ಬೆಂಗಳೂರು: ಜಿಗ್ನೇಶ್ ಮೆವಾನಿ ದಲಿತ ನಾಯಕ ನಾಗಿರುವ ಕಾರಣ ಯಾವುದೇ ಕೇಸ್ ತೆಗೆದುಕೊಳ್ಳದೆ ದುಂಡಾವರ್ತನೆ ಮಾಡಿದ್ದಾರೆಂದು ಕೆಪಿಸಿಸಿ ಎಸ್ ಸಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮಸೇನ ಅವರು ತಿಳಿಸಿದರು.
KPCCಯಲ್ಲಿ ಮಾಧ್ಯಮಗೋಷ್ಠಿ ಉದ್ದೇಸಾಇಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜಿಗ್ನೇಶ್ ಮೆವಾನಿ ಅವರು ವಡ್ಗಾಮ್ ಕ್ಷೇತ್ರದ ಶಾಸಕರಾಗಿದ್ದು, ಪರಿಶಿಷ್ಟ ಜಾತಿಯನ್ನು ಪ್ರತಿನಿಧಿಸುತ್ತಿದ್ದಾರೆ. ದಿನಾಂಕ ಸೆ.30ರಂದು ಇನ್ಸ್ಟಾಗ್ರಾಂ ನಲ್ಲಿ ಧವನ್ ದೇವ್ ಎಂಬ ಬಿಜೆಪಿ ಉಸ್ತುವಾರಿಯಾಗಿರುವ ಇವರು ಶಾಸಕರ ವಿರುದ್ಧ ಅತ್ಯಂತ ಕೆಟ್ಟ ಭಾಷೆ ಬಳಸಿ ಪೋಸ್ಟ್ ಮಾಡಿರುತ್ತಾರೆ. ಜತೆಗೆ ಶಾಸಕರ ತಂಗಿಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುತ್ತಾರೆ.
ಈ ವಿಚಾರ ತಿಳಿದ ಜಿಗ್ನೇಶ್ ಮೆವಾನಿ ಅವರು ದೂರು ನೀಡಲು ಹೋದರೆ ಪೊಲೀಸ್ ಅಧಿಕಾರಿಗಳು ಶಾಸಕರ ದೂರನ್ನೇ ಸ್ವೀಕರಿಸುವುದಿಲ್ಲ. ಜಿಗ್ನೇಶ್ ಮೆವಾನಿ ಹಾಗೂ ಕುಟುಂಬದವರ ಜತೆಗೆ ಮುಸಲ್ಮಾನ ಸಮುದಾಯವನ್ನು ಗುರಿಯಾಗಿಸುತ್ತಾರೆ. ಸಮುದಾಯಗಳ ಮಧ್ಯೆ ತಿಕ್ಕಾಟ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಗೋವಿಂದ ಕಾರಜೋಳ ಅವರು ಒಂದು ಹೇಳಿಕೆ ನೀಡಿದ್ದು, ಭಾರತೀಯ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಅವರ ವಿರುದ್ಧ ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗೋವಿಂದ ಕಾರಜೋಳ ಅವರು ಜಿಗ್ನೇಶ್ ಮೆವಾನಿ ಅವರ ಬಗ್ಗೆಯೂ ಹೇಳಿಕೆ ನೀಡಬೇಕು. ಗುಜರಾತ್ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅವರಿಗೆ ಆತಂಕ ಉಂಟುಮಾಡುವುದಾದರೆ, ದೇಶದ ಪರಿಸ್ಥಿತಿ ಏನು? ಈ ವಿಚಾರವಾಗಿ ಕೆಪಿಸಿಸಿ ಎಸ್ ಸಿ ವಿಭಾಗದ ಪದಾಧಿಕಾರಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ.
ಶಾಸಕರ ಮೇಲಿನ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡಿಸುವ ಬದಲು, ಅದನ್ನು ಪ್ರಚಾರ ಮಾಡುತ್ತಿದ್ದಾರೆ. ಜಿಗ್ನೇಶ್ ಅವರು ರಾಷ್ಟ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಬೆಳವಣಿಗೆ ತಡೆಯಲು ಈ ಹುನ್ನಾರ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರತಿಭಟನೆಯಾದ ಬಳಿಕ ಗುಜರಾತಿನಲ್ಲಿ ದೂರು ಸ್ವೀಕರಿಸಿದ್ದಾರೆ. ಕೂಡಲೇ ಧವನ್ ದೇವ್ ಅವರನ್ನು ಬಂಧಿಸಿ, ಗಡಿಪಾರು ಮಾಡಿ ಮಾಡಬೇಕು.