ್ವೆಯರು ಸಾಕಷ್ಟು ತೊಂದರೆಗೆ ಸಿಕ್ಕಿಕೊಂಡಿದ್ದಾರೆ ಎಂದರು.news_1778854937_0_401.webp

ಈ ಸಂಬಂಧ ಸಾಕಷ್ಟು ಹೋರಾಟಗಳ ಫಲವಾಗಿ ಇಲಾಖೆಯಿಂದ ಮುಖ್ಯಮಂತ್ರಿ ಕಚೇರಿ ತನಕ ಕಡತಗಳು ಬಂದಿದ್ದಾವೆ ಈಗ ನಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡುವುದೊಂದೇ ಬಾಕಿ ಇದೆ ಎಂದರು. ಆದರೆ ಇಂದು ನಾಳೆ ಎನ್ನುತ್ತಾ ಮೀನಾ ಮೇಷ ಎಣಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತದೆ ಎಂದರು. 

ಸಂಘದ ಗೌರವ ಅಧ್ಯಕ್ಷ ಕೆಪಿ ಭಾರ್ಗವಲು ಮಾತನಾಡಿ, ಸರ್ಕಾರದವರು ಹಾಗೂ ಪರವಾನಿಗೆ ಪಡೆದ ಸರ್ವೆಯರ್ ಗಳು ಮಾಡುವ ಕೆಲಸ ಎರಡು ಒಂದೇ ಆದರೆ ಲೈಸೆನ್ಸ್ ಪಡೆದ ಸರ್ವೆಯರು ಅತಿ ಶೀಘ್ರವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಜಮೀನುಗಳ ಅಳತೆ ಕಾರ್ಯಗಳಲ್ಲಿಯೂ ಸಹ ನಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. 

ಸರ್ಕಾರಿ ಅವರಿಗೂ ಹಾಗೂ ಪ್ರಶಸ್ತಿ ಪಡೆದವರಿಗೂ ಕೆಲಸದಲ್ಲಿ ಯಾವುದೇ ವ್ಯತ್ಯಾಸಗಳಿಂದ ಆದರೆ ಸರ್ಕಾರದಲ್ಲಿ ಮಾಡುವವರಿಗೆ ವೇತನ ಇದೆ ನಮಗೆ ವೇತನ ಇಲ್ಲ. ಆದರೆ ವೇತನ ಬದಲು ಸೇವಾ ಶುಲ್ಕ ಎಂದು ಕೊಡುತ್ತಿದ್ದಾರೆ ಸರಕಾರದಿಂದ. ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೇಗವಾಗಿ ತರಬೇಕಾದರೆ ಎಂದು ತಿಳಿಸಿದರ ಆದರೆ ಸರ್ಕಾರ ನಮ್ಮ ಬಗ್ಗೆ ಏಕೆ ತಾತ್ಸಾರ ಮನೋಭಾವ ಮಾಡುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಇನ್ನು ಸಂಘದ ಸಂಘಟನಾ ಕಾರ್ಯದರ್ಶಿ ಕೋದಂಡರಾಮ ಮಾತನಾಡಿ, ಭೂಮಾಪಕರ ಹಲವು ಬೇಡಿಕೆ ಈಡೇರಿಕೆಗಾಗಿ 2008 ಹಾಗು 13ರಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯದಂತ ಮುಷ್ಕರವನ್ನು ಮಾಡಿದ್ದೇವೆ, ಇಲ್ಲಿಯವರೆಗೂ ಸಹ ಯಾವುದೇ ಫಲ ನೀಡದಿರುವುದು ಬೇಸರದ ಸಂಗತಿಯಾಗಿದೆ. ಈ ಸಂಬಂಧ ವಿಧಾನಸಭೆಯಲ್ಲೂ ಸಹ ಸಾಕಷ್ಟು ಚರ್ಚೆಗಳು ಸಹ ಆಗಿದವು, ಅಂದು ಕರುಣಾಕರ ರೆಡ್ಡಿಯವರು ಕಂದಾಯ ಮಂತ್ರಿ ಆಗಿದ್ದರು. ಅವರು ಇಲಾಖೆಯಲ್ಲಿ ಅಧಿಕಾರಿಗಳ ಮಾತನ್ನು ಕೇಳಬೇಡಿ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅವಕಾಶವಿದೆ ಅದನ್ನು ಮಾಡಿ ಎಂದು ಅಂದೆ ಹೇಳಿದರು ಆದರೆ ಇಲ್ಲಿವರೆಗೂ ಯಾವುದೇ ಜಾರಿಗೆ ಬಂದಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.news_1778855465_0_740.webp

ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಪಡೆದ ಭೂ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಗೆ ಸಂಬಂಧಿಸಿದಂತೆ ಮೇ ೧೯ ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಸರ್ಕಾರಕ್ಕೆ ಗಮನ ಸೆಳೆಯುವ ಕೆಲಸವನ್ನು ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ನಮ್ಮ ಮೇಲೆ ಹೇರಲಾಯಿತು ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆಕ್ಷೇಪಣೆಗೆ ಪ್ರತ್ಯುತ್ತರವಾಗಿ ಸಮಂಜಸವನ್ನು ಸಹ ನೀಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.news_1778854937_1_824.webp

 ಕಾರ್ಯದರ್ಶಿ ಸಿದ್ದರಾಜು ಸಂಘದ ಸದಸ್ಯರುಗಳಾದ ಷಣ್ಮುಖ ಸೇರಿದಂತೆ ಸಂಘದ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಸರ್ಕಾರಿ ಪರವಾಹಣೆಗೆ ಭೂ ಮಾಪಕರ ಬೇಡಿಕೆ ಈಡೇರಿಕೆಗೆ ಆಗ್ರಹಉಚಿತ 'ರೀ-ನೀಟ್' ಬೆಂಬಲಕ್ಕೆ ನಿಂತ ದೀಕ್ಷಾ ವೇದಾಂತಹಿಜಾಬ್ ವಿಚಾರ ಕೋರ್ಟ್ ನಲ್ಲಿ ಇರುವಾಗಲೇ ಸರ್ಕಾರ ತರಾತುರಿಯಲ್ಲಿ ಆದೇಶ: ಹಿಂದೂ ಪರ ಸಂಘಟನೆಗಳ ಖಂಡನೆದಾವಣಗೆರೆ ಉಪ ಚುನಾವಣೆ ಫಲಿತಾಂಶ ನಂತರ ಕಾಂಗ್ರೆಸ್ಸಿಗೆ ದಿಢೀರ್ ಜ್ಞಾನೋದಯಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮತ್ತೆ ದನಿಯೆತ್ತಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಕಲಾಶ್ರೀ ಸಂಸ್ಥೆಯ 30ನೇ ವರ್ಷದ ಬೇಸಿಗೆ ಶಿಬಿರ ಸಮಾರೋಪ ಯಶಸ್ವಿಸಿದ್ದರಾಮಯ್ಯ ಅವರಿಂದ ಮೈಸೂರು ನಗರದ ಅಭಿವೃದ್ಧಿಕಾರ್ಯಗಳ ಪರಿವೀಕ್ಷಣೆತ್ವರಾ ನೂತನ ಸ್ಟೋರ್ ಉದ್ಘಾಟನೆಯಲ್ಲಿ ಹೊಸ ಶ್ರೇಣಿ ಹೆಲ್ಮೆಟ್ಗಳ ಪರಿಚಯಿನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪ