ಬೆಂಗಳೂರು: ದಿ.ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಅಧಿಕಾರಿ, ನೌಕರರಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಜೊತೆಗೆ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು, ಎಂ.ಇ.ಐ. ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕಿ ಸಿ.ಅನಿತಾರವರು, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕವಿತಾ, ಹಾಸ್ಯ ಕವಿ ದುಂಡಿರಾಜ್, ಕನ್ನಡ ಪರ ಹೋರಾಟಗಾರ ತಲಕಾಡು ಚಿಕ್ಕರಂಗೇಗೌಡರವರು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ , ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್.ಎಂ.ರೇವಣ್ಣರವರು ಮಾತನಾಡಿ, ಶೋಷಿತರು, ಬಡವರ ಪರ ನಮ್ಮ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 524ಪ್ಯಾಂತೀಯ ರಾಜ್ಯಗಳು ಇತ್ತು. ಎಲ್ಲವನ್ನು ಒಂದು ಗೂಡಿಸಲಾಯಿತು. ಅದರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಆಡಳಿತದಲ್ಲಿ
ಕನ್ನಂಬಾಡಿ ಕಟ್ಟೆ, ಸೋಪ್ ಫ್ಯಾಕ್ಟರಿ, ಮೈಸೂರು ಬ್ಯಾಂಕ್, ಹಲವಾರು ಸಂಸ್ಥೆಗಳನ್ನು ಕಟ್ಟಿ ನಾಡಿಗೆ ಕೊಡುಗೆ ನೀಡಿದರು.
ಇಡಿ ಪ್ರಪಂಚ ಬೆಂಗಳೂರಿನತ್ತ ನೋಡುತ್ತಿದೆ ಮಿನಿ ಭಾರತವಾಗಿದೆ.
ಎಸ್.ಮನೋಹರ್ ರವರು ಮಾತನಾಡಿ, MES ಸಂಸ್ಥೆಯ ಅಧಿಕಾರಿ, ನೌಕರರ ಶ್ರಮದಿಂದ ವಾರ್ಷಿಕ ಲಾಭ ಪಡೆದಿದೆ. ಹೊರಗುತ್ತಿಗೆ ನೌಕರರಿಗೆ ಸರಿಸಮಾನ ಕೆಲಸಕ್ಕೆ ವೇತನ ನೀಡಲಾಗುತ್ತಿದೆ.
ಸರ್ಕಾರಕ್ಕೆ 120ಜನರಿಗೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಬೇಕು ಮನವಿ ಸಲ್ಲಿಸಲಾಗಿದೆ. 2025 ಮತ್ತು 2026ಸಾಲಿನಲ್ಲಿ ಲಾಭದತ್ತ ಸಾಗಿದೆ. ಮತ್ತು ಉತ್ಪಾದನೆ ಸಹ ಹೆಚ್ಚಳವಾಗಿದೆ. ಸರ್ಕಾರದಿಂದ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಅನಿತಾರವರು ಮಾತನಾಡಿ, ಭಾಷೆಯ ಮೇಲಿನ ಗೌರವ, ನಾಡಿನ ಇತಿಹಾಸ, ಪರಂಪರೆ ಸಾರಲು ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಎಂ.ಇ.ಐ. ಸಂಸ್ಥೆ ದೇಶದ ಮೊಟ್ಟ ಮೊದಲ ಸ್ಪೀಚ್ ಗೇರ್ ಸಂಸ್ಥೆಯಾಗಿದೆ. ವಿದ್ಯುತ್ ಉಪಕರಣ ಪೊರೈಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ವಹಿವಾಟಿನಲ್ಲಿ 130ಕೋಟಿ ಗುರಿ ತಲುಪಿದ್ದು,
330ಕೋಟಿ ಉತ್ಪಾದನೆಗೆ ಆರ್ಡರ್ ಪಡೆಯಲಾಗಿದೆ, ಅದರ ಜೊತೆಗೆ ಗುಣಮಟ್ಟ, ಉತ್ಪಾದನೆ ಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ತೃಪ್ತಿಯೆ ನಮ್ಮ ಗುರಿಯಾಗಿದೆ ಎಂದು ಹೇಳಿದರು. 
ಇನ್ನು ಇದೇ ವೇಳೆ ಎಂ.ಇ.ಐ. ಸಂಸ್ಥೆಯಲ್ಲಿ ಜರುಗಿದ ಕೀಡಾಕೂಟದಲ್ಲಿ ವಿಜೇತರಾದ ಅಧಿಕಾರಿ, ನೌಕರರಿಗೆ ಬಹುಮಾನ ವಿತರಿಸಲಾಯಿತು.