LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿಬದಿ ವ್ಯಾಪಾರಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ಕೆಲ ಅಂಶಗಳು ಚರ್ಚೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ದೃಷ್ಟಿಯನ್ನು ಇಟ್ಟುಕೊಂಡು ಪುಟ್ ಪಾತುಗಳು ಹಾಗೂ ಅನಾವಶ್ಯಕವಾಗಿ ರಸ್ತೆ ಪಕ್ಕದಲ್ಲಿರುವ ಬೆಳವಣಿಗೆಗಳನ್ನು ಎತ್ತಂಗಡೆ ಮಾಡಿಸುತ್ತಿರುವ ಸಚಿವ ಕೃಷ್ಣ ಭೈರೇಗೌಡ ಅವರ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಧರಣಿ ನಡೆಸಿದರು.news_1783615299_2_394.webp

ಈ ಸಂಬಂಧ ಸಚಿವರು ಬೀದಿಬದಿ ವ್ಯಾಪಾರಿಗಳ ಜೊತೆ ಸಭೆ ನಡೆಸಿದರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ಪದಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು/ಸೂಚನೆಗಳು.

* ಸರ್ಕಾರ ಬಡವರ ಪರವಾಗಿ ಸದಾ ಇರುತ್ತದೆ, ನಾಗರಿಕರು ಓಡಾಡಲು ಸುಗಮ ಮಾರ್ಗ ನಿರ್ಮಿಸಲು ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ

* ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವನ ನಡೆಯಬೇಕೆನ್ನುವುದೇ ನಮ್ಮ ಆಶಯ. ಸುಪ್ರಿಂ ಕೋರ್ಟ್ ಆದೇಶವನ್ನು ನಾವು ಪಾಲಿಸಿಕೊಂಡು ಪಾದಚಾರಿ ಮಾರ್ಗದಲ್ಲಿರುವೆಲ್ಲಾ ಒತ್ತುವರಿಗಳನ್ನು ತೆರವುಗೊಳಿಸುತ್ತಿದ್ದೇವೆ.

* ಪಾದಚಾರಿ ಮಾರ್ಗಗಳಲ್ಲಿ ಜನ ಓಡಾಡಲು ಸುಗಮ ಮಾರ್ಗವಿರಬೇಕು. ಅದರಲ್ಲಿ ಯಾವುದೇ ರಾಜಿಯಿಲ್ಲ. 

* ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಬೀದಿ ಬದಿ ವ್ಯಾಪಾರಿಗಳ ಸಹಕಾರ ಪ್ರಮುಖವಾಗಿ ಬೇಕಿದೆ. ನಗರದ ಪ್ರಮುಖ ರಸ್ತೆಗಳಾದ 1,500 ಕಿ.ಮೀ ರಸ್ತೆಗಳಲ್ಲಿ ವ್ಯಾಪಾರ ಮಾಡಬೇಕಿ. ಉಳಿದ ಶೇ. 80-90 ರಷ್ಟು ವಾರ್ಡ್ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕೆ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ. 

* ನಗರದಲ್ಲಿ ನಿನ್ನೆಯವರೆಗೆ 430 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ. ಇದನ್ನು ನಿರಂತರವಾಗಿ ಮುಂದುವರಿಸಲಾಗುವುದು.

* ಪಾದಚಾರಿ ಮಾರ್ಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಮಾತ್ರವಲ್ಲದೆ, ಶಾಪ್ಸ್, ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಶೀಟ್ಸ್/ಮೇಲ್ಚಾವಣಿ/ಕೆನೋಪಿ, ಮೆಟ್ಟಿಲುಗಳುರ‍್ಯಾಂಪ್ಸ್/ತಡೆಗೋಡೆಗಳು, ಜಾಹೀರಾತು/ನಾಮಫಲಕಗಳು, ತಾತ್ಕಾಲಿಕ/ಶಾಶ್ವತ ಶೆಡ್ ಗಳುನ್ನು ಕೂಡಾ ತೆರವುಗೊಳಿಸಲಾಗುತ್ತಿದೆ. news_1783615299_1_434.webp

* ಮುಂದಿನ ದಿನಗಳಲ್ಲಿ ಪಾರ್ಕಿಂಗ್, ಗಾರ್ಡನ್ ಸೇರಿದಂತೆ ಪಾದಚಾರಿ ಮಾರ್ಗಗಳಲ್ಲಿರುವ ಎಲ್ಲಾ ಅಡೆತಡೆಗಳನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳುತ್ತೇವೆ

* ಸುಪ್ರಿಂ ಕೋರ್ಟ್ ಅದೇಶ್ ಹಾಗೂ ಬೀದಿ ಬದಿ ವ್ಯಾಪಾರಿಗಳಿಗಾಗಿ ಇರುವ ಕಾಯ್ದೆ/ಕಾನೂನು ಅನುಷ್ಟಾನವನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗುವುದು.

* ಸುಪ್ರಿಂ ಕೋರ್ಟ್ ಕೋರ್ಟ್ ನವರು ಹೊಸ ಐಡಿ ಕೊಡಲು ಹೇಳಿದ್ದಾರೆ, ವಿತರಿಸಲು ಹೇಳಿದ್ದೇನೆ

* ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹೊಸ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. 

ಸಭೆಯಲ್ಲಿ ಮಾಜಿ ರಾಜ್ಯಸಭಾ ಸಂಸದರಾದ ಶ್ರೀ ರಾಜೀವ್ ಗೌಡ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕಾನೂನು ಕೋಶ ವಿಭಾಗದ ಮುಖ್ಯಸ್ಥರಾದ ಚಂದ್ರ ಶೇಖರ್ ಪಾಟೀಲ್, ಸಹಾಯ ಆಯುಕ್ತರಾದ ಮುರಳಿ, ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀದಿಬದಿ ವ್ಯಾಪಾರಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ಕೆಲ ಅಂಶಗಳು ಚರ್ಚೆBwssbಯಲ್ಲಿ ನೇರ ನೇಮಕಾತಿ ಅಧಿಸೂಚನೆಗಳಿಗೆ ದಾಖಲಾತಿ ಪರಿಶೀಲನೆಪ್ರೀತಿಯಲ್ಲಿ ಕಿರಿಕ್ ಪ್ರಿಯತಮದಿಂದ ಪ್ರೀತಮಗೆ ಚಾಕು ಇರಿತ ಆಸ್ಪತ್ರೆ ಪಾಲುನಮ್ಮ ಪಂಚರತ್ನ  ಸಿನೆಮಾ ಟೈಟಲ್ ಲಾಂಚ್ ಮಾಡಿದ ಶಾಸಕ ಗೋಪಾಲಯ್ಯನಜೀರ ಅಹ್ಮದ ಶೇಖ್ ಗೆ MLC ನಾಮನಿರ್ದೇಶನಕ್ಕೆ ಕಿತ್ತೂರು ಮುಸ್ಲಿಂ ವೇದಿಕೆಯಿಂದ ಒತ್ತಾಯಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿರುವ ವಾಹನಗಳ ತೆರವು ಹಾಗೂ ಹರಾಜು: ಮಹೇಶ್ವರ್ ರಾವ್ವಿಶ್ವ ಚಾಕೊಲೇಟ್ ದಿನದಂದು ಐಐಎಚ್‌ಎಂ ಬೆಂಗಳೂರಿನ ವಿದ್ಯಾರ್ಥಿಗಳಿಂದ ಅರಳಿದ 'ಚಾಕೊಲೇಟ್ ಕಲೆ ಮಕ್ಕಳಿಗೆ ಹಣ ಸಹಾಯದ ಜೊತೆ ವಿದ್ಯೆಯ ಮಾರ್ಗ ತೋರಿಸುವುದು ಮುಖ್ಯ:ರೊ.ಅಪರ್ಣಎಸ್ಐಆರ್ ದುರುಪಯೋಗ; ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಕೊಟ್ಟ ಎನ್ ಡಿ ಎ