LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಥಳೀಯ ಸಮಸ್ಯೆಗಳಿಗೆ ಸಚಿವ ಶಿವಲಿಂಗೇಗೌಡ ಅವರಿಂದ ಸ್ಥಳದಲ್ಲೇ ಪರಿಹಾರದ ಭರವಸೆ

ತಳಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಸಂಪರ್ಕ ಹಾಗೂ ಪ್ರಜಾ ಸೇವಾ ಆಂದೋಲನ, ಜಲ್ಲಾಪುರ ಕಾಲೋನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು, ಮೊಬೈಲ್‌ ಟವರ್‌ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲಾಗುವುದು

ಹಾಸನ, ಅರಸೀಕೆರೆ :  ಅರಸೀಕೆರೆ ತಾಲ್ಲೂಕಿನ ತಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿವರೆಗೆ ನಡೆದ ಜನಸಂಪರ್ಕ ಸಭೆ ಹಾಗೂ ಪ್ರಜಾ ಸೇವಾ ಆಂದೋಲನದಲ್ಲಿ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರದ ಭರವಸೆ ನೀಡಿದರು.news_1791197779_1_340.webp

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಗ್ರಾಮಗಳ ವಿವಿಧ ಮೂಲಸೌಕರ್ಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ, ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಸಚಿವರು, ತಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಸುಮಾರು 20-25 ವರ್ಷಗಳ ರಾಜಕೀಯ ಪಯಣದಲ್ಲಿ ಸತತವಾಗಿ ನಾಲ್ಕು ಬಾರಿ ತಮ್ಮನ್ನು ಗೆಲ್ಲಿಸಿ, ರಾಜಕೀಯವಾಗಿ ಬೆಳೆಸಿದ ಜನರ ಆಶೀರ್ವಾದದಿಂದಲೇ ಸಚಿವ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಅರಸೀಕೆರೆ ತಾಲ್ಲೂಕಿನ ಇತಿಹಾಸದಲ್ಲಿ ಸಚಿವರಾಗಲು ಸಾಧ್ಯವೇ ಇಲ್ಲ ಎಂಬ ಭಾವನೆಯನ್ನು ತೊಡೆದುಹಾಕಲು ಜನರ ಮತ, ಹೋರಾಟ, ತ್ಯಾಗ ಹಾಗೂ ಆಶೀರ್ವಾದವೇ ಕಾರಣವಾಗಿದೆ ಎಂದರು.

ಜಲ್ಲಾಪುರ ಕಾಲೋನಿಯ ನಿವಾಸಿಗಳ ಬಹುಕಾಲದ ಬೇಡಿಕೆಯಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಂಡು ಭವನವನ್ನು ಕಟ್ಟಿಸಿಕೊಡುವುದಾಗಿ ಸಚಿವ ಶಿವಲಿಂಗೇಗೌಡ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೊಬೈಲ್‌ ಟವರ್‌ ಸ್ಥಾಪನೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಹಾಸನ ಸಂಸದರಾದ ಶ್ರೇಯಸ್‌ ಪಟೇಲ್‌ ಅವರು ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಮತ್ತಷ್ಟು ಒತ್ತಡ ಹಾಕುವ ಮೂಲಕ ಸ್ಥಳೀಯರ ನೆಟ್‌ವರ್ಕ್‌ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.news_1791197778_0_350.webp

ಕಾಳೇನಹಳ್ಳಿ ಹಟ್ಟಿ, ಕೊಂಡೇನಾಳು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮೊಬೈಲ್‌ ಸಂಪರ್ಕದ ಸಮಸ್ಯೆ ಮುಂದುವರಿದಿರುವ ಕುರಿತು ಗ್ರಾಮಸ್ಥರು ಸಚಿವರ ಗಮನ ಸೆಳೆದರು. ಸಂಬಂಧಿಸಿದ ಕೇಂದ್ರ ಸಚಿವಾಲಯದೊಂದಿಗೆ ಮತ್ತೊಮ್ಮೆ ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಇದೇ ವೇಳೆ ಬಿಪಿಎಲ್‌ ಪಡಿತರ ಚೀಟಿಗೆ ಸಂಬಂಧಿಸಿದಂತೆ ಆದಾಯದ ಆಧಾರದ ಮೇಲೆ ಎಪಿಎಲ್‌ಗೆ ವರ್ಗಾವಣೆಯಾಗುತ್ತಿರುವ ಕುರಿತು ಸ್ಥಳೀಯರು ವ್ಯಕ್ತಪಡಿಸಿದ ಆತಂಕವನ್ನೂ ಸಚಿವರು ಆಲಿಸಿದರು. ಅರ್ಹ ಬಡ ಕುಟುಂಬಗಳಿಗೆ ಆಹಾರ ಧಾನ್ಯ ದೊರೆಯುವಂತೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರು ಕಾಂಕ್ರೀಟ್‌ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿದ ಸಭೆ, ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ವೇದಿಕೆಯಾಗಿ ಗಮನ ಸೆಳೆಯಿತು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಥಳೀಯ ಸಮಸ್ಯೆಗಳಿಗೆ ಸಚಿವ ಶಿವಲಿಂಗೇಗೌಡ ಅವರಿಂದ ಸ್ಥಳದಲ್ಲೇ ಪರಿಹಾರದ ಭರವಸೆಕೇಂದ್ರ ಸರ್ಕಾರ ಆದಷ್ಟು ಶೀಘ್ರವಾಗಿ ಬರ ಪರಿಹಾರ ಬಿಡುಗಡೆ ಮಾಡಲಿ: ಸಚಿವ ಕೆ. ಎಂ. ಶಿವಲಿಂಗೇಗೌಡ ಆಗ್ರಹಗ್ರಾಮೀಣ ಸೊಗಡು ಹಾಗೂ ಸಂಸ್ಕೃತಿಯ ಪುನರುಜ್ಜೀವನಕ್ಕೆ ಸಚಿವ ಕೆ. ಎಂ. ಶಿವಲಿಂಗೇಗೌಡ ಕರೆ₹2 ಕೋಟಿ ಅನುದಾನಲ್ಲಿ ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವೆ ಆಂದೋಲನ: ಸಚಿವ ಮಧು ಬಂಗಾರಪ್ಪರೈತನ ಕಣ್ಣೀರ ಶಾಪ ಸರ್ಕಾರಕ್ಕೆ ತಟ್ಟುತ್ತೆ; ರೈತನನ್ನು ಎದುರು ಹಾಕಿಕೊಂಡ ಯಾವ ಸರ್ಕಾರವೂ ಉಳಿದಿಲ್ಲಯುವಕರಲ್ಲಿ  ನಾಯಕತ್ವ ಗುಣ ಮತ್ತು ಸಂಘಟನೆ ಮಾಡಬೇಕುಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ.ಸಿಂಗಪುರದಲ್ಲಿ  ನಾರ್ಡಿಕ್, ತಕ್ರಾಲ್, ಜಾಪ್ಫಾ ಸಹಿತ ಹಲವು ಕಂಪನಿ ಜತೆ ಮಾತುಕತೆಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರ