LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಾಲಿಕೆ ವ್ಯಾಪ್ತಿಯಲ್ಲಿ ಶ್ವಾನಗಳಿಗೆ ಲಸಿಕೆ-ಸಂತಾನಹರಣ ಕಾರ್ಯಕ್ರಮದ ಮಾಹಿತಿ

ಬೆಂಗಳೂರು: ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟಾರೆ 69341 ಬೀದಿ ಶ್ವಾನಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಕಳೆದ ಒಂದು ತಿಂಗಳಿನಲ್ಲಿ 465 ಶ್ವಾನಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಲ್ಲಿ ಬಹಿರಂಗ.news_1783968355_0_405.webp

ಇದಲ್ಲದೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ–2ರ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರನಗರ ವಾರ್ಡ್‌ನಲ್ಲಿ ಶ್ವಾನಗಳ ಲಸಿಕಾಕರಣ ಕಾರ್ಯಕ್ರಮದ ಸಂಬಂಧ ಇಂದು ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಲಸಿಕಾಕರಣ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಬೆಂಗಳೂರಿನ ಇತರೆ ಪಾಲಿಕೆಗಳ ವ್ಯಾಪ್ತಿಯಲ್ಲೂ ಬೀದಿ ಶ್ವಾನಗಳ ಸಂತಾನಹರಣ ಚಿಕಿತ್ಸಾ ಕಾರ್ಯ ಅತ್ಯಂತ ವೇಗದಿಂದ ಸಾಗಿದೆ. ಅದರ ಬಗ್ಗೆಯೂ ಸಂಪೂರ್ಣ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುತ್ತದ. 

ಸಚಿವ ಕೃಷ್ಣ ಬೈರೆಗೌಡ ಅವರು ಪಾಲಿಕೆ ಅಧಿಕಾರಿಗಳಿಗೆ ಚಳಿ ಬಿಡಿಸಿದ ಹಿನ್ನೆಲೆ, ಕಕ್ಕಾಬಿಕ್ಕಿಯಾಗಿ ತಲೆನೋವಾಗಿ ಪತಿಣಮಿಸಿದೆ. GBAಗೆ ಮೇಯರ್ ಇಲ್ಲದ ಕಾರಣ ಅಧಿಕಾರಿಗಳ ದರ್ಭಾರ್ ಹೆಚ್ಚಾಗಿದ್ದು, ಗುಣಮಟ್ಟದ ಕಾರ್ಯಗಳು ನಡೆದಿಲ್ಲ ಎಂಬುದು ಸಚಿವರು ನಡೆಸಿದ ಸಭೆಯಲ್ಲಿಯೇ ತಿಳಿಸಿದರು. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೂವಿನ ಹಡಗಲಿ ಇಂಜಿನಿಯರಿಂಗ್‌ ಕಾಲೇಜಿಗೆ ಎಂ.ಪಿ. ಪ್ರಕಾಶ್‌ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ : ಮಾಜಿ CM ಸಿದ್ದರಾಮಯ್ಯಪಾಲಿಕೆ ವ್ಯಾಪ್ತಿಯಲ್ಲಿ ಶ್ವಾನಗಳಿಗೆ ಲಸಿಕೆ-ಸಂತಾನಹರಣ ಕಾರ್ಯಕ್ರಮದ ಮಾಹಿತಿPM-SRI ಯೋಜನೆಯಡಿ ಯೋಗ ಕರಾಟೆ ತರಬೇತಿ ಒಬ್ಬರೇ ಶಿಕ್ಷಕರಿಂದ ನಡೆಸುವ ಆದೇಶ ಮರುಪರಿಶೀಲಿಸಿಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ : ನ್ಯಾಯಮೂರ್ತಿ  ಡಾ. ವಿ. ಶ್ರೀಶಾನಂದಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು :ಮಾಜಿ ಸಿಎಂ ಸಿದ್ದರಾಮಯ್ಯಬೀದಿಬದಿ ವ್ಯಾಪಾರಿಗಳ ಬದುಕಿನೊಂದಿಗೆ ಚೆಲ್ಲಾಟ ನಿಲ್ಲಿಸಿ - ಎಎಪಿ  ಆಗ್ರಹಅಯೋದ್ಯೆ ಶ್ರೀರಾಮನಲ್ಲಿನ ಹಣನೂ ಬಿಡದ ಕಳ್ಳರಿಗೆ ಸುಪ್ರೀಮ್ ಕೋರ್ಟ್ ನ್ಯಾ.ತನಿಖೆಯಾಗಲಿಬೆಂಗಳೂರು ಭಾರತದಲ್ಲಿ GCC ಕಚೇರಿ ವಹಿವಾಟುಗಳಲ್ಲಿ ಮುನ್ನಡೆ, ನಿರಂತರ ಬೇಡಿಕೆಯಿಂದ ವಸತಿ ಬೆಲೆಗಳು 9% ಏರಿಕೆ: ನೈಟ್ ಫ್ರಾಂಕ್ ಇಂಡಿಯಾಐದು ವರ್ಷದ ಮಗುವಿನ ಲಿವರ್ ದಾನದಿಂದ 13 ವರ್ಷದ ಬಾಲಕಿಗೆ ಹೊಸ ಬದುಕುಬೀದಿಬದಿ ವ್ಯಾಪಾರಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ಕೆಲ ಅಂಶಗಳು ಚರ್ಚೆ