LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಸ್ತೂರಿರಂಗನ್ ವರದಿ ಗದ್ದಲ:ಅರಣ್ಯ ಸಚಿವರು ಉತ್ತಮ ನಿರ್ಣಯ ಕೈಗೊಂಡಿದ್ದಾರೆ

ಬೆಂಗಳೂರು :ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಮೇಲೆ ರಾಜ್ಯ ಸರ್ಕಾರದ ಪರವಾಗಿ ಅರಣ್ಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಉತ್ತಮ ನಿರ್ಣಯ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ್ದು, ಈ ಸಮಿತಿಯಲ್ಲಿ ಕಂದಾಯ, ಅರಣ್ಯ ಅಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ಉದ್ಯಮಿಗಳು, ಅರಣ್ಯ ಹಾಗೂ ಪರಿಸರ ವಿಷಯದಲ್ಲಿ ಪರಿಣಿತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ವಿಜ್ಞಾನಿಗಳನ್ನು ಸೇರಿಸಲಾಗಿದೆ. ಈ ಸಮಿತಿಯು ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮಕೈಗೊಳ್ಳಲಾಗುವುದು. ಭೌತಿಕವಾಗಿ ಸರ್ವೇ ಸಂಖ್ಯೆವಾರು ಸಮೀಕ್ಷೆ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆ ನಡೆಸಲು 1 ವರ್ಷ ಕಾಲಾವಕಾಶ ನೀಡುವಂತೆ ಕೇಂದ್ರಕ್ಕೆ ಕೇಳಲು ತೀರ್ಮಾನಿಸಿದ್ದಾರೆ.news_1790077084_2_778.webp

ಕೇರಳದಲ್ಲಿ ಒಮನ್ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ಭೌತಿಕ ಸಮೀಕ್ಷೆ ಮಾಡಲಾಗಿತ್ತು. ಉತ್ತರ ಕನ್ನಡದಲ್ಲಿ 80% ಕಾಡು ಪ್ರದೇಶವಿದೆ. ಅಲ್ಲಿ ಇವತ್ತಿನವರೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಸೂಕ್ಷ್ಮ ವಿಚಾರ. ಪಶ್ಚಿಮ ಘಟ್ಟದಲ್ಲಿ ಮೋಡಗಳು ತಗುಲಿ ನಮ್ಮಲ್ಲಿ ಮಳೆ ಬರುವುದು. ಈ ಪ್ರದೇಶಗಳಿಗೆ ಬರುವ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ತನ್ನ ಹಾಗೂ ತನ್ನ ಕುಟುಂಬಕ್ಕಾಗಿ ಬರುತ್ತಾನೆ ಹೊರತು, ದೇಶಕ್ಕಾಗಿ ಬರುವುದಿಲ್ಲ. ದೇಶಕ್ಕೆ ಅವರ ಕೊಡುಗೆಯನ್ನು ಮುಂದೆ ಪರಿಸರಕ್ಕೆ ಧಕ್ಕೆಯಿಂದಾಗುವ ಅನಾಹುತಗಳ ಜೊತೆ ಹೋಲಿಕೆ ಮಾಡಿ ಆಲೋಚಿಸಬೇಕು. ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ?

ಈ ತಜ್ಞರ ಸಮಿತಿ ಮಾಡುವಾಗ ಎಲ್ಲಾ ಪರಿಸರ, ದೇಶದ ಮೇಲೆ ಕಾಳಜಿ ಇರುವ, ಅರಣ್ಯ ಸಂಪತ್ತು ಕಾಪಾಡುವ ಆಲೋಚನೆ ಇರುವ ನ್ಯಾಯಾಧೀಶರನ್ನು ಸಮಿತಿಗೆ ಸೇರಿಸಿಕೊಳ್ಳಬೇಕು. ನಮ್ಮಲ್ಲಿ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಇದೆ. ಆದರೆ ಬೆಂಗಳೂರಿನಲ್ಲಿ ಮಾಲೀನ್ಯ ಕಡಿಮೆಯಾಗಿದೆಯೇ? ಇಲ್ಲ. ಹೀಗಾಗಿ ದೇಶ ಹಾಗೂ ರಾಜ್ಯದ ಅರಣ್ಯ ಸಂಪತ್ತಿನ ಬಗ್ಗೆ ಅನುಕಂಪ ಇರುವವರನ್ನು ಒಳಗೊಂಡಂತೆ ಸಮಿತಿ ರಚಿಸಿ ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡುವೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌ.ಡಾಕ್ಟರೇಟ್ ಸ್ವೀಕರಿಸಿದ ಉಪ ವಲಯ ಅರಣ್ಯಧಿಕಾರಿ ಚಂದ್ರಕುಮಾರ್ ಆರ್ ಅವರಿಗೆ ಅಭಿನಂದನೆಗಳು  ಮೂಲಸೌಕರ್ಯ, ಸಬ್ಸಿಡಿ ಸೇರಿ ಹಲವು ಬೇಡಿಕೆ ಈಡೇರಿಕೆ ಕುರಿತು ಉದ್ಯಮಿಗಳ ನಿಯೋಗದೊಂದಿಗೆ ಸಚಿವ ವಿಜಯಾನಂದ ಕಾಶಪ್ಪನವರ್‌ ಸಭೆಸರಳ, ವೇಗದ, ಪಾರದರ್ಶಕ ಮತ್ತು ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ‘ಇ-ಆಸ್ತಿ 2.0’ : ಕೃಷ್ಣ ಬೈರೇಗೌಡಕಸ್ತೂರಿರಂಗನ್ ವರದಿ ಗದ್ದಲ:ಅರಣ್ಯ ಸಚಿವರು ಉತ್ತಮ ನಿರ್ಣಯ ಕೈಗೊಂಡಿದ್ದಾರೆರಾಜ್ಯದ ಅಭಿವೃದ್ಧಿಗೆ   ಆರ್.ಅಶೋಕ್ ಅಡ್ಡಗಾಲು,ಪ್ರತಾಪ್ ಸಿಂಹ ದಲಿತ ವಿರೋಧಿ ವಿರುದ್ದ ಕಾಂಗ್ರೆಸ್ ನಿಂದ ಪ್ರತಿಭಟನೆಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಮಧು ಬಂಗಾರಪ್ಪ ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಸೆ.28 ರಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' - ಪ್ರತಿ ಜಿಲ್ಲೆಗೂ ಪ್ರವಾಸಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆಗೌತಮ ಬುದ್ಧನ ಧ್ಯಾನ ತಂತ್ರಗಳ ಕುರಿತು ಸಂಶೋಧನೆ: ಭೀಮರಾಯ ಅವರಿಗೆ ಪಿಎಚ್.ಡಿ. ಪದವಿ