LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ರಾಜ್ಯ ಒಪ್ಪರ ಸಂಘದ ಕಾರ್ಯವೈಕರಿ ಬಗ್ಗೆ ಅಸಮಾಧಾನ

ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರಿಗೆ ಸಮಾಜದ ಪರವಾಗಿ ಯು ಎರ್ರಿಸ್ವಾಮಿ ಕೊಳಗಲ್ಲು ಅಧ್ಯಕ್ಷರು ಬಳ್ಳಾರಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘ ಇವರಿಂದ ನೇರ ಪ್ರೆಶ್ನೆ

ಕರ್ನಾಟಕ ರಾಜ್ಯ ಉಪ್ಪಾರ ಸಂಘಕ್ಕೆ ಈಗಿನ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಆಯ್ಕೆಯಾಗಿ ಸುಮಾರು 15 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಸಮಾಜದ ಬಂಧುಗಳಿಗೆ ರಾಜ್ಯ ಸಂಘದಲ್ಲಿ ಯಾರು ಪದಾಧಿಕಾರಿಗಳು? ಯಾರು ಸದಸ್ಯರು? ಎಂಬ ಮೂಲಭೂತ ಮಾಹಿತಿಯೇ ತಿಳಿದಿಲ್ಲ. ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಹೆಸರುಗಳನ್ನು ಬಿಟ್ಟರೆ, ಉಳಿದ ಪದಾಧಿಕಾರಿಗಳ ಹೆಸರುಗಳು ಮತ್ತು ಅವರ ಜವಾಬ್ದಾರಿಗಳು ಏನು ಎಂಬುದು ಸಮಾಜದ ಬಂಧುಗಳಿಗೆ ತಿಳಿಯದಿರುವುದು ಅತ್ಯಂತ ವಿಷಾದಕರ ದುಃಖದ ಆಘಾತಕಾರಿ ವಿಷಯವಾಗಿದೆ.

ರಾಜ್ಯ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷರೇ ಪ್ರಧಾನ ಕಾರ್ಯದರ್ಶಿ ಯವರೇ ಹಾಗೂ ಸರ್ವ ಸದಸ್ಯರೇ ನಿಮಗೆಲ್ಲ ನಮ್ಮ ನೇರ ಪ್ರಶ್ನೆ?

ಕಳೆದ 15 ವರ್ಷಗಳಲ್ಲಿ
ಸಂಘದ ಸಾಮಾನ್ಯ ಸಭೆಯನ್ನು ಎಷ್ಟು ಬಾರಿ ನಡೆಸಲಾಗಿದೆ? ಎಲ್ಲಿ ನಡೆಸಲಾಗಿದೆ? 
ಸಮಾಜದ ಅಭಿವೃದ್ಧಿಗೆ ಯಾವ ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ?
ಸಮಾಜಕ್ಕೆ ನೀಡಿರುವ ಸ್ಪಷ್ಟವಾದ ಕೊಡುಗೆಗಳು ಯಾವುವು?
ರಾಜಕೀಯ ಕ್ಷೇತ್ರದಲ್ಲಿ ಸಮಾಜದ ಯುವಕರಿಗೆ ಹಾಗೂ ನಾಯಕರಿಗೆ ಯಾವ ಸ್ಥಾನಮಾನಗಳನ್ನು ಕೊಡಿಸಲಾಗಿದೆ?
ಇವುಗಳ ಬಗ್ಗೆ ಸಮಾಜದ ಜನತೆಗೆ ಸ್ಪಷ್ಟವಾದ ಮಾಹಿತಿ ನೀಡಬೇಕಾದ ಜವಾಬ್ದಾರಿ ರಾಜ್ಯ ಸಂಘದ ಪದಾಧಿಕಾರಿಗಳ ಮೇಲಿದೆ.
ಇನ್ನೂ ಪ್ರಮುಖವಾಗಿ, ಸಮಾಜದ ಕುಲಶಾಸ್ತ್ರೀಯ ಅಧ್ಯಯನ (Ethnographic Study) ಪೂರ್ಣಗೊಂಡು ಸರ್ಕಾರದ ಕೈ ಸೇರಿ ಈಗಾಗಲೇ ಮೂರು ವರ್ಷಗಳು ಕಳೆದಿವೆ. ನಮಗೆ ಅತ್ಯವಶ್ಯಕವಾದ ಮೀಸಲಾತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಎಷ್ಟು ಬಾರಿ ಮನವಿ ಸಲ್ಲಿಸಲಾಗಿದೆ? ಎಂಬುದರ ಬಗ್ಗೆ ಸಮಾಜಕ್ಕೆ ಸ್ಪಷ್ಟ ಉತ್ತರ ನೀವು ನೀಡಬೇಕು.
ಅದೇ ರೀತಿ, ಬನಶಂಕರಿ ಕತ್ರಿಗುಪ್ಪೆಯಲ್ಲಿರುವ ಉಪ್ಪಾರ ಸಮುದಾಯ ಭವನದ ಕಾಮಗಾರಿ ಸುಮಾರು 12 ವರ್ಷಗಳಿಂದ ಆಮೆ ವೇಗದಲ್ಲಿ ನಡೆಯುತ್ತಿದೆ. ಇನ್ನು ಪೂರ್ಣಗೊಂಡಿಲ್ಲ ಯಾಕೆ ಅನುದಾನ ಕೊರತೆಯ ಅಥವ ಇನ್ನಿತರ ವಿಷಯ ಇದ್ದರೆ ಅದರ ಬಗ್ಗೆ ರಾಜ್ಯ ಸಂಘ ಯಾವ ಕ್ರಮ ಕೈಗೊಂಡಿದೆ? ಯಾವ ನಿರ್ಣಯಗಳನ್ನು ತೆಗೆದುಕೊಂಡಿದೆ?
ಶಿವಪುರಿ ಸ್ವಾಮೀಜಿಗಳ ಓಂಕಾರ್ ಹಿಲ್ಸ್ ಹಾಗೂ ಹಿರಿಯೂರಿನ ಭೂಮಿಯ ವಿಚಾರಗಳು ನ್ಯಾಯಾಲಯದಲ್ಲಿ ಯಾವ ಹಂತದಲ್ಲಿವೆ?
ಹಿರಿಯೂರಿನ ಭೂಮಿ ಈಗಾಗಲೇ ಸಮಾಜದ ವಿರುದ್ಧ ಇರುವವರ ಹೆಸರಿಗೆ ಪಹಣಿ ಆಗಿರುವ ಬಗ್ಗೆ  ನಿಮಗೆ ಮಾಹಿತಿ ಇಲ್ಲವೇ? ನ್ಯಾಯಲಯದಲ್ಲಿ ವಾದ ನಡೆಯುತ್ತಿದ್ದರು ಅವರ ಹೆಸರಿಗೆ ಪಹಣಿ ಹೇಗೆ ಆಯಿತು? ಪಹಣಿ ಆದರೂ ಸಹಿತ ಆ ಭೂಮಿ ಇವತ್ತಿನವರೆಗೂ ನಮ್ಮವರ ವಶದಲ್ಲಿರುವ ಕಾರಣ ಅವರನ್ನು ಭೂಮಿ ಒಳಗಡೆ ಬರಲು ಬಿಟ್ಟಿರುವುದಿಲ್ಲ, ಇದಾದರು ನಿಮಗೆ ತಿಳಿದಿದೆಯೇ ಅದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಪಡೆದುಕೊಂಡು ನೀವು ಸಮಾಜದ ಜನತೆಗೆ ಸ್ಪಷ್ಟ ಮಾಹಿತಿ ನೀಡಬೇಕು.

ಭಾರತ ದೇಶದಲ್ಲಿ ಉಪ್ಪಾರ ಸಮುದಾಯದ ಫೀಠ ಅಂದರೆ ಮಧುರೆಯ ಬ್ರಹ್ಮ ವಿದ್ಯಾ ನಗರದಲ್ಲಿ ಇರುವ ಭಗೀರಥ ಪೀಠದ ಅಭಿವೃದ್ಧಿಗೆ ನೀವು ಸರ್ಕಾರದ ಕಡೆಯಿಂದ ವಿಶೇಷ ಅನುದಾನ ಏನಾದರೂ ಕೊಡಿಸಿದ್ದೀರ? ಅದು ಯಾವಾಗ ಯತಾಕ್ಕಾಗಿ ಯಾವ ಕಾರ್ಯ ಮಾಡಲು ಅನುದಾನ ಕೊಡಿಸಿದ್ದೀರಿ? ಸ್ಪಷ್ಟವಾಗಿ ಸಮಾಜಕ್ಕೆ ತಿಳಿಸಿ 

ಸಮಾಜದ ಕುಲಶಾಸ್ತ್ರ ಅಧ್ಯಾಯನದ ಸಾಧಕ ಭೋದಕ ಏನು?

ಸಮಾಜದ ಮಹತ್ವದ ವಿಷಯವಾದ ಕುಲ ಶಾಸ್ತ್ರೀಯ ಅಧ್ಯಯನ ಮುಗಿದು ರಾಜ್ಯ ಸರ್ಕಾರದ ಕೈ ಸೇರಿ ಮೂರು ವರ್ಷಗಳು ಕಳೆಯಿತು. ರಾಜ್ಯ ಸಂಘ ಏಕೆ ಮೌನವಾಗಿದೆ?
ಇಷ್ಟು ವರ್ಷಗಳಿಂದ ಅದೇ ವ್ಯಕ್ತಿಗಳು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು ಎಂಬ ಹುದ್ದೆಗಳನ್ನು ಹಿಡಿದುಕೊಂಡು ಸಮಾಜಕ್ಕೆ ಯಾವ ಸ್ಪಷ್ಟವಾದ ಅಭಿವೃದ್ಧಿ ಕಾರ್ಯ ಮಾಡಲಾಗಿದೆ?
ಸಮಾಜದ ಜನರನ್ನು ಅವನತಿಯ ಕಡೆ ತಳ್ಳುತ್ತಾ, ಯಾವುದೇ ಸ್ಪಷ್ಟ ಕೆಲಸ ಮಾಡದೆ ಕುಳಿತುಕೊಳ್ಳುವುದು ನಾಚಿಕೆಗೇಡಿನ ವಿಷಯವಾಗಿದೆ.

ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಬ್ಬರೇ ಸಮಾಜದ ಸುಪ್ರೀಂ ನಾಯಕರಾ? ಇವರನ್ನು ಬಿಟ್ಟರೆ ಸಮಾಜವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಬೇರೆ ನಾಯಕರು ಸಮಾಜದಲ್ಲಿ ಇಲ್ಲವೇ?
ರಾಜ್ಯ ಸಂಘದ ಉಳಿದ ಎಲ್ಲಾ ಪದಾಧಿಕಾರಿಗಳು ಮೌನವಾಗಿ ಮೂಖ ಪ್ರೇಕ್ಷಕರಾಗಿ ಕುಳಿತುಕೊಳ್ಳುವುದು ಸರಿಯೇ?
ಸಮಾಜದ ಬಗ್ಗೆ ಕಳಕಳಿ, ಚಿಂತನೆ, ಹೊಣೆಗಾರಿಕೆ ನಿಮ್ಮಲ್ಲಿ ಇಲ್ಲವೇ?
ಇಂದು ರಾಜ್ಯ ಸಂಘಟನೆ ಸತ್ತು ಮಲಗಿದೆ.  ರಾಜ್ಯ ಸಂಘ ಸತ್ತುಹೋದ ಕಾರಣ ಜಿಲ್ಲಾ ಸಂಘಗಳು ತಾಲೂಕು ಸಂಘಗಳು ಗ್ರಾಮ ಸಂಘಗಳು ಸತ್ತು ಮಲಗಿವೆ. ಈ ಸ್ಥಿತಿಗೆ ಬರಲು ಕಾರಣ ಯಾರು? ಅದನ್ನು ಪುನರ್ಜೀವಗೊಳಿಸುವ ಹಂಬಲ ನಿಮ್ಮಲ್ಲಿ ಇದೆಯೇ? ಆದ್ದರಿಂದ, ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ತಕ್ಷಣವೇ ಸಭೆ ಕರೆಯಬೇಕು. ಸಮಾಜದ ಆಗುಹೋಗುಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಸ್ಪಷ್ಟವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.
ಅದು ಸಾಧ್ಯವಾಗದಿದ್ದರೆ ಎಲ್ಲರೂ ರಾಜೀನಾಮೆ ನೀಡಿ ಮನೆಗೆ ಹೋಗಬೇಕು.
ಸಮಾಜಕ್ಕಾಗಿ ನಿಷ್ಠೆಯಿಂದ ದುಡಿಯುವ ಹಿರಿಯರಿಗೆ, ಯುವಕರಿಗೆ ಮತ್ತು ಹೋರಾಟಗಾರರಿಗೆ ಅವಕಾಶ ಮಾಡಿಕೊಡಬೇಕು.

ಈ ಹಿನ್ನೆಲೆಯಲ್ಲಿ, ಪರಮಪೂಜ್ಯ ಕುಲಗುರುಗಳಾದ ಡಾ. ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಗಳಲ್ಲಿ ಮನವಿ ನೀವು ಸಮಾಜದ ತಾಯಿ ತಂದೆ ಇದ್ದ ಹಾಗೆ, ಮಕ್ಕಳಿಗೆ ಬೇಕಾದದ್ದನ್ನು ತಂದೆ ತಾಯಿ ಹತ್ತಿರ ಬೇಡಿಕೊಳ್ಳುತ್ತಾರೆ, ಮಕ್ಕಳ ಇಷ್ಟಗಳನ್ನು ಕೊಡಿಸುವುದು ತಂದೆ ತಾಯಿಯವರ ಜವಾಬ್ದಾರಿ ಪೂಜ್ಯರಾದ ತಾವುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಹಿರಿಯರು ಹಾಗೂ ಯುವಕರನ್ನು ಸಭೆ  ಕರೆದು ಸತ್ತು ಹೋಗಿರುವ ರಾಜ್ಯ ಸಂಘವನ್ನು ಜಿಲ್ಲಾ ಸಂಘಗಳನ್ನು ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಬೇಕು  ಎಂದು ನಾವು ರಾಜ್ಯದ ಉಪ್ಪಾರ ಸಮಾಜದ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ.
ಸಮಾಜ ಜಾಗೃತಿ ಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ.

ಏಕತೆ, ಹೋರಾಟ ಮತ್ತು ಜಾಗೃತಿ – ಇವೇ ನಮ್ಮ ಸಮಾಜದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಾಗಿದೆ 

ಜೈ ಭಗೀರಥ 
ಜೈ ಉಪ್ಪಾರ 
ಜೈ ಸಂವಿಧಾನ 

ನಾನು ಸಮಾಜದ ಪರವಾಗಿ ನಿಮ್ಮನ್ನು ನೇರವಾಗಿ ಪ್ರಶ್ನೆ ಮಾಡಿದ್ದೇನೆ ನನ್ನ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಇಲ್ಲವಾದರೆ ರಾಜ್ಯ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ರಾಜೀನಾಮೆ ನೀಡಿ ಇಲ್ಲವಾದರೆ ನೀವು ಕರೆದಲ್ಲಿಗೆ ಬರಲು ಸಮಾಜದ ನಾವು ತಯಾರಿದ್ದೇವೆ ನೀವು 15 ವರ್ಷಗಳಿಂದ ಸಮಾಜದ ಅಭಿವೃದ್ಧಿಗೆ ಏನೇನು ಕಾರ್ಯ ಮಾಡಿದ್ದೀರಿ ಎಂದು ಹೇಳಲು ತಯಾರಿ ನಡೆಸಿ.
  
ಸಮಾಜದ ಬಂಧುಗಳೇ ನಾನು ಸಮಾಜದ ಪರವಾಗಿ ಕೇಳುವುದರಲ್ಲಿ ಏನಾದರೂ ತಪ್ಪು ಕಂಡು ಬಂದರೆ ದಯವಿಟ್ಟು ನಿಮ್ಮ ಮನೆಯವನೆಂದುಕೊಂಡು ಕ್ಷಮೆಯಿರಲಿ   ನಮಸ್ಕಾರ ಎಂದು ಬಳ್ಳಾರಿ ಜಿಲ್ಲಾ ಭಗೀರಥ ಉಪ್ಪಾರ ಸಂಘ ರಿ ಅಧ್ಯಕ್ಷರು  ಎರ್ರಿಸ್ವಾಮಿ ಕೊಳಗಲ್ಲು ನೇರವಾಗಿ ಪ್ರಶ್ನೆ ಮಾಡುವ ಮೂಲಕ ಮನವಿ ಮಾಡಿದರು. ಅದಕ್ಕೆ ಉತ್ತರವೂ ಕೂಡ ಬಂದಿದೆ.

ಸಂಘದ ಬಗ್ಗೆ ಮಾಡಿರುವ ಪ್ರಶ್ನೆಗೆ ಉತ್ತರ ಬಂದಿದೆ news_1779101013_0_620.webp

ಉಪ್ಪಾರ ಸಮಾಜದ ಹಣೆ ಬರಹವನ್ನು ನೀವು ಎಲ್ಲರಿಗೂ ತಿಳಿಸುತ್ತಾ ಇದ್ದೀರಿ ನೂರಕ್ಕೆ ನೂರು ಸತ್ಯ, ಇಷ್ಟೆಲ್ಲ ಗುರುತಿದ್ದು ತಾವು ಮತ್ತೆ ಮಠಕ್ಕೆ ಹೋಗಿ ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿ ಸನ್ಮಾನ ಮಾಡಿಸಿಕೊಂಡು ಬರುತ್ತಿರಿ ಇದು ಯಾವ ಧರ್ಮ? ಏಕೆಂದರೆ ನೀವು ಹೇಳುವುದು ನೂರಕ್ಕೆ ನೂರು ಸತ್ಯ ಸಮಾಜದಲ್ಲಿ ನಿಮ್ಮಂತವರು ಸಮಾಜದ ಬಗ್ಗೆ ಕೇಳುವವರು ಬಹಳ ಜನ ಇದ್ದಾರೆ, ಕೇಳುತ್ತಾ ಇದ್ದಾರೆ, ಕೇಳಿದರು ಇವರು ಕಿವಿ ಮುಚ್ಚಿಕೊಂಡು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ, ಇವರ ಅನುಕೂಲಕ್ಕೆ ತಕ್ಕಂತೆ ರಾಜ್ಯಾಧ್ಯಕ್ಷ ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರು ರಾಜ್ಯದ ತುಂಬ ತಿರುಗಿ ನಾಟಕವಾಡುತ್ತಿದ್ದಾರೆ, ಏಕೆಂದರೆ ಇವರಿಗೆ ಸಮಾಜದ ಮಕ್ಕಳ ಬಗ್ಗೆ ಅರಿವಿಲ್ಲ ತಮ್ಮ ಪ್ರತಿಷ್ಠಿತ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಅಷ್ಟೇ ಇವರಿಗೆ ಬೇಕಾಗಿದೆ, ಇವರಿಗೆ ಕಿಂಚಿತ್ತು ಒಳ್ಳೆ ಹಿತಾಸಕ್ತಿ ಇದ್ದಿದ್ದರೆ ಇವರನ್ನು ಎಷ್ಟೋ ಸಾರಿ ಅವರ ಆಫೀಸಿಗೆ ಅವರ ಮನೆಗೆ ಹೋಗಿ ಕೇಳಿದರು ರಾಜ್ಯಾಧ್ಯಕ್ಷರು ನಾನು ರಾಜ್ಯ ಅಧ್ಯಕ್ಷ ಎಂದು ಯಾರಿಗೆ ಹೇಳಿದ್ದೇನೆ ನಾನು ರಾಜ್ಯಾಧ್ಯಕ್ಷನೆಂದು ಸ್ವಾಮೀಜಿ ಹೇಳುತ್ತಿದ್ದಾರೆ? ನಾನೇನು ಮಾಡಲಿ ನನಗೆ ರಾಜ್ಯ ಅಧ್ಯಕ್ಷ ಮಾಡಿದವರನ್ನು ಕೇಳಿರಿ ಎಂದು ಹೇಳುತ್ತಾರೆ ಹಾಗಾದರೆ ರಾಜ್ಯ ಅಧ್ಯಕ್ಷ ನಾನು ಅಲ್ಲ ಎಂದರೆ ಬಹಿರಂಗವಾಗಿ ಸಭೆ ಸಮಾರಂಭಗಳಲ್ಲಿ ನಾನು ರಾಜ್ಯಾಧ್ಯಕ್ಷನಲ್ಲ ನನ್ನನ್ನು ಯಾರು ಏನು ಕೇಳಬೇಡಿ ಎಂದು ಹೇಳಲಿ ಅಂದಾಗ ಇವರು ಉಪ್ಪಾರ ಸಮಾಜದಲ್ಲಿ ಹುಟ್ಟಿದ್ದಕ್ಕೂ ಸ್ವಾರ್ಥ,  ಭಗೀರಥ ಪೀಠ ಎಂದು ಭಗೀರಥ ಪೀಠಾಧಿಪತಿಗಳು ಎಂದು ಅಖಿಲ ಭಾರತದಲ್ಲಿ ಹೇಳುತ್ತಾ ತಿರುಗುತ್ತಿರುವ ಸ್ವಾಮಿಯು ಕೂಡ ಸಮಾಜದ  ಆಗು ಹೋಗುಗಳ ಬಗ್ಗೆ ವಿಚಾರ ಮಾಡುತ್ತಾ ಇಲ್ಲ ನಾವೆಲ್ಲರೂ ಕೂಡ ಸ್ವಾಮೀಜಿಯನ್ನು ಭಗಿರಥ ಪೀಠದಲ್ಲಿ ಯಾರು ಯಾರು ಇದ್ದವರು ಅವರ ಹುದ್ದೆಗಳೇನು ಅವರ ಹೆಸರುಗಳೇನು ಎಂದು ಕೇಳಿದರೆ ಯಾರು  ಏಕೆ ಹೇಳುತ್ತಿಲ್ಲ? ಭಗೀರಥ ಪೀಠ ಉಪ್ಪಾರ ಸಮಾಜದವರದು ಅಥವಾ ಸ್ವಾಮೀಜಿಯ ವಂಶಸ್ಥರು ಇದನ್ನು ಕೂಡ ಹೇಳುತ್ತಾ ಇಲ್ಲ ಪೀಠದಲ್ಲಿ ಯಾರ್ಯಾರು ಸದಸ್ಯರಿದ್ದಾರೆ, ಪೀಠಾಧ್ಯಕ್ಷರಿದ್ದಾರೆ ಅವರ ಹಿಸ್ಟರಿ ಕೊಡು ಎಂದರೆ ಕೊಡುತ್ತಾ ಇಲ್ಲ, ಲೆಕ್ಕವನ್ನು ಕೊಡುತ್ತಾ ಇಲ್ಲ, ಇಲ್ಲಿಯವರೆಗೆ ಪೀಠಕ್ಕೆ ಸುಮಾರು 20 ರಿಂದ 25 ಕೋಟಿ ಸರ್ಕಾರದ ಅನುದಾನವನ್ನು ಪಡೆದು ಸಮಾಜದ ದೇಣಿಗೆಗಳನ್ನು ಮತ್ತು ಮಿನಿಸ್ಟರ್ ಎಂಎಲ್ಎ ಎಂಪಿ ಗಳಿಂದ ಪಡೆದ ಹಣವನ್ನು ಸಮಾಜದ ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಸುಮಾರು 25ರಿಂದ 50,000 ದುಡ್ಡು ತೆಗೆದುಕೊಂಡು ಹೋಗುತ್ತಾರೆ ಮತ್ತು ಅಲ್ಲಿ ಹೋದ ನಂತರ ಪಾದ ಪೂಜೆ ಮಾಡಿಸಿಕೊಂಡು ಮತ್ತು ಭಿಕ್ಷೆ ಪಾತ್ರೆಗೆ ಹಾಕಿಸಿಕೊಂಡ ವಂತಿಗೆಯನ್ನು ಇವರು ಏನು ಮಾಡಿದ್ದಾರೆ? ಇವರ ಖರ್ಚು ವೆಚ್ಚವನ್ನು ಕೊಡುತ್ತಾ ಇಲ್ಲ ಕೇಳಿದರೆ ಮಠಕ್ಕೆ ಬಂದು ಕೇಳಿರಿ ಎನ್ನುತ್ತಾರೆ, ಮಠಕ್ಕೆ ಬಂದು ಕೇಳಲಿಕ್ಕೆ ಅಲ್ಲಿಯವರು ಇರುವುದಿಲ್ಲ ಇವರ ಸಹಚರರು ಇರುತ್ತಾರೆ. ಆ ಮಠಕ್ಕೆ ಲೆಕ್ಕ ಕೊಡುವವರು ಯಾರು ಅಲ್ಲಿಯ ಸೆಕ್ರೆಟರಿ ಯಾರು ಖಜಾಂಚಿ ಯಾರು ಅಧ್ಯಕ್ಷರು ಯಾರು ಯಾರಿಗೂ ಗೊತ್ತಿಲ್ಲ ಸುಮ್ಮನೆ ಅಲ್ಲಿಗೆ ಹೋಗಿ ಬರಲಿಕ್ಕೆ ಯಾರಿಗೆ ಸಮಯವಿದೆ, ನಿಮ್ಮ ಜಿಲ್ಲೆಯಲ್ಲಿ ಸಮಾಜದವರು ನಿಮಗೆ ಹೆದರಿ ಕುಳ್ಳುತ್ತಿದ್ದಾರೆ ಏಕೆಂದರೆ ಲೆಕ್ಕವನ್ನು ಕೇಳಿದರೆ ಅವರಿಗೆ ಮಠದವರು ಗುಂಡಾ ಗಳಿಂದ  ಧಮ್ಕಿ ಹಾಕಿಸುವುದು ಹೆದರಿಸುವರು ಬೆದರಿಸುವುದು ಮಾಡುತ್ತಾರೆ ಎಂದು ಸುಮ್ಮನೆ ಕುಳಿತಿದ್ದಾರೆ, ಉತ್ತರ ಕರ್ನಾಟಕದವರು, ಬೆಂಗಳೂರಿನವರು ಮೈಸೂರಿನವರು ಕಲ್ಯಾಣ ಕರ್ನಾಟಕದವರು ಲೆಕ್ಕವನ್ನು ಕೇಳಿದರೆ ಲೆಕ್ಕವನ್ನು ಕೊಡುತ್ತಾ ಇಲ್ಲ ಹಾಗಾದರೆ ಮುಂದೆ ಸಮಾಜದ ಗತಿ ಏನು ಲೆಕ್ಕ ಕೊಡುತ್ತಾ ಇಲ್ಲ ಈ ಸಮಾಜದ ಆಸ್ತಿಯಲ್ಲ ಸಮಾಜಕ್ಕೆ ಸಂಬಂಧ ಪಟ್ಟದ್ದು ಏನು ಸ್ವಾಮೀಜಿಯವರು ವಂಶಸ್ಥರಿಗೆ ಸಂಬಂಧ ಇದೆಯೋ ಒಂದನ್ನು ಬಾಯಿಬಿಟ್ಟು ಹೇಳುತ್ತಾ ಇಲ್ಲ, ಕೇಳುವವರಿಗೆ ನಾಚಿಕೆ ಇಲ್ಲದ ಹಾಗೆ ಹೋಗಿದೆ ನೀವು ಬರೆ ಕೇಳುತ್ತಾ ಕುಳಿತಿದ್ದೀರಿ ಮಠದಲ್ಲಿ ಪೀಠದಲ್ಲಿ ರಾಜ್ಯ ಸಂಘದಲ್ಲಿ ಇದ್ದವರೆಲ್ಲರೂ ಕುಳಿತಿದ್ದಾರೆ, ದಯವಿಟ್ಟು ಕರ್ನಾಟಕ ರಾಜ್ಯದ ಉಪ್ಪಾರ ಸಮಾಜದ ಮುಖಂಡರು ಯುವಕರು ಯುವತಿಯರು ರಾಜ್ಯದ ಯಾವುದೇ ಜಿಲ್ಲೆ ತಾಲೂಕುಗಳಲ್ಲಿ ಬಂದಾಗ ಸ್ವಾಮೀಜಿಯನ್ನು ಲೆಕ್ಕ ಕೊಟ್ಟು ಹೋಗುವವರೆಗೆ ಆ ಜಿಲ್ಲೆಯಿಂದ ಹೊರಗೆ ಬಿಡಬಾರದು ಲೆಕ್ಕ ಕೊಟ್ಟು ಹೋಗಬೇಕೆಂದು ಹಿಡಿದು ಕೂಡಿಸಿ ಕೇಳಬೇಕು ಅಂದಾಗ ಸ್ವಾಮೀಜಿಗೆ ರಾಜ್ಯ ಸಂಘದ ಅಧ್ಯಕ್ಷರಿಗೆ ಕಾರ್ಯದರ್ಶಿಗೆ ಎಲ್ಲಾ ಸದಸ್ಯರಿಗೆ ಎಚ್ಚರಿಕೆ ಆಗುತ್ತದೆ.

ನೀವು ವಾಟ್ಸಪ್ ನಲ್ಲಿ ಮೆಸೇಜ್ ಹಾಕಿ ಲೆಕ್ಕ ಕೇಳಿದರೆ ಈ ಮಕ್ಕಳು ಕೊಡುವುದಿಲ್ಲ ಇವರಿಗೆ ಉತ್ತರ ಕರ್ನಾಟಕದಲ್ಲಿ ಬರೇ ಹಚ್ಚಿದರೆ ಮಾತ್ರ ಎಚ್ಚರಗೊಳ್ಳುತ್ತಾರೆ ನೀವು ಕೂಡ ಸ್ವಾಮೀಜಿ ಮಠಕ್ಕೆ ಕರೆದಾಗ ಖುಷಿಯಿಂದ ಓಡಿ ಹೋಗಿ ಸ್ಟೇಜ್ ಮೇಲೆ ಕುಳಿತಾಗ ನಮ್ಮ ಬಳ್ಳಾರಿ ಜಿಲ್ಲೆ ಅಧ್ಯಕ್ಷರು ಏರಿ ಸ್ವಾಮಿಯವರಿಗೆ ಮಾಲಾರ್ಪಣೆ ಎಂದಾಗ ಓಡಿ ಹೋಗಿ ಮಾಲಾರ್ಪಣೆ ಮಾಡಿಸಿಕೊಂಡು ಫೋಟೋ ಹಾಕುತ್ತೀರಿ ಇದು ಯಾವ ಘನಂದಾರಿ ಕೆಲಸ ಮೊದಲು ನೀವು ಮಾಡುವುದು ತಪ್ಪು. ಆ ಮಠಕ್ಕೆ ಹೋಗುವುದು ಬಿಟ್ಟು ಸ್ವಾಮೀಜಿ ನಿಮ್ಮ ಜಿಲ್ಲೆಯಲ್ಲಿ ಬಂದಾಗ ಲೆಕ್ಕ ಕೊಟ್ಟು ಹೋಗು ಇಲ್ಲದಿದ್ರೆ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದರೆ ಎಚ್ಚರಿಕೆ ಕೊಟ್ಟಂತಾಗುತ್ತದೆ. ಮೊನ್ನೆ ಹರಿಹರ ಪೀಠದ ಲಿಂಗಾಯತ ಸಮಾಜದವರು ಲಿಂಗಾಯತ ಸಮಾಜದ ಸ್ವಾಮೀಜಿ ಗೆ ಹೇಗೆ ಮಠದಿಂದ ಪೀಠದಿಂದ ಹೊರಗೆ ಹಾಕಿದರು ಹಾಗೆ ನಮ್ಮ ಮಠದಿಂದ ಪೀಠದಿಂದ ಇವರನ್ನು ಹೊರಗೆ ಹಾಕಿದಾಗ ಮಾತ್ರ ಸಮಾಜ ಉಳಿಯುವುದು ಇನ್ನಾದರೂ ಮುಂದೆ ಹೀಗೆ ಮಾಡಿರಿ ಅಂದರೆ ನಿಮಗೆ ಮರ್ಯಾದೆ ಸಿಗುವುದು ಇಲ್ಲದೆ ಹೋದರೆ ಈ ಮೆಸೇಜ್ ಹಾಕುವುದು ಸರಿಯಾಗುವುದಿಲ್ಲ. 

ಸಮಾಜದ ಮುಖಂಡರು ಪ್ರಜ್ಞಾವಂತರು ಹೇಳಿರುವ ಪ್ರಶ್ನೆಗಳಿಗೆ ಉತ್ತರಗಳಿಗೆ ಸಲಹೆಗಳಿಗೆ ಸಮಾಜದ ಸಂಘದ ಪದಾಧಿಕಾರಿಗಳು ಅಧ್ಯಕ್ಷರು ಉಪಾಧ್ಯಕ್ಷರು ಯಾವ ರೀತಿ ಉತ್ತರ ಕೊಡುತ್ತಾರೆ ಎಂಬುದು ಬಹಳ ಮುಖ್ಯ. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಒತ್ತು: ಸಚಿವ ಚಲುವರಾಯಸ್ವಾಮಿಕಾರ್ಪೊರೇಟ್ ಜಿಹಾದ್ : ಮಿಥ್ಯ ಮತ್ತು ವಾಸ್ತವ’ ಕುರಿತು ವಿಶೇಷ ಸಂವಾದ ಯಶಸ್ವಿ3 ವರ್ಷದಲ್ಲಿ 1,24,10,668 ಮಹಿಳೆಯರಿಗೆ ತಲಾ 60,000 ರೂ. ಗೃಹಲಕ್ಷ್ಮಿ ಪಾವತಿಕೇರಳಂ ಸಿಎಂ ಆಗಿ ವಿಡಿ ಸತೀಶನ ಪ್ರಮಾಣವಚನಕರ್ನಾಟಕ ರಾಜ್ಯ ಒಪ್ಪರ ಸಂಘದ ಕಾರ್ಯವೈಕರಿ ಬಗ್ಗೆ ಅಸಮಾಧಾನಮೇ 21ರಂದು ಕೇಂದ್ರ ಸರ್ಕಾರ ಆಡಳಿತ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ, ರಾಜಭವನ ಚಲೋಬಿಡದಿ ರೈತರ ಪರ ನನ್ನ ಹೋರಾಟ  ಆರಂಭ; ಹೆಚ್.ಡಿ. ದೇವೇಗೌಡರ ಘೋಷಣೆ ಬೆಂ.ಮ.ಸಾ.ಸಂಸ್ಥೆ ನೌಕರರಿಗೆ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಹಟ್ಟಿ ಚಿನ್ನದ ಗಡಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿಹಾಳ ಲಾಭ ಹೆಚ್ಚಳ :ಸಿಎಂ ಅಭಿನಂದನೆಕನಕದಾಸರು ಸಾಮಾಜಿಕ ಅವ್ಯವಸ್ಥೆ ಸರಿಮಾಡಲು ಪ್ರಾಮಾಣಿಕ ಪ್ರಯತ್ನದಿಂದ ವಿಶ್ವಮಾನವರಾಗಿ ಕಾಣಬೇಕು: ಸಿಎಂ ಸಿದ್ದರಾಮಯ್ಯ