LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪುಟ್ಟೇನಹಳ್ಳಿ ಕೆರೆ ಸಮೀಪದ ವಾಟರ್ ಲಾಗಿಂಗ್ ಪ್ರದೇಶ ಪರಿಶೀಲನೆ

ಬೆಂಗಳೂರು :  ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್* ಅವರು ಇಂದು ಪುಟ್ಟೇನಹಳ್ಳಿ ಕೆರೆ ಸಮೀಪದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ಸ್ ಹಾಗೂ ಎಸ್ಟೀಮ್  ನಾರ್ತ್ ವುಡ್ ಅಪಾರ್ಟ್‌ಮೆಂಟ್ ಪ್ರದೇಶಗಳಲ್ಲಿ ಉಂಟಾಗುತ್ತಿರುವ ವಾಟರ್ ಲಾಗಿಂಗ್ ಸಮಸ್ಯೆಯನ್ನು ಸ್ಥಳ ಪರಿಶೀಲನೆ ನಡೆಸಿದರು.news_1779279087_2_530.webp

ಹಿಂದೆ ಪುಟ್ಟೇನಹಳ್ಳಿ ಕೆರೆಗೆ ಸಂಪರ್ಕ ಹೊಂದಿದ್ದ ರಾಜಕಾಲುವೆಯಲ್ಲಿ ಕೊಳಚೆ ನೀರು ಬರುತಿದ್ದ ಕಾರಣ ಕಾಲುವೆ ಮುಚ್ಚಲಾಗಿತ್ತು.   

2024ರ ಭಾರೀ ಮಳೆಯ ಸಂದರ್ಭದಲ್ಲಿ ಈ ಪ್ರದೇಶ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಹಿನ್ನೆಲೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ವಿಷಯವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ವರೆಗೆ ಹೋಗಿ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಆದೇಶವೂ ಜಾರಿಯಾಗಿತ್ತು. ಬಳಿಕ ಒಳಚರಂಡಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು, ಅನುಮತಿ ನೀಡಲಾಗಿದ್ದು, ಪ್ರಸ್ತುತ ಕೊಳಚೆ ನೀರು ತಿರುವು ಕಾಮಗಾರಿ  ಪ್ರಗತಿಯಲ್ಲಿದೆ.

*ಕೊಳಚೆ ನೀರು ತಿರುವು ಕಾಮಗಾರಿಯ ಉಳಿದ ಕಾರ್ಯ 10 ದಿನಗಳಲ್ಲಿ ಪೂರ್ಣಗೊಳಿಸಿ*
ರಾಜಕಾಲುವೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರು ತಿರುವು ಕಾಮಗಾರಿಯ ಕಾರ್ಯ ಶೇಕಡ 90 ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇ. 10 ರಷ್ಟು ಕೆಲಸವನ್ನು 10 ದಿನಗಳಲ್ಲಿ ಪೂರ್ಣಗೊಳಿಸಿ, ಮಳೆಗಾಲದಲ್ಲಿ ಶಾಶ್ವತವಾಗಿ ನೀರು ನಿಲ್ಲದಂತೆ ಕ್ರಮವಹಿಸಲು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.news_1779279087_3_516.webp

ರಾಜಕಾಲುವೆಯನ್ನು ಕೆರೆಗೆ ಸಂಪರ್ಕಿಸುವ ಕಾಮಗಾರಿ ಪ್ರಾರಂಭಿಸಬೇಕಾಗಿರುತ್ತದೆ. ಮಳೆಗಾಲದಲ್ಲಿ ಪುಟ್ಟೇನಹಳ್ಳಿ ಕೆರೆ ಸಮೀಪ ನೀರು ನಿಲ್ಲದಂತೆ ತಡೆಯುವ ಉದ್ದೇಶದಿಂದ ನೀರನ್ನು ಡೈವರ್ಟ್ ಮಾಡುವ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ. 

ಸ್ಥಳ ಪರಿಶೀಲನೆ ವೇಳೆ ಆಯುಕ್ತರು ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಮಳೆಗಾಲಕ್ಕೂ ಮುನ್ನ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಅರಣ್ಯ ಇಲಾಖೆ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ನಗರ ಪಾಲಿಕೆಯ ಅಭಿಯಂತರರು ಹಾಗೂ ಇನ್ನಿತರೆ  ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಎಂ ಪರಿಹಾರವಿದೆ ಚೆಕ್ ಹಸ್ತಾಂತರಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅಗತ್ಯತೆ ಕುರಿತು ಸಿಎಂ ಜೊತೆ ಚರ್ಚೆಚುಂಚ ಶ್ರೀಗಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ವಿಫಲಬೀದಿ ನಾಯಿಗಳ ಆಶ್ರಯ ತಾಣ ಕಾಮಗಾರಿಗೆ ವೇಗ ನೀಡಿ: ಡಾ. ರಾಜೇಂದ್ರ ಕೆ. ವಿ.ಪುಟ್ಟೇನಹಳ್ಳಿ ಕೆರೆ ಸಮೀಪದ ವಾಟರ್ ಲಾಗಿಂಗ್ ಪ್ರದೇಶ ಪರಿಶೀಲನೆಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮುಖವಾಡ ಬಯಲುರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟ ರಾಜ್ಯ ಕಾಂಗ್ರೆಸ್ ಸರಕಾರ!ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿಪೌರಕಾರ್ಮಿಕರಿಗೆ ಆರೋಗ್ಯ ಕಾಳಜಿ ತಿಳುವಳಿಕೆ, ಕೂಲಿಂಗ್ ಕಿಟ್ ವಿತರಣೆಮಳೆಗಾಲಕ್ಕೂ ಮುಂಜಾಗ್ರತವಾಗಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಸೂಚನೆ