
*ಸಮಿತಿ ರಚನೆ*
ವಲಯಗಳ ಜಂಟಿ ಆಯುಕ್ತರುಗಳು ಸಮಿತಿಯ ಮುಖ್ಯಸ್ಥರಾಗಿದ್ದು, ವಲಯಗಳ ಉಪ ಆಯುಕ್ತರುಗಳು – ಸದಸ್ಯ ಕಾರ್ಯದರ್ಶಿಗಳಾಗಿದ್ದು, ವಲಯ ಹಿರಿಯ ಸಹಾಯಕ ತೋಟಗಾರಿಕೆ ಅಧೀಕ್ಷಕರು, ಸಹಾಯಕ ನಿರ್ದೇಶಕರು (ಪಶುಪಾಲನೆ), ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ವಲಯ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಘನತ್ಯಾಜ್ಯ ನಿರ್ವಹಣೆ), ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು , ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಇಂಜಿನಿಯರಿಂಗ್ ವಿಭಾಗವಾರು ಪ್ರತಿ ವಾರ ನಿಗದಿತ ದಿನಾಂಕದಂದು ಸಭೆ ನಡೆಸಿ, ಸಾರ್ವಜನಿಕರ ಅಹವಾಲು,ಕುಂದುಕೊರತೆ ಹಾಗೂ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
*ಸಮಯಬದ್ದ ಪರಿಹಾರ ಕ್ರಮಕ್ಕೆ ಆದ್ಯತೆ*
ವಸತಿ ಸಮುಚ್ಚಯ ಕ್ಷೇಮಾಭಿವೃದ್ಧಿ ಸಂಘ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ದೂರುಗಳು ಹಾಗೂ ಕುಂದುಕೊರತೆಗಳನ್ನು ಸಮಿತಿಯು ಸಮಗ್ರವಾಗಿ ಪರಿಶೀಲಿಸಿ, ನಿಯಮಾನುಸಾರ ಮತ್ತು ಸಮಯಬದ್ಧವಾಗಿ ಪರಿಹಾರ ಒದಗಿಸಲು ಸಮನ್ವಯ ಸಮಿತಿಯ ಮೂಲಕ ಪರಿಣಾಮಕಾರಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
*ಜಂಕ್ಷನ್ ಸುಧಾರಣೆ ಮತ್ತು ನಿರ್ವಹಣೆ*
ಪ್ರತಿ ವಲಯದಲ್ಲಿ ಇಂಜಿನಿಯರಿಂಗ್ ವಿಭಾಗವಾರು 10 ರಿಂದ 20 ಪ್ರಮುಖ ಜಂಕ್ಷನ್‌ಗಳನ್ನು ಗುರುತಿಸಿ, ಜಂಕ್ಷನ್‌ಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು,ಚರಂಡಿ ನಿರ್ವಹಣೆ ಹಾಗೂ ಮುರಿದ ಸ್ಲ್ಯಾಬ್‌ಗಳ ಬದಲಾವಣೆ, ಪಾದಚಾರಿ ಮಾರ್ಗಗಳ ಮಾರ್ಕಿಂಗ್, ಅನಧಿಕೃತ ಜಾಹೀರಾತುಗಳ ತೆರವು, ಅಪಾಯಕಾರಿ ಮರದ ಕೊಂಬೆ ಮತ್ತು ರೆಂಬೆಗಳ ತೆರವು, ರಸ್ತೆ ಮತ್ತುಜೀಬ್ರಾ ಕ್ರಾಸಿಂಗ್ ಹಾಗೂ ಕರ್ಬ್‌ಸ್ಟೋನ್ ಬಣ್ಣ ಬಳಿಯುವ ಮೂಲಕ ಜಂಕ್ಷನ್ ಗಳ ಸಮಗ್ರ ಸುಧಾರಣೆ ಮತ್ತು ನಿರ್ವಹಣೆ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
*ಅನಧಿಕೃತ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ*
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿ, ಈಗಾಗಲೇ ಅಧಿಕಾರ ಪ್ರತ್ಯಾಯೋಜಿಸಿರುವಂತೆ ನಿಯಮಾನುಸಾರ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
*ಪ್ಲೆಕ್ಸ್ / ಬ್ಯಾನರ್ ತೆರವು*

ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್, ಬ್ಯಾನರ್‌ಗಳು ಮತ್ತು ಜಾಹೀರಾತುಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಯಿತು.
*ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ*
2022–23, 2023–24 ಹಾಗೂ 2024–25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳನ್ನು ಮಾನದಂಡಗಳ ಅನ್ವಯ ಪರಿಶೀಲಿಸಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕಲ್ಯಾಣ ಕಾರ್ಯಕ್ರಮದ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವಂತೆ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಅಪರ ಆಯುಕ್ತರು(ಅಭಿವೃದ್ಧಿ) ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದವರು ಅಪರ ಆಯುಕ್ತರು (ಅಭಿವೃದ್ಧಿ) ಶ್ರೀ ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ.ಕೆ, ಸುಧಾ, ಉಪ ಆಯುಕ್ತರಾದ ಶಶಿಕುಮಾರ್, ಮುರಳೀಧರ, ಮುಖ್ಯ ಅಭಿಯಂತರರಾದ ಶ್ರೀ ಲೋಕೇಶ್, ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಂದಾಯಾಧಿಕಾರಿಗಳು ಮತ್ತು ಸಹಾಯಕ ಕಂದಾಯಾಧಿಕಾರಿಗಳು, ಹಿರಿಯ ಸಹಾಯಕ ನಿರ್ದೇಶಕರು(ತೋಟಗಾರಿಕೆ), ಸಹಾಯಕ ನಿರ್ದೇಶಕರು (ಪಶುಪಾಲನೆ), ಸಹಾಯಕ ಪ್ರಧಾನ ವ್ಯವಸ್ಥಾಪಕರು (BSWML) ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.