ಬೆಂಗಳೂರು : ನಜೀರ ಅಹ್ಮದ ಶೇಖ ಸಾ. ಗೋಕಾಕ ಜಿಲ್ಲಾ ಬೆಳಗಾಂ" ಇವರನ್ನು ಮುಂಬರುವ ವಿಧಾನ ಪರಿಷತ್‌ದ ಮೇಲ್ಮನವಿಗೆ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮನಿರ್ದೆಶನ ಮಾಡುವಂತೆ ಕಿತ್ತೂರು ಕರ್ನಾಟಕದ ಮುಸ್ಲಿಂ ವೇದಿಕೆಯಿಂದ ಆಗ್ರಹ ಮಾಡಲಾಯಿತು.
ಬೆಂಗಳೂರಿನ ಪ್ರಸ್ಥಭನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ
"ಶ್ರೀ ನಜೀರ ಅಹ್ಮದ ಶೇಖ ಸಾ॥ ಗೋಕಾಕ ಜಿಲ್ಲಾ ಬೆಳಗಾಂ" ಇವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಮೇಲ್ಮನೆಗೆ (ವಿಧಾನ ಪರಿಷತ್)ಗೆ ನಾಮಕರಣ ಮಾಡಲು ವಿನಂತಿ
1) ಕಿತ್ತೂರ ಕರ್ನಾಟಕ (ಬಾಂಬೆ ಕರ್ನಾಟಕ) ದಲ್ಲಿ 8 ಜಿಲ್ಲೆಗಳು ಬರುತ್ತಿದ್ದು, ಇಲ್ಲಿ ಶೇಕಡಾ 20 ರಷ್ಟು ಅಲ್ಪ ಸಂಖ್ಯಾತ ಸಮುದಾಯದವರು ಇರುತ್ತಾರೆ. ಇಲ್ಲಿ ಸ್ವತಂತ್ರ ಬಂದ ನಂತರ ಇಲ್ಲಿಯವರೆಗೂ ಯಾವುದೇ ಅಲ್ಪಸಂಖ್ಯಾತ ಸಮುದಾಯರವರನು ಕರ್ನಾಟಕ ವಿಧಾನ ಪರಿಷತ್ತಿನ ಮೇಲ್ಮನೆಗೆ (ವಿಧಾನ ಪರಿಷತ್)ಗೆ ಹಾಗೂ ರಾಜ್ಯಸಭೆಗೆ ಇನ್ನೂರವರೆಗೂ ಯಾರನ್ನು ಕಾಂಗ್ರೇಸ್ ಪಕ್ಷದ ವತಿಯಿಂದ ನಾಮನಿರ್ದೇಶನ ಮಾಡಿರುವುದಿಲ್ಲ. ಆದ ಕಾರಣ ಪ್ರಸ್ತುತ ತಿಂಗಳಿನಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಳ್ಳುವ 5 ಸದಸ್ಯರುಗಳಲ್ಲಿ ಅಲ್ಪಸಂಖ್ಯಾತದವರನ್ನು ಕಿತ್ತೂರ ಕರ್ನಾಟಕ (ಬಾಂಬೆ ಕರ್ನಾಟಕ) ದವರನ್ನು ನಾಮನಿರ್ದೇಶನ ಮಾಡಲು ವಿನಂತಿ.
2) ಕಿತ್ತೂರ ಕರ್ನಾಟಕದ ಅಲ್ಪಸಂಖ್ಯಾತದಲ್ಲಿ ಪ್ರಭಾವಿ ಅಲ್ಪಸಂಖ್ಯಾತರ ಮುಖಂಡರು "ಶ್ರೀ ನಜೀರ ಅಹ್ಮದ ಶೇಖ ಸಾ|| ಗೋಕಾಕ ಜಿಲ್ಲಾ ಬೆಳಗಾಂ" ಇವರ ಅಜ್ಜ ದಿವಂಗತ ಖಾದರಸಾಬ ಶೇಖ ಸಾ॥ ಗೋಕಾಕ ಇವರು ಸ್ವತಂತ್ರ ಹೋರಾಟಗಾರರು ಹಾಗೂ ಆಗಿನ ಕೊಣ್ಣೂರ ವಿಧಾನಸಭಾ ಕ್ಷೇತ್ರ ಶಾಸಕರು ಆಗಿರುತ್ತಾರೆ. ಇವರು ಬೆಳಗಾವಿಯಲ್ಲಿ 1924 ರಲ್ಲಿ ಕಾಂಗ್ರೇಸ್ ಅಧಿವೇಶನದಲ್ಲಿ ಭಾಗವಹಿಸಿದ್ದು ಆ ವೇಳೆ ರಾಷ್ಟ್ರಪಿತಾ ಮಹಾತ್ಮಾ ಗಾಂಧಿಜಿ, ಸ್ವತಂತ್ರ ಹೋರಾಟಗಾರರು ಹಾಗೂ ಪ್ರಥಮ ಪ್ರಧಾನ ಮಂತ್ರಿಗಳಾದ ಜವಾಹರಲಾಲ ನೆಹರು ಹಾಗೂ ಧಿಮಂತ 'ರಾಜಕೀಯ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತೀಲಕ ಇನ್ನೂ ಅನೇಕ ಧಿಮಂತ ಸ್ವಾತಂತ್ರ. ಹೋರಾಟಗಾರರು ಭಾಗವಹಿಸಿದ್ದ ಸಂದರ್ಭದಲ್ಲಿ ಇವರು ಈ ಸಮಾವೇಶದ ಸಂಪೂರ್ಣ ಜವಾಬ್ದಾರಿ ಹೊತ್ತು ಕಾರ್ಯಕ್ರಮವನ್ನು ಬಹಳ ಜವಾಬ್ದಾರಿಯುತದಿಂದ ಯಶಸ್ವಿಗಳೊಸಿದವರಲ್ಲಿ ಇವರು ಒಬ್ಬರೂ, ಮೊಮ್ಮಗ ಕಳೆದ 40 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಾಗಿ ವಿವಧ ಹುದ್ದೆಗಳನ್ನು ಅಲಂಕರಿಸಿ ಕಾಂಗ್ರೇಸ್ ಪಕ್ಷವನ್ನು ಮುನ್ನುಡೆಸಿದ್ದು ಮತ್ತು ಅಲ್ಪಸಂಖ್ಯಾತರಲ್ಲಿ ಹೆಚ್ಚು ಪ್ರಭಾವ ಹೊಂದಿದ ವ್ಯಕ್ತಿತ್ವ ಇರುತ್ತವೆ. ಇವರು ಕಳೆದ 14 ವರ್ಷಗಳಿಂದ ಗೋಕಾಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಹಾಗೂ ಗೋಕಾಕದ ಅಭಿವೃದ್ಧಿ ಪ್ರಾಧಿಕಾರದ 2 ಸಾರಿ ಅಧ್ಯಕ್ಷರಾಗಿದ್ದು ಅಲ್ಲದೇ ಗೋಕಾಕದ ನಗರಸಭೆ ಅಧ್ಯಕ್ಷರಾರಿ ಕಾರ್ಯನಿವಃಸಿರುತ್ತಾರೆ. ಅಲ್ಲದೇ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರಲು ಸಾಕಷ್ಟು ಪ್ರರಿಶ್ರಮ ಹಾಕಿದ್ದು ಇರುತ್ತದೆ. ಇಂತವರ
3) "ಶ್ರೀ ನಜೀರ ಅಹ್ಮದ ಶೇಖ ಸಾ॥ ಗೋಕಾಕ ಜಿಲ್ಲಾ ಬೆಳಗಾಂ" ಇವರು ಕರ್ನಾಟಕ ರಾಜ್ಯ ನಧಾಪ/ ಪಿಂಜಾದ ಬೆಳಗಾವಿ ಜಿಲ್ಲೆಯ 2 ಸಾರಿ ಅಧ್ಯಕ್ಷರಾಗಿ ಮತ್ತು ಈಗಲೂ ಇರುತ್ತಾರೆ. ಮತ್ತು ವಿವಿಧ ಸಹಕಾರಿ ಸಂಘಸಂಸ್ಥೆಗಳ, ಮತ್ತು ಶೈಕ್ಷಣಿಕ ರಂಗ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದಿದ್ದು ಇವುಗಳ ಅಧ್ಯಕ್ಷರಾಗಿ, ಪಧಾಧಿಕಾರಿಗಳಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ಇರುತ್ತದೆ. ಅಲ್ಲದೆ ಇವರು ಶಿಕ್ಷಣದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುತ್ತಾರೆ ಇವರಿಗೆ ರಾಜಕೀಯ ಅಪಾರ ಅನುಭವದ ಜೊತೆಗೆ ಸಾಮಾಜೀಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ನಿರಂತರವಾಗಿ ಜನ ಮನ್ನಣೆ ಗಳಿಸಿದಂತಹ ವ್ಯಕ್ತಿತ್ವ ಇವರದು. ಇವರ ನೆತ್ರತ್ವದಲ್ಲಿ ತಾಲೂಕಾ ಪಂಚಾಯತ್, ಜಿಲ್ಲಾ ಪಂಚಾಯತ್ ಪುರಸಭೆ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅನೇಕ ವ್ಯಕ್ತಿಗಳನ್ನು ಗೆಲ್ಲಿಸಿದ್ದು ಇರುತ್ತದೆ. ಇವರಿಗೆ ಅನೇಕ ಸಾಮಾಜೀಕ ರಾಜಕೀಯ ಪ್ರಶಸ್ತಿಗಳು ಸಹ ಲಭಿಸಿರುತ್ತವೆ.
4) "ಶ್ರೀ ನಜೀರಆಹ್ಮದ ಶೇಖ ಸಾ।। ಗೋಕಾಕ ಜಿಲ್ಲಾ ಬೆಳಗಾಂ" ಇವರನ್ನು ಮುಂಬರುವ ಪ್ರಸ್ತುತ ತಿಂಗಳುಗಳಲ್ಲಿ ಕರ್ನಾಟಕ ವಿಧಾನ ಪರಿಷತ್ ಮೇಲ್ಮನವಿಗೆ ಕಾಂಗ್ರೆಸ್ ಪಕ್ಷದಿಂದ ನಾಮಕರಣ ಮಾಡಿದಲ್ಲಿ ಕಿತ್ತೂರ ಕರ್ನಾಟಕದ ಅಲ್ಪಸಂಖ್ಯಾತರಿಗೆ ಹಾಗೂ ಇನ್ನಿತರೆ ಸಮಾಜದವರಿಗೆ ಬಹಳ ಅನಕೂಲವಾಗುತ್ತದೆ. ಏಕೆಂದರೆ ಸದರಿ ಅಲ್ಪಸಂಖ್ಯಾತರು ಸಾಕಷ್ಟು ಈ ಬಾಗದಲ್ಲಿ ಹಿಂದುಳಿದಂತಹ ಜನಾಂಗವು ಇರುತ್ತದೆ. ಆದ ಕಾರಣ ಇವರ ಸಾಮಾಜೀಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಬಹಳ ಸಹಾಯವಾಗುತ್ತದೆ.
5) "ಶ್ರೀ ನಜೀರಅಹ್ಮದ ಶೇಖ ಸಾ॥ ಗೋಕಾಕ ಜಿಲ್ಲಾ ಬೆಳಗಾಂ" ಇವರು ಅಲ್ಪಸಂಖ್ಯಾತರ ಜೊತೆಗೆ ಅನೋನ್ಯ ಸಂಬಂಧವನ್ನು ಹೊಂದಿದ್ದು ಅಲ್ಲದೇ ಇನ್ನಿತರ ಎಲ್ಲ ಸಮಾಜದ ಬಾಂದವರ ಜೊತೆಗೆ ಒಳ್ಳೆಯ ಬಾತ್ರತ್ವದ ಬಾಂಧವ್ಯವನ್ನು ಹೊಂದಿ ಅವರ ಅಭಿವೃದ್ಧಿ ಕಾರ್ಯದಲ್ಲಿ ಭಾಗವಹಿಸಿ ಅವರ ಮನಸ್ಸನ್ನು ಗೆದ್ದ ಧಿಮಂತ ನಾಯಕರು ಇರುತ್ತಾರೆ. ಅಲ್ಲದೇ ಇವರು ಕಾಂಗ್ರೇಸ್ ಪಕ್ಷಕ್ಕೆ ಮತ್ತು ಹಿರಿಯರಿಗೆ ಮನ್ನಣೆ ನೀಡಿ ಈ ಪಕ್ಷವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಅಧಿಕಾರಕ್ಕೆ ತರಲು ಇವರ ಶ್ರಮ ಇರುತ್ತದೆ. ಇವರ ಸಂಘಟನಾ ಚತುರರು ಇದ್ದು, ಇವರಿಗೆ ನೀಡಿದ ಯಾವುದೇ ಹುದ್ದೆಯನ್ನು ಸಮರ್ಥವಾಗಿ ನೀಭಾಯಿಸಿಕೊಂಡು ಹೋಗುತ್ತಾರೆ. ಇವರನ್ನು ಒಂದು ವೇಳೆ ನಾಮನಿರ್ದೆಶನ ಮಾಡಿದಲ್ಲಿ ಇವರಿಂದ ಮುಂಬರುವ ಚುನಾವಣೆಗಳಿಗೆ ಕಾಂಗ್ರೇಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಅಧಿಕಾರವನ್ನು ತಂದುಕೊಡುವಲ್ಲಿ ಅನುಕೂಲವಾಗುತ್ತದೆ.
ಕಾರಣ "ಶ್ರೀ ನಜೀರ ಅಹ್ಮದ ಶೇಖ ಸಾ|| ಗೋಕಾಕ ಜಿಲ್ಲಾ ಬೆಳಗಾಂ" ಇವರನ್ನು ಮುಂಬರುವ ವಿಧಾನ ಪರಿಷತ್‌ದ ಮೇಲ್ಮನವಿಗೆ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮನಿರ್ದೆಶನ ಮಾಡಲು ಈ ಮೂಲಕ ತಮ್ಮಲ್ಲಿ ಕಳಕಳಿಯಿ ವಿನಂತಿ.