LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ನಗರ, ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕಾರಿಗಳ ಅಂದಾದರ್ಬಾರ್!

ಬೆಂಗಳೂರು: ಬೆಂಗಳೂರು ನಗರ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಲಿತರಿಗೆ ಸರ್ಕಾರದ ಕಂದಾಯ,ಗೃಹ,ಲೋಪಯೋಗಿ,ಗ್ರಾಮೀಣ ಮತ್ತು ಪಂಚಾಯತ್ ರಾಜ್, ಸಾರಿಗೆ ಇಲಾಖೆಯಲ್ಲಿ ಸಾಕಷದಟು ಅನ್ಯಾಯಗಳು ನಡೆಯುತ್ತಿವೆ ಅದಕ್ಕೆ ಸಂಭಂದಿಸಿದ ಸಚಿವರು ಸೂಕ್ತ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾಸಮಿತಿ ರಾಷ್ಟೀಯ, ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿಆರ್ ಮುನಿರಾಜ ಒತ್ತಾಯ ಮಾಡಿದರು.


ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ,ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಬಹುತೇಕ ಇಲಾಖೆಗಳು ಜನಸಾಮಾನ್ಯ ಅಹವಾಲು,ಸಮಸ್ಯೆಗಳಿಗೆ ಕೇಳುವವರು ಯಾರು ಇಲ್ಲದಂತಾಗಿದೆ. ಅದೇ ರೀತಿ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು ಅಮಾಯಕ ಜನರನ್ನು ಹೆದರಿಸಿ,ಬೆದರಿಸಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.


ಕಂದಾಯ ಇಲಾಖೆಯ ಭೂದಾಖಲೆಗಳ ಉಪ ನಿರ್ದೇಶಕರಾದ ಸುಜಯ್ ಕುಮಾರ್ ,ಶ್ರೀನಿವಾಸ್,ಭಾನುಪ್ರಕಾಶ್,  ಅವರು ಸಮಸ್ಯೆ ಅಂತ ಹೇಳಿಕೊಂಡು ಬರುವ ಸಾರ್ವಜನಿಕರಿಗೆ ಹಣದ ಆಮಿಷೆಯೊಡ್ಡಿ ಸರ್ಕಾರದ ಯೋಜನೆಳು, ಖಾತೆಗಳ ಮಾಡಿಸುವಿಕೆ, ಭೂದಾಖೆಗಳ ವಿವರಣೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕೇಳಲು ಹೋದ ಜನರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ.


ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ನಾಪತ್ತೆ?


ಇನ್ನು ಬೆಂಗಳೂರು ನಗರ ,ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಯಾವ ಸಮಯದಲ್ಲಿ ಹೋದರು ಜನರಿಗೆ ಸಿಗುವುದಿಲ್ಲ, ಸಾರ್ವಜನಿಕರನ್ನು ಅಲೆಸುವ, ರೆಸಾರ್ಟ್ ರಾಜಕೀಯ ಮಾಡುವ, ಸುಖಾಸುಮ್ಮನೆ ಅನ್ಯ ಕಾರ್ಯಗಳಿಗೆ ತೆರಳಿದ್ದೇವೆ ಎಂದು ಸಬೂಬು ಹೇಳಿಕೊಂಡು ಕಾಲ ಹರಣ ಮಾಡುತ್ತ, ಕಛೇರಿಗೆ ಬಂದ ಫೈಲ್ ಗಳನ್ನು ವಿಲೇವಾರಿ ಮಾಡದೆ ಹಾಗೆ ಉಳಿಸಿಕೊಂಡು ಬೇಜವಾಬ್ದಾರಿ ತೋರುತ್ತಾ ಹಣದ ಆಮಿಷೆಯೊಡ್ಡಿ ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಭಾಸವಾಗುತ್ತದೆ.


ಸಚಿವರಿಂದ ಇಲಾಖೆಗಳಿಗೆ ದಿಢೀರ್ ಭೇಟಿ,ಅಧಿಕಾರಿಗಳಿಗೆ ತರಾಟೆ, But No Action:


ಕಂದಾಯ ಇಲಾಖೆ ಅತಿ ವೇಗವಾಗಿ ಬೆಳೆಯುತ್ತಿದೆ ಮತ್ತು ಅಭಿವೃದ್ದಿಯನ್ನು ಹೊಂದುತ್ತಿದೆ, ಆದರೆ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಅನ್ಯಾಯ,ದಬ್ಬಾಳಿಕೆ, ಭ್ರಷ್ಟಾಚಾರವನ್ನು ಖಂಡಿಸಲು ಸಾಧ್ಯವೇ ಇಲ್ಲ ಎಂದು ಇಲ್ಲಿನ ಪರಿಸ್ಥಿತಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಏಕಾಂಗಿಯಾಗಿ ಭೇಟಿಕೊಟ್ಟು ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿಯ ತನಕ ಯಾವ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ತೆಗೆದುಕೊಂಡು ಕೆಲಸ ಮಾಡಿದ್ದಾರೆ ತೋರಿಸಲಿ. ಕೇವಲ ಮಾಧ್ಯಮಗಳಿಗೆ ಪೋಸ್ ಕೊಟ್ಟು, ಕೇವಲ ಹೇಳಿಕೆಯಲ್ಲಿ ಕಾಲಹರಣ ಮಾಡಿದ್ದಾರೆ ವಿನಃಹ ತಾರ್ಕಿಕ ಅಂತ್ಯ ಕಂಡಿಲ್ಲ.


ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಧಿಕಾರಿಗಳ ಆಟಾಟೋಪ ಮಾತ್ರ ಮಿತಿ ಮೀರಿದೆ. ಬಂಡಿಕೋಡಿಗೆಹಳ್ಳಿ ಗ್ರಾಮಪಂಚಾಯ್ತಿಯಲ್ಲಿ 2020-2025ರ ಅವಧಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಯಿತ್ತಿದ್ದು, ಇದರಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯ ಮಾಡಿದರು. ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ PDO ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕಂದಾಯದ ಹಣನ್ನು ಗುಳುಂ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.


ಮೇಲಿನ ಎಲ್ಲಾ ವಿಚಾರಗಳ ಬಗ್ಗೆ  ಮನಗಂಡು ಸರ್ಕಾರಕ್ಕೆ ಒತ್ತಾಯವನ್ನು ಮಾಡಲಾಗಿದೆ.


1. ಬೆಂಗಳೂರು ನಗರ ಜಿಲ್ಲೆ ಭೂದಾಖಲೆಗಳ ಉಪ ನಿರ್ದೇಶಕ ಸುಜಯ್ ಕುಮಾರ್ 4 ಸಾವಿರ ಅರ್ಜಿ ವಿಲೆವಾರಿಯಾಗಿಲ್ಲ, ಹಣಕ್ಕೆ ಬೇಡಿಕೆ, ಜಮೀನು ಪೋಡಿ ಮಾಡಲು ಹಣಕ್ಕೆ ಒತ್ತಾಯ, ಈತನ ಜೊತೆ ಶ್ರೀನಿವಾಸ್, ಭಾನುಪ್ರಕಾಶ್  ಜೊತೆಯಾಗಿ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇವರ ವಿರುದ್ದ ಲೋಕಾಯುಕ್ತ,COD,CBI ತನಿಖೆಯಾಗಬೇಕು. ತಪ್ಪಿತಸ್ಥ ಎಂದು ಕಂಡುಬಂದರೆ ಅಮಾನತ್ತುಗೊಳಪಡಿಸಬೇಕು.


2. ಭೂದಾಖೆಗಳ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು ಇದ್ದು, ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೈಲ್ ಕಳಿಸಬೇಕು. ಸಾರ್ವಜನಿಕರು ಕೆಲವರು ಮಾಹಿತಿ ಕೇಳಿದ್ದಕ್ಕೆ ಉತ್ತರ ನೀಡಿ ನ್ಯಾಯ ಒದಗಿಸಬೇಕು.


3. ಬೆಂಗಳೂರು ನಗರ,ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿ RA ಮತ್ತು RP ,PTCL ಧಾವೆಗಳ ಬಗ್ಗೆ  ಪತಿಶೀಲಿಸಿ  ಕಾನೂನು ಅಡಿಯಲ್ಲು ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು.


4. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಪಟ್ಟ ಪಂಚಾಯ್ತಿಗಳಾದ ಬಂಡಿಕೊಡಿಗೆಹಳ್ಳಿ ಪಂಚಾಯ್ತಿ ನಡೆದಿರುವ ಅವ್ಯವಹಾರಗಳ ತನಿಖೆ ಮಾಡಿ,ತಪ್ಪಿತಸ್ಥರನ್ನು ಅಮಾನತ್ತು ಮಾಡಬೇಕು.


5. ಗೃಹ ಇಲಾಖೆಗೆ ಸಂಬಂಧಿಸಿದಂತೆ ಬಾಗಲೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರಿಗೆ ನ್ಯಾಯ ಸಿಗದೆ ಪರದಾಡುತ್ತಿದ್ದಾರೆ. ಅಧಿಕಾರಿಗಳು ದಲಿತರ ಪರ ನಿಲ್ಲದೆ ಉಳ್ಳವರ ಪರ ನಿಂತು ದರ್ಪ ಮೆರೆಯುತ್ತಿದ್ದಾರೆ. ಅದನ್ನು ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅಧಿಕಾರಿಗಳಿಗೆ ಮನವಿ


6. ಭೂದಾಖೆಗಳ ಉಪ ನಿರ್ದೇಶಕರಾದ ಸುಜಯ್ ಕುಮಾರದ ಬೆಂಗಳೂರು ದಕ್ಷಿಣ ತಾ.  ವ್ಯಾಪ್ತಿಗೆ ಬರುವ ಅಲಗೇವಡೆರಹಳ್ಳಿಯ ಸರ್ವೆ ನಂ.65 ರಲ್ಲಿನ  4 ಎಕರೆ  ಸರ್ಕಾರಿ ಬಂಡೆ ಪೋಡಿ ಮಾಡಿರುವುದು ಸರ್ಕಾರಕ್ಕೆ ಕೋಟಿಗಟ್ಟಳೆ ನಷ್ಟ. ತಪ್ಪಿತಸ್ಥರಿಗೆ ಕ್ರಿಮಿನಲ್ ಪ್ರಕರಣ ದಾಖಲಿಗೆ ಮನವಿ.


7. ಸುಜಯ್ ಕುಮಾರ್  UM ಕಾವಲ್ ನಲ್ಲಿ 5 ಎಕರೆ ಜಾಗವನ್ನು ಪೋಡಿಮಾಡಲು ಅರ್ಜಿ ಹಾಕಿದವರಿಗೆ ಮೋಸಮಾಡಿ ಸರ್ಕಾರ ಖರಾಭಿಗೆ ಸೇರಿಸಿ ಅಮಾಯಕರಿಗೆ ವಂಚನೆ.


ಇವೆಲ್ಲವೂ ಮೂಲವಾಗಿ ಭೇಡಿಕೆಯಾಗಿದೆ. ಸರ್ಕಾರ ಗಮನಿಸಿ ಇಲಾಖೆಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ದಲಿತರಿಗೆ,ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದರು. ಸುದ್ದಿಗೋಷ್ಟಿಯಲ್ಲಿ  ಜೈ ಭೀಮ್ ,ABDKS ರಾಜ್ಯಾಧ್ಯಕ್ಷ  ಪಿಳ್ಳಾಂಜಿನಪ್ಪ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶರವಣ, ಯಲಹಂಕ ತಾಲೂಕು ಅಧ್ಯಕ್ಷ  ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ