LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನಸೌಧ ಮುಂಭಾಗ ಜೆಟ್ ಸ್ಪ್ರೇ ವಾಹನದ ಪ್ರಾತ್ಯಕ್ಷಿಕೆ ಪರಿಶೀಲನೆ

ಬೆಂಗಳೂರು : ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗದಲ್ಲಿಯೂ ತಲಾ ಒಂದು ಜೆಟ್ ಸ್ಪ್ರೇ ವಾಹನವನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ ಹೇಳಿದರು.news_1795286880_2_971.webp

ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಬಿ.ಎಸ್.ಡಬ್ಲ್ಯೂ.ಎಂ.ಎಲ್ ನಿಗಮದಲ್ಲಿ ಲಭ್ಯವಿರುವ 5 ಜೆಟ್ ಸ್ಪ್ರೇ ವಾಹನಗಳನ್ನು ಜಿಬಿಎ ವ್ಯಾಪ್ತಿಯ ಪ್ರತಿ ನಗರ ಪಾಲಿಕೆಗೆ ಒಂದರಂತೆ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲು  ನೀಡಿರುವ ಸೂಚನೆಯಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ನಗರ *ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್.ಜಿ ಹಾಗೂ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾ ಚಲಪತಿ ರವರು ನಿನ್ನೆ ರಾತ್ರಿ ವಿಧಾನಸೌಧದ ಮುಂಭಾಗದಲ್ಲಿ ಜೆಟ್ ಸ್ಪ್ರೇ ವಾಹನದ ಪ್ರಾತ್ಯಕ್ಷಿಕೆಯನ್ನು ಪರಿಶೀಲಿಸಿ, ಸ್ವತಃ ಜೆಟ್ ಸ್ಪ್ರೇ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ಅದರ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿದರು*. 

ಈ ವೇಳೆ ಮಾತನಾಡಿದ ಆಯುಕ್ತರು  ಮುಂದಿನ ದಿನಗಳಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳು, ನಾಮಫಲಕಗಳು, ರಸ್ತೆ ಬದಿಯ ಕರ್ಬ್‌ ಗಳು ಹಾಗೂ ಇನ್ನಿತರ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಸ್ಪ್ರೇ ವಾಹನವು ಅನುಕೂಲಕರವಾಗಿದ್ದು, ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗದಲ್ಲಿಯೂ ತಲಾ ಒಂದು ಜೆಟ್ ಸ್ಪ್ರೇ ವಾಹನವನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.news_1795286878_0_853.webp

ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾ ಚಲಪತಿ.ಆರ್, ಜಂಟಿ ಆಯುಕ್ತರುಗಳಾದ ಶ್ರೀ ಹೇಮಂತ್ ಶರಣ್ ಹಾಗೂ ಶ್ರೀಮತಿ ಸಪ್ತಶ್ರೀ, ಮುಖ್ಯ ಅಭಿಯಂತರರಾದ ಶ್ರೀ ವಿಜಯ್ ಕುಮಾರ್, ಹರಿದಾಸ್, ಅಧೀಕ್ಷಕ ಅಭಿಯಂತರರಾದ ಶ್ರೀ ಚಂದ್ರಶೇಖರ್, ಆರೋಗ್ಯಾಧಿಕಾರಿಗಳಾದ ಶ್ರೀ ಶಿವಕುಮಾರ್, ಡಿಜಿಎಂ ಶ್ರೀ ಭೀಮೇಶ್ ನಾಯಕ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತೋಟಗಾರಿಕೆ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರು, ಆರೋಗ್ಯ ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾಷಣ ಮಾಡೋಲ್ಲ, ಜನರ ಅಹವಾಲು ಆಲಿಸೋಣ ಎಂದ ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ 2 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಚಾಲನೆರಸ್ತೆ ಕಾಮಗಾರಿಗಳ ಸುರಕ್ಷತಾ ಕ್ರಮಗಳೊಂದಿಗೆ, ಸಂಚಾರಕ್ಕೆ ತೊಂದರೆಯಾಗದಂತೆ ಕೈಗೊಳ್ಳಿ – ಜಗದೀಶ್.ಜಿವಿಧಾನಸೌಧ ಮುಂಭಾಗ ಜೆಟ್ ಸ್ಪ್ರೇ ವಾಹನದ ಪ್ರಾತ್ಯಕ್ಷಿಕೆ ಪರಿಶೀಲನೆ ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆಯೊಂದಿಗೆ ಹಂಸಜ್ಯೋತಿ ಟ್ರಸ್ಟ್‌ನಿಂದ 71ನೇ ಕನ್ನಡ ನಾಡ ಹಬ್ಬದ ಆಚರಣೆಬಸವ ಮಂಟಪ ಕೃತಿ ವಿವಾದ: ಲೇಖಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ವಿಭೂತಿ ಮಠದ ಶ್ರೀಗಳಿಂದ ಸ್ಪಷ್ಟನೆಕೋಣನಕುಂಟೆ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣ : ಕೃಷ್ಣ ಬೈರೇಗೌಡKSCA ಅಧ್ಯಕ್ಷರಿಂದ ಅಧಿಕಾರ ದುರ್ಬಳಕೆ ಆರೋಪ ಮಾಜಿ ಅಧ್ಯಕ್ಷ ಜಗನ್ನಾಥ್ ದಾಖಲೆ ಬಿಡುಗಡೆMES ನಲ್ಲಿ 71ನೇ ಕನ್ನಡ ರಾಜ್ಯೋತ್ಸವ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆಭಾನುವಾರ ಬ್ರಾಹ್ಮಣ ಮಂಡಳಿಯಿಂದ 132 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ