ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗಾನಸಿರಿ ಕಲಾಕೇಂದ್ರದ ರಜತ ವರ್ಷದ ಉದ್ಘಾಟನೆ ಕಾರ್ಯಕ್ರಮ ಗಾನಸಿರಿ ಗಾನ ನೃತ್ಯೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಕಲಾವಿದರು ತರಹೇವಾರಿ ನೃತ್ಯ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಗಾನಸಿರಿ ಕಲಾಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ.ಕಿರಣ್ ಕುಮಾರ್ ಗಾನಸಿರಿ ಮಾತನಾಡಿ, ಕಳೆದ 24 ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ಸಮೇತ ತರಬೇತಿಯನ್ನು ಸಂಸ್ಥೆಯಲ್ಲಿ ನೀಡಲಾಗಿದೆ. ರಾಜ್ಯದ ಅತಿ ದೊಡ್ಡ ಸುಗಮ ಸಂಗೀತ ಸಂಸ್ಥೆಯಲ್ಲೊಂದು ಗಾನಸಿರಿ ಕಲಾಕೇಂದ್ರವಾಗಿದೆ. ಅನೇಕ ವಿದ್ಯಾರ್ಥಿಗಳು ಕಲಾ ಪ್ರಕಾರಗಳನ್ನು ಕಲಿತು ದೊಡ್ಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.
ಹೀಗಾಗಿ ಸಂಸ್ಥೆಯ ರಜತ ವರ್ಷದ ಉದ್ಘಾಟನೆ ಕಾರ್ಯಕ್ರಮ ಗಾನಸಿರಿ ಗಾನ ನೃತ್ಯೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಪುಟಾಣಿ ಮಕ್ಕಳು,ವಿದ್ಯಾರ್ಥಿಗಳು, ಕಲಾವಿದರು ವೇದಿಕೆ ಮೇಲೆ ತರಹೇವಾರಿ ಸಂಗೀತ,ನೃತ್ಯ ಮಾಡಿ ನೆರೆದಿದ್ದವರನ್ನು ಪುಳಕಿತರನ್ನಾಗಿ ಮಾಡಿದರು. 
ANCE beatz ನ ಸಹಕಾರದಿಂದ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಪುಟಾಣಿ ಮಕ್ಕಳು, ವಾರಾಂತ್ಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಪ್ರೇಕ್ಷಕರು, ಕಲಾಸಕ್ತರು, ಮಕ್ಕಳು, ಮಕ್ಕಳ ಪೋಷಕರು, ಸಾರ್ವಜನಿಕರು ಕಾರ್ಯಕ್ರಮಸಲ್ಲಿ ತುಂಬಿತುಳುಕಿತು.
ಭಾವಗೀತೆ,ಜನಪದಗೀತೆ,ಸದಭಿರುಚಿಯ ನೃತ್ಯಗಳು ಮತ್ತು ಹಿರಿಯ ಕಿರಿಯ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಇನ್ನು ಫ್ಲೂಟ್ ಮಾಂತ್ರಿಕನೆಂದೇ ಹೆಸರಾಗಿರುವ ಫ್ಲೂಟ್ ಗಣೇಶ್ ಅವರು ತಮ್ಮ ಅದ್ಬುತ ಕೊಳಲಿನ ಕಂಟದಿಂದ ತರಹೇವಾರಿ ಗಾಯನವನ್ನು ಕೊಳಲಿನಲ್ಲಿ ನುಡಿಸಿ ಪ್ರೇಕ್ಷಕರಿಂದ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿದರು. ಗಣೇಶ್ ಅವರಿಗೆ ಕಲಾಕೇಂದ್ರದಿಂದ ಸನ್ಮಾನ ಮಾಡಲಾಯಿತು. ಪುತ್ತೂರಿನ ಜನಪ್ರಿಯ ಶಾಸಕಿ ಶಕುಂತಲಾ ಶೆಟ್ಟಿ, ಹೆಸರಾಂತ ಸುಗಮ ಸಂಗೀತ ಖ್ಯಾತ ಕಲಾವಿದೆ ಡಾ.ಜಯಶ್ರೀ ಅವರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ,ಕಲಾವಿದರಿಗೆ ಆಶೀವರ್ಧಿಸಿದರು.
ಗಾನಸಿರಿ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ, ಹಾಗೂ ಇತರ ಯುವ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಅದರಲ್ಲಿ ರಘು ಬಿಜೂರು, ಸುಗಮ ಸಂಗೀತ ಕ್ಷೇತ್ರ, ಹಿಂದೂಸ್ತಾನಿಯಲ್ಲಿ ಅಮೋಘ ಸಾಧನೆ, ಶ್ರೀಲತಾ ಅವರಿಗೆ ಸಾಹಿತ್ಯ, ನೃತ್ಯಕ್ಕೆ ಸಂಬಂಧಿಸಿದಂತೆಮಾಡಿದ ಸುಮಾರು 30ಕ್ಕಿಂತ ಹೆಚ್ಚು ಸಾಧಕರಿಗೆ ವೇದಿಕೆ ಮೇಲೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಾನಸಿರಿ ಸಂಸ್ಥೆಯ ಪದಾಧಿಕಾರಿಗಳು,ಮಕ್ಕಳು, ವಿದ್ಯಾರ್ಥಿಗಳಿ,ಬಂದು ಬಳಗ, ಸಂಗೀತದ ಪ್ರೇಷಕರು,ಪೋಷಕರು,ಸಂಗೀತದ ಗುರುಗಳು ಭಾಗವಹಿಸಿದ್ದರು.