ಬೆಂಗಳೂರು : ಗೌತಮ ಬುದ್ಧನ ಧ್ಯಾನ ತಂತ್ರಗಳ ಕುರಿತು ಮಹಾಪ್ರಬಂಧ ಮಂಡಿಸಿದ ಯೋಗ ವಿಜ್ಞಾನ ಕ್ಷೇತ್ರದ ಸಂಶೋಧಕರಾದ ಭೀಮರಾಯ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿ ಲಭಿಸಿದೆ.

ಭೀಮರಾಯ ಅವರು “A Critical Study on Meditation Techniques of Gautama Buddha” ಎಂಬ ಶೀರ್ಷಿಕೆಯಡಿ ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಇವರ ಸಂಶೋಧನೆಗೆ ಪ್ರಾಧ್ಯಾಪಕರಾದ ಡಾ. ನಾಗರಾಜ ಬಿ. ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು.
ಗೌತಮ ಬುದ್ಧರು ಪ್ರತಿಪಾದಿಸಿದ ಧ್ಯಾನ ಪದ್ಧತಿಗಳು, ಅವುಗಳ ತಾತ್ವಿಕ ನೆಲೆಗಟ್ಟು ಹಾಗೂ ಮಾನವ ಜೀವನದಲ್ಲಿ ಧ್ಯಾನದ ಮಹತ್ವವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿರುವುದು ಈ ಸಂಶೋಧನೆಯ ಪ್ರಮುಖ ಅಂಶವಾಗಿದೆ. ಬೌದ್ಧ ಧ್ಯಾನ ಪರಂಪರೆಯ ಮೂಲಕ ಮನಸ್ಸಿನ ಏಕಾಗ್ರತೆ, ಮಾನಸಿಕ ಶಾಂತಿ ಮತ್ತು ಆತ್ಮಪರಿಶೀಲನೆಯ ಮಹತ್ವವನ್ನು ಅರಿಯಲು ಈ ಅಧ್ಯಯನ ಸಹಕಾರಿಯಾಗಿದೆ.
ಭೀಮರಾಯ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿರುವುದು ಅವರ ಶೈಕ್ಷಣಿಕ ಹಾಗೂ ಸಂಶೋಧನಾ ಬದುಕಿನ ಮಹತ್ವದ ಮೈಲಿಗಲ್ಲಾಗಿದೆ. ಈ ಸಾಧನೆಗೆ ಕುಟುಂಬದ ಸದಸ್ಯರು, ಸ್ನೇಹಿತರು, ಹಿತೈಷಿಗಳು ಹಾಗೂ ಯೋಗ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ