LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿ

ರಿಯಲ್ ಎಸ್ಟೇಟ್ ವ್ಯಾಪಾರಿ' ಕಪಿಮುಷ್ಟಿಯಲ್ಲಿ ಬಿಡದಿ ಭೂಮಿ, ಶಾಂತಿಯುತವಾಗಿ ಪ್ರತಿಭಟನೆ ಮಾಡಲೆತ್ನಿಸಿದ ರೈತರ ಮೇಲೆ ಪೊಲೀಸರ ದಬ್ಬಾಳಿಕೆಗೆ ಖಂಡನೆ, ಮುಖ್ಯಮಂತ್ರಿ, ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಕೇಂದ್ರ ಸಚಿವರ ವಾಗ್ದಾಳಿ.

ನವದೆಹಲಿ : ಬಿಡದಿಯ ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರೈತರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು; 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಗುಡುಗಿದ್ದಾರೆ.news_1790076861_0_438.webp

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಕರ್ನಾಟಕದಲ್ಲಿ ನಾಗರಿಕ ಸರಕಾರವಿದೆಯೋ ಅಥವಾ ರಾಕ್ಷಸ ಸರಕಾರ ಇದೆಯೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ, ಬಲಪ್ರಯೋಗದಿಂದ ಅವರನ್ನು ಹತ್ತಿಕ್ಕಲೆತ್ನಿಸಿದ ದುಷ್ಪ್ರಯತ್ನ ಖಂಡನಾರ್ಹ. ಬಿಡದಿಯ ಭೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ 'ದೈವದ್ರೋಹ'ಕ್ಕೂ ಮೀರಿದ್ದು ಎಂದು ಸಚಿವರು ಕಿಡಿಕಾರಿದ್ದಾರೆ.

ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ. ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ 'ರಿಯಲ್ ಎಸ್ಟೇಟ್ ವ್ಯಾಪಾರಿ' ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಇಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌ.ಡಾಕ್ಟರೇಟ್ ಸ್ವೀಕರಿಸಿದ ಉಪ ವಲಯ ಅರಣ್ಯಧಿಕಾರಿ ಚಂದ್ರಕುಮಾರ್ ಆರ್ ಅವರಿಗೆ ಅಭಿನಂದನೆಗಳು  ಮೂಲಸೌಕರ್ಯ, ಸಬ್ಸಿಡಿ ಸೇರಿ ಹಲವು ಬೇಡಿಕೆ ಈಡೇರಿಕೆ ಕುರಿತು ಉದ್ಯಮಿಗಳ ನಿಯೋಗದೊಂದಿಗೆ ಸಚಿವ ವಿಜಯಾನಂದ ಕಾಶಪ್ಪನವರ್‌ ಸಭೆಸರಳ, ವೇಗದ, ಪಾರದರ್ಶಕ ಮತ್ತು ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ‘ಇ-ಆಸ್ತಿ 2.0’ : ಕೃಷ್ಣ ಬೈರೇಗೌಡಕಸ್ತೂರಿರಂಗನ್ ವರದಿ ಗದ್ದಲ:ಅರಣ್ಯ ಸಚಿವರು ಉತ್ತಮ ನಿರ್ಣಯ ಕೈಗೊಂಡಿದ್ದಾರೆರಾಜ್ಯದ ಅಭಿವೃದ್ಧಿಗೆ   ಆರ್.ಅಶೋಕ್ ಅಡ್ಡಗಾಲು,ಪ್ರತಾಪ್ ಸಿಂಹ ದಲಿತ ವಿರೋಧಿ ವಿರುದ್ದ ಕಾಂಗ್ರೆಸ್ ನಿಂದ ಪ್ರತಿಭಟನೆಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಮಧು ಬಂಗಾರಪ್ಪ ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಸೆ.28 ರಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' - ಪ್ರತಿ ಜಿಲ್ಲೆಗೂ ಪ್ರವಾಸಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆಗೌತಮ ಬುದ್ಧನ ಧ್ಯಾನ ತಂತ್ರಗಳ ಕುರಿತು ಸಂಶೋಧನೆ: ಭೀಮರಾಯ ಅವರಿಗೆ ಪಿಎಚ್.ಡಿ. ಪದವಿ