LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೋಂದಾವಣಿ ಇಲಾಖೆಯಲ್ಲಿ ಲಾಗಿನ್ ದುರುಪಯೋಗ ಆರೋಪ

ಬೆಂಗಳೂರು: ಕರ್ನಾಟಕ ಸರಕಾರದ ನೋಂದಣಿ ಇಲಾಖೆಯಲ್ಲಿ ಕಾವೇರಿ-2.0 ತಂತ್ರಾಂಶ ಜಾರಿಗೊಳಿಸಿದ --ನಂತರ ಸಾರ್ವಜನಿಕರಿಗೆ ನಾಗರಿಕ ಲಾಗಿನ್ ನೀಡಲಾಗಿದೆ.  ಆದರೆ, ಇದರ ದುರುಪಯೋಗದಿಂದಾಗಿ ನೋಂದಣಿ ಪ್ರಕ್ರಿಯೆಯಲ್ಲಿ ಅನಧಿಕೃತ ವ್ಯಕ್ತಿಗಳು ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಅಧಿಕೃತ ಪತ್ರ ಬರಹಗಾರರ  ಒಕ್ಕೂಟದ ಅಧ್ಯಕ್ಷ ಡಿ.ಕೆ.ಸಂಗಮೇಶ್ ಎಲಿಗಾರ್ ಆರೋಪ ಮಾಡಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಲಾಗಿನ್ ಮೂಲಕ ಯಾವುದೇ ವ್ಯಕ್ತಿಯೂ ನೋಂದಣಿ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಬಹುದಾಗಿದ್ದು 'ಇದರ ಪರಿಣಾಮವಾಗಿ ಸೈಬರ್, ಡಿಟಿಪಿ ಸೆಂಟರ್‌ಗಳ ಮೂಲಕ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ತಪ್ಪು ಆ ರೀತಿಯಲ್ಲಿ ಅಪ್‌ಲೋಡ್ ಮಾಡಿ, ಆಸ್ತಿಗಳನ್ನು ಬೇರೆ ಇಂಡೆಕ್ಸ್‌ನಲ್ಲಿ ನೋಂದಾಯಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಸರ್ಕಾರದ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಆದಾಯಕ್ಕೂ ಹಾನಿಯಾಗುತ್ತಿದೆ "ಎಂದು ಮಾಹಿತಿ ನೀಡಿದರು.

ನಮ್ಮ ರಾಜ್ಯದ ಬಹುತೇಕ ಗ್ರಾಮಾಂತರ ಪ್ರದೇಶದ ರೈತಾಪಿ ವರ್ಗದ ಜನ ಇ-ಮೇಲ್ ಐಡಿ ಹೊಂದದೇ ಇರುವುದರಿಂದ ಹಾಗೂ ಇ-ಮೇಲ್/ಗಣಕ ಯಂತ್ರ ಬಳಸುವ ತಿಳುವಳಿಕೆ/ ಅನುಭವ ಇಲ್ಲದೇ ಇರುವುದರಿಂದ Citizen Login ನಲ್ಲಿ ತಮಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕಷ್ಟ ಸಾಧ್ಯವಾಗಿರುತ್ತದೆ.

ದಸ್ತಾವೇಜುಗಳ ವಿವರ:

1) ಕಾನೂನಾತ್ಮಕವಾಗಿ ಜಾರಿಗೊಳ್ಳುವಿಕೆ 2) ನಿಖರತೆ ಮತ್ತು 3) ದಸ್ತಾವೇಜುಗಳಲ್ಲಿ ಒಳಗೊಂಡ ಪಕ್ಷಕಾರರ ಹಕ್ಕುಗಳ ರಕ್ಷಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಬೇಕಾದ್ದರಿಂದ ದಸ್ತಾವೇಜುಗಳನ್ನು ಬರೆಯುವುದು ತಯಾರಿಸುವುದು ಬಹು ಮುಖ್ಯ ಪಾತ್ರವನ್ನು ಅಧಿಕೃತ ಪತ್ರ ಬರಹಗಾರರು ಸಾರ್ವಜನಿಕರಿಗೆ ನಿಖರತೆಯಿಂದ ಕೆಲಸ ನಿರ್ವಹಿಸಿಕೊಂಡು ಬಂದಿರುತ್ತೇವೆ. "A document is intended to be an evidence and has to stand the test of law". ದಸ್ತಾವೇಜುಗಳನ್ನು ಬರೆಯುವ ಕೆಲಸವು ಬಹಳ ಜವಾಬ್ದಾರಿಯುತ ಕೆಲಸವಾಗಿದ್ದು ಇದನ್ನು ಇಲ್ಲಿಯವರೆವಿಗೂ ಮತ್ತು ಇನ್ನು ಮುಂದೆಯು ನಿರ್ವಹಿಸಿಕೊಂಡು ಬರುವವರಾಗಿರುತ್ತೇವೆ. ಆದಾಗ್ಯೂ ಅನಧಿಕೃತ ವ್ಯಕ್ತಿಗಳು ಸರ್ಕಾರಕ್ಕೂ ಮತ್ತು ಸಾರ್ವಜನಿಕರಿಗೆ ಮೋಸ ಮಾಡಬೇಕೆಂಬ ಉದ್ದೇಶ ಹೊಂದಿರುವವರು Citizen-Login ದುರುಪಯೋಗ ಪಡಿಸಿಕೊಂಡು ಸೈಬರ್/ ಡಿ.ಟಿ.ಪಿ. ಕೇಂದ್ರಗಳಲ್ಲಿ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ತಯಾರಿಸುತ್ತಿರುವುದು ನೋಂದಣಿ ಕಾಯ್ದೆ 1908 ರ ಕಲಂ 80ಬಿ ಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.

ನಮ್ಮ ರಾಜ್ಯದಲ್ಲಿ ಅಧಿಕೃತ ಪರವಾನಿಗೆ ಪಡೆದ ಸುಮಾರು 24000 ಪತ್ರ ಬರಹಗಾರರು ಕರ್ತವ್ಯ ನಿರ್ವಹಿಸುತ್ತಿದ್ದು. ನಮ್ಮ ಜೊತೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವವರು, ನಮ್ಮ ಮತ್ತು ಅವರ ಕುಟುಂಬದವರು ಸೇರಿ ಸುಮಾರು 4 ಲಕ್ಷ ಜನ ಮೇಲ್ಪಟ್ಟು ಇದೇ ಉದ್ಯೋಗದ ಮೇಲೆ ಅವಲಂತರಾಗಿರುತ್ತೇವೆ. ನಮ್ಮಗಳಿಗೆ ಈ ಕೆಲಸವನ್ನು ಬಿಟ್ಟು ಬೇರೆ ಯಾವುದೇ ರೀತಿ ಉದ್ಯೋಗ ಬರುವುದಿಲ್ಲ ಹಾಗೂ ಇರುವುದಿಲ್ಲ.

ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೆ ಪತ್ರಬರಹಗಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವೆಂಡರ್ ಲಾಗಿನ್ ನೀಡಿದ್ದು, ಅದರಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮನವಿ ಯೊಂದಿಗೆ ಆಂಧ್ರಪ್ರದೇಶ-ತೆಲಂಗಾಣದಲ್ಲಿ ಸರ್ಕಾರದವರು ನೀಡಿದ್ದಾರೆ. ನಮ್ಮ ರಾಜ್ಯದ ಅಧಿಕೃತ ಪರವಾನಿಗೆ ಪಡೆದ ಪತ್ರ ಬರಹಗಾರರಿಗೆ ಪ್ರತ್ಯೇಕ Deed writer Login ನೀಡುವುದು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಸುರೇಶ್ ಬಾಬು, ಬಸವರಾಜ್ , ಶಾಂತರಾಜು, ನವೀನ್ ಕುಮಾರ್ ಸಹ ಕಾರ್ಯದರ್ಶಿಗಳಾದ ಕರಿಬಸಪ್ಪ, ಸಂಚಾರಕರಾದ ರುಕ್ಮಿಣಿ ಚೆಲುವಾದಿ, ಪಂಪಾಪತಿ ಹೇಳಿದಂತೆ ಅನೇಕರು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ