ಬೆಂಗಳೂರು: ಯಾವುದೇ ಫಲಾಪೇಕ್ಷೆ ಇಲ್ಲದೆ ಸುಟ್ಟಗಾಯ,ಆಸಿಡ್ ದಾಳಿ ಸಂತ್ರಸ್ತೆಯರು,ಅಪಘಾತಗಳಂತವುಗಳಿಗೆ ತುತ್ತಾಗಿ ವಿರೂಪವಾಗಿರುವವರಿಗೆ ಜೀವನ ರೂಪಿಸಿಕೊಳ್ಳುವ ಕೆಲಸವನ್ನು ಫ್ರೆಂಡ್ಸ್ ವೆಲ್ವೇರ್ ಆರ್ಗನೈಸೇಶನ್ (FWO) ಮತ್ತು ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್ ಮಾಡಲಾಗುತ್ತದೆ ಎಂದು ರೋಸ್ಟಾಪ್ಲಾಸ್ಟ್ ಸಂಸ್ಥೆ ಪ್ರತಿನಿಧಿ ವಿಜಯ್ ತಿಳಿಸಿದರು.
ನಂತರ ಮಾತನಾಡಿ, ಸಂಯುಕ್ತವಾಗಿ ಕಳೆದ 30ನೇ ವರ್ಷದ ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರವನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದಾದ್ಯಂತ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಜೀವನ ಬದಲಿಸುವ ಚಿಕಿತ್ಸೆಯನ್ನು ಒದಗಿಸುವ ಉದ್ದೇಶ ಹೊಂದಿದೆ.
ಈ ಶಿಬಿರವು ಮೇ 12 ರಿಂದ ಮೇ 22, 2026ರವರೆಗೆ ಗಿರಿನಗರ, ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಡೆಯಿತು. ಸಿಲಿಂಡರ್ ಸ್ಫೋಟಗಳು, ಗೃಹ ಹಿಂಸಾಚಾರ, ಆಸಿಡ್ ದಾಳಿಗಳು, ಕಾರ್ಖಾನೆ ಅಪಘಾತಗಳು ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾದ ಸುಟ್ಟ ಗಾಯಗಳು ಮತ್ತು ಅವುಗಳಿಂದ ಉಂಟಾದ ರೂಪ ವೈಕಲ್ಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಕಾರ್ಯಕ್ರಮ ಉದ್ದೇಶಿಸಲಾಗಿದೆ. ಚಿಕಿತ್ಸೆಗೆ ಹಣಕಾಸಿನ ಸಾಮರ್ಥ್ಯವಿಲ್ಲದವರಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಈ ಶಿಬಿರಕ್ಕಾಗಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ, ವಿಶೇಷವಾಗಿ ರಾಯಚೂರು, ಬೀದರ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಿಂದ ರೋಗಿಗಳು ನೋಂದಣಿ ಮಾಡುತ್ತಿದ್ದಾರೆ. ಇದುವರೆಗೆ 4500ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ, ಇದು ಈ ಕಾರ್ಯಕ್ರಮದ ಅಗತ್ಯತೆ ಮತ್ತು ಪರಿಣಾಮವನ್ನು ಸ್ಪಷ್ಟಪಡಿಸುತ್ತದೆ.
ಈ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ, ಆಸ್ಪತ್ರೆಗೆ ದಾಖಲು, ಔಷಧಿಗಳು, ಆಹಾರ ಮತ್ತು ಪ್ರಯಾಣ ಸಹಾಯ ಸೇರಿದಂತೆ ಎಲ್ಲಾ ಸೇವೆಗಳು 100% ಉಚಿತವಾಗಿ ಒದಗಿಸಲಾಗುತ್ತದೆ. ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ ಪರಿಣಿತ ವೈದ್ಯರನ್ನು ಒಳಗೊಂಡ ಅನುಭವ ಸಂಪನ್ನ ವೈದ್ಯಕೀಯ ತಂಡವು ಅತ್ಯುನ್ನತ ಮಟ್ಟದ ಆರೈಕೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತಾ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಿದ್ದಾರೆ.
ಸಮಾಜಮುಖಿ ಕಾರ್ಯಕ್ರಮದಲ್ಲಿ ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್ ನ ಪದಾಧಿಕಾರಿ ವಿಜಯ್ , ಫ್ರೆಂಡ್ಸ್ ವೆಲ್ವೇರ್ ಆರ್ಗನೈಸೇಶನ್ನ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಸ್ವಯಂ ಸೇವಕರು ಉಪಸ್ಥಿತಿ.