
ಬೆಂಗಳೂರು: ಎಜೀಸ್ ಕಲಾಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 30ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ನಗರದ ನಯನ ಸಭಾಂಗಣದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ರಂಗ ಪುತ್ತಳಿ ಬೊಂಬೆಯಾಟ ಕಲಾವಿದರು ನಿರ್ದೇಶಕರಾದ ಎಂ ಆರ್ ಶ್ರೀನಿವಾಸ್ ಮುಖ್ಯ ಅಧಿಧಿಯಾಗಿ ಭಾಗವಹಿಸಿ ಮಾತನಾಡಿ, ಎಜಿಸ್ ಕಲಾಶ್ರೀ ಪಬ್ಲಿಕ್ ಚಾರ್ರಿ ಟೇಬಲ್ ಟ್ರಸ್ಟ್ ಸಂಸ್ಥೆಯು ಕಳೆದ 30 ವರ್ಷಗಳಿಂದ ಯಾವುದೇ ಫಲ ಅಪೇಕ್ಷೆ ಇಲ್ಲದೆ ಮಕ್ಕಳಿಗೆ ಉಚಿತವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಶಿಬಿರಗಳನ್ನು ನಡೆಸಿಕೊಂಡು 30 ವರ್ಷಗಳ ಸಾಧನೆ ಮೆಟ್ಟಿಲೇರಿರುವುದು ಅಮೋಘವಾಗಿದೆ ಅವರ ಪರಿಶ್ರಮ ಸ್ಪರ್ಧೆ ಕಾಳಜಿ ಎಲ್ಲವೂ ಸಂಸ್ಥೆಯ ಅಧ್ಯಕ್ಷರಿಗೆ ಪದಾಧಿಕಾರಿಗೆ ಸಲ್ಲಬೇಕಾಗುತ್ತದೆ ಯಾರು ಮಾಡದೆ ಇರತಕ್ಕಂತಹ ಸಾಧನೆಯನ್ನು ಸಂಸ್ಥೆಯವರು ಬಹಳ ಹೆಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದು ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಇತರರಿಗೆ ಹಾಗೂ ಇತರ ಸಂಸ್ಥೆಯ ವರಿಗೆ ಮಾದರಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ನನ್ನಿಂದ ನಿಮ್ಮ ಸಂಸ್ಥೆಗೆ ಬೇಕಾಗುವ ಅನುಕೂಲಗಳನ್ನು ಮಾಡಿಕೊಡಲು ನಾನು ಸದಾ ಸಿದ್ಧನಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರೂಪಕ ಕಲಾ ದೇಗುಲ ಶ್ರೀನಿವಾಸ್ ಮಾತನಾಡಿ, ನಾನು ಒಬ್ಬ ನಿರೂಪಕನಾಗಿ ಕಾರ್ಯಕ್ರಮಕ್ಕೆ ಬರುತ್ತೇನೆ ಹೊರತು ಅತಿಯಾಗಿ ನಾನು ಎಂದು ಯಾವ ಕಾರ್ಯಕ್ರಮಗಳಿಗೂ ಹೋಗಿಲ್ಲ ಇದು ನನ್ನ ಮೊದಲ ಕಾರ್ಯಕ್ರಮವಾಗಿದೆ ಅದಕ್ಕೆ ಕಾರಣವೂ ಸಹ ಇದೆ ಸಂಸ್ಥೆಯ ಪ್ರಮುಖರಾದಂತಹ ಅರುಣ ಮೇಡಂ ಅವರು ನನ್ನ ನಿರೂಪಣಶೈಲಿಯನ್ನು ಒಪ್ಪಿಕೊಂಡ ರೀತಿ ನನಗೆ ಬಹಳ ಇಷ್ಟ ಆಯಿತು ಹೀಗಾಗಿ ಅವರ ಮಾತಿಗೆ ನಾನು ಬೇಡ ಎನ್ನಬಾರದು ಎನ್ನುವ ವಿಚಾರದಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದೇನೆ ಎಂದರು ಅವರ ಕಾರ್ಯ ವೈಕರಿಗಳು ಸಮಾಜಮುಖಿ ಕೆಲಸಗಳು ಸಮಾಜದ ಮತ್ತಷ್ಟು ಮಕ್ಕಳಿಗೆ ಜನರಿಗೆ ಪ್ರಯೋಜನಕಾರಿಯಾಗಲಿ ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಅರುಣ ಅವರು ಯಾವುದೇ ಫಲ ಅಪೇಕ್ಷೆಗಳಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಮಾಡಿಕೊಂಡು ಬರುತ್ತಿರುವುದು ಹಾಗೆ ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವುದು ಹಾಗೆ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಇವೆಲ್ಲವೂ ಸಹ ಅವರ ಸಂಸ್ಥೆಯಲ್ಲಿ ಅಡಗಿರುವ ವಿಚಾರವಾಗಿದೆ ಇದು ಯಾವುದೇ ರೀತಿಯ ತೋರ್ಪಡಿಕೆಯ ವಿಚಾರವಲ್ಲ ಅವರ ಮನಸಿನ ಅಂತರಾಳದ ವಿಚಾರವಾಗಿದೆ. ಇದರ ಜೊತೆಗೆ ಉಚಿತ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕೊಡುವ ಶಾಲೆ ನಿರ್ಮಾಣಕ್ಕೆ ಸಂಸ್ಥೆಯಿಂದ ಸುಮಾರು ಐವತ್ತು ಸಾವಿರ ರೂಪಾಯಿ ದೇಣಿಗೇನು ಸಹ ನೀಡಿ ಅವರ ಸಮಾಜಮುಖಿ ಕಳಕಳಿ ಎಷ್ಟು ಇದೆ ಎಂಬುದರ ಬಗ್ಗೆ ಇದು ಒಂದು ಉದಾಹರಣೆಯಾಗಿದೆ.
ಕಾರ್ಯಕ್ರಮದಲ್ಲಿ ರಂಗ ಪುತ್ತಲೆ ಆಟದ “ಶ್ರೀ ಕೃಷ್ಣ ತುಲಾಭಾರ” ಬೊಂಬೆಯಾಟ ಪ್ರದರ್ಶನ ಗಮನಸೆಳೆಯಿತು. ಜೊತೆಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಟ್ಯೂಶನ್ ಫೀಸ್ ವಿತರಣೆ ಕಾರ್ಯಕ್ರಮವೂ ನೆರವೇರಿಸಲಾಯಿತು.
ಇನ್ನೂ ಇದೆ ವೇಳೆ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಸಾಕಷ್ಟು ಸಾಂಸ್ಕೃತಿಕ ಚಟುವಟಿಕೆಗಳು ವೇದಿಕೆ ಮೇಲೆ ಸಾಂಗವಾಗಿ ನಡೆದವು ನೆರೆದಿದ್ದವರನ್ನು ಆರಂಜಿಸಿ ಕೊಳಕಿತರನ್ನಾಗಿಸಿದವು.
ಈ ಸಂದರ್ಭದಲ್ಲಿ ಎಂ ಆರ್ ಶ್ರೀನಿವಾಸ್, ಕಲದೇಗುಲ ಶ್ರೀನಿವಾಸ್, ಜಿ ಎಸ್ ಪೂರ್ಣಿಮಾ, ಅವಿನಾಶ್ ರತ್ನಾಕರ ಶೆಟ್ಟಿ, ಟ್ರಸ್ಟ್ ಅಧ್ಯಕ್ಷರಾದ ಎಸ್ ವಿ ಗೋಪಿನಾಥ್, ಅರುಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.