LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏ.5ಕ್ಕೆ ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಜಾಗೃತಿ ಸಮಾವೇಶ

ಬೆಂಗಳೂರು: ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಜಾಗೃತಿ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು  ನಗರದ ರವೀಂದ್ರ ಕಲಾಕ್ಷೇತ್ರಸಲ್ಲಿ ಬರುವ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು  ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ  ಗಂಗಾಧರಪ್ಪ ತಿಳಿಸಿದರು.


ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಪ್ರತಿ ವರ್ಷ ಸಂಘದಿಂದ ಹತ್ತುಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ.  ಯಾವುದೆ ಧನಬಸಹಾಯ ಪಡೆಯದೆ ಸಂಘದ ಪದಾಧಿಕಾರಿಗಳು ಹಾಗೂ ಧಾನಿಗಳಿಂದ  ನಡೆಸಿಕೊಂಡು ಬಂದಿದ್ದೇವೆ ಎಂದರು.


ಸಂಘದಲ್ಲಿ ಅನೇಕ ಮಹಿಳೆಯರು ಎಲೆಮರೆ ಕಾಯಿಯಂತೆ ದುಡಿಯುತ್ತಿದ್ದಾರೆ. ಅಂತಹ ಮಹಿಳೆಯರನ್ನು ಗುರುತಿಸುವ ಹಾಗೂ ನಮ್ಮ ಸಮಾಜಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ  ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮಹಿಳೆಯರು ಯಾವ ಯಾವ ಕ್ಷೇತ್ರದಲ್ಲಿ ಜಾಗೃತಿಯಾಗಬೇಕು  ಎಂಬುದರ ಕುರಿತು ಗಣ್ಯರಿಂದ ಬಾಷಣ ಇರುತ್ತದೆ ಎಂದರು. ಸಮಾಜದ ಜನರನ್ನು ಒಂದುಕಡೆ ಸೇರಿಸುವ ಕೆಲಸವನ್ನು ಸಹಾ ಇದೇ ವೇಳೆ ಮಾಡಲಾಗುತ್ತದೆ.


ಪದ್ಮಶ್ರೀ ಪ್ರಶಸ್ತಿ" ಪುರಸ್ಕೃತ ಎಸ್. ಜಿ. ಸುಶೀಲಮ್ಮ ಹಾಗೂ "ಡಾ: ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ' ಪುರಸ್ಕೃತ ಉಮಾಶ್ರೀ ಇವರುಗಳಿಗೆ ಸನ್ಮಾನ ಸಮಾರಂಭ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಸಾಧಕ ಮಹಿಳೆಯರಿಗೆ ಸನ್ಮಾನವನ್ನು ಏರ್ಪಡಿಸಿದ್ದು, ಸುಮಾರು 900ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಪಾಲ್ಗೊಳ್ಳುತ್ತಿದ್ದಾರೆ.


ಕಾರ್ಯಕ್ರಮದ ಧಿವ್ಯ ಸಾನಿದ್ಯವನ್ನು ದಯಾನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ.ಬೆಳಗಾವಿ ಪಾಲಿಕೆ ಮಹಾ ಪೌರರಾದ ಪ್ರೀತಿ ವಿನಾಯಕರ ಕಾಮಕರ ಉದ್ಗಾಟನೆ ಮಾಡಲಿದ್ದಾರೆ. ಉದ್ಯಮಿ ಗಾಯತ್ರಿ ರಾಮ ಕೃಷ್ಣ  ಅವರಿಂದ ವಸ್ರ್ರದಾತ ವಿಶೇಷ ಸಂಚಿಕೆ ಬಿಡುಗಡೆ,  ನಾಗೇಶ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ, ಪ್ರಸನ್ನ ಕುಮಾರ್ ವಿಶೇಷ ಅಭಿಯೋಜಕರು ಮಹಿಳೆಯರಿಗೆ ಕಾನೂನು ರಕ್ಷಣೆ ಹೇಗಿದೆ ಎಂಬುದರ ಕುರಿತು ಉಪನ್ಯಾಸ ನೀಡಲಿಸ್ದಾರೆ. ಕೇಂದ್ರ ಸಂವಹ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಅವರು ಮಹಿಳಾ ಸಭಲೀಕರಣ ಮತ್ತು ಪ್ರಗತಿ ಕುರಿತು  ಚಿಂತನೆ ಮಾಡಲಿದ್ದಾರೆ ಎಂದರು.


ದೇವಾಂಗ ಸಂಘದಲ್ಲಿ ನ ಅಧ್ಯಕ್ಷರು,ಉಪಾಧ್ಯಕ್ಷರು,ಖಜಾಂಚಿಗಳು, ನಿರ್ದೇಶಕರು,ಕಾರ್ಯಕಾರಿ ಸಮಿತಿ ಸದಸ್ಯರು,ಸಂಘದ  ಪದಾಧಿಕಾರಿಗಳು , ಜಿಲ್ಲಾ, ತಾಲುಕು ಮಟ್ಟದ ಸಂಘದ ಪದಾಧಿಕಾರಿಗಳು, ಹಿತೈಸಿಗಳು ,ಕುಟುಂಬ ಸದಸ್ಯರು, ಸ್ನೇಹಿತರು ಆಗಮಿಸಲಿದ್ದಾರೆ.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಘದ ಕಲ್ಬುರ್ಗಿ ಅಧ್ಯಕ್ಷರಾದ ರವೀಂದ್ರ,ಸಿಎಂ ಕಾರ್ಯದರ್ಶಿ ಶ್ರೀನಿವಾಸ್,ವಿಶ್ವಕರ್ಮ ನಿಗಮದ ಎಂಡಿ ಭಾವನ,ಕಂದಾಯ ಇಲಾಖೆ ಅಧಿಕಾರಿ ಕಲ್ಯಾಣಿ ಕಾಂಬ್ಳೆ,ಸಂಘದ ಉಪಾಧ್ಯಕ್ಷರಾದ ಪಾರ್ವತಿ, ಟೆಕ್ಸ್ ಟೈಲ್ ಬ್ಯಾಂಕ್ ಅಧ್ಯಕ್ಷ. ಎಣ್ಣೆಗೆರೆ ವೆಂಕಟೇಶ್, ಸರೋಜಮ್ಮ ಬನಪ್ಪ ಆಗಮಿಸಲಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿ,ಖಜಾಂಚಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ