LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಕೋಟದಡಿ ಅರುಂಧತಿ ವೈ ನಾಮಪತ್ರ ಸಲ್ಲಿಕೆ

ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ 2026, ಮಾರ್ಚ್ ನಲ್ಲಿ ಚುನಾವಣೆ ನಡೆಯಲಿದ್ದು ಮಹಿಳಾ ಮೀಸಲಾತಿ ಸದಸ್ಯ ಸ್ಥಾನಕ್ಕೆ ಅರುಂಧತಿ ವೈ ಅವರು ಸ್ಪರ್ಧೆ ಮಾಡುವ ಮೂಲಕ ಸೋಮವಾರ ನಾಮಪತ್ರವನ್ನು ಸಲ್ಲಿಸಿದರು.


ಅರುಂಧತಿ ವೈ ಅವರು ಎಲ್ಎಲ್ಎಂ ವಿದ್ಯಾರ್ಹತೆ ಹೊಂದಿದ್ದು ಕಲಬುರ್ಗಿ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸುಮಾರು 2 ದಶಕಗಳ ಕಾಲ ವಕೀಲಿ ವೃತ್ತಿಯಲ್ಲಿ ಅನುಭವ ಹೊಂದಿದ್ದಾರೆ. ಜೊತೆಗೆ ಹಿರಿಯ ವಕೀಲರಾಗಿದ್ದು ಕಾಯಕವೇ ಕೈಲಾಸ ಎಂಬುದರಲ್ಲಿ ನಂಬಿಕೆಯನ್ನು ಇಟ್ಟುಕೊಂಡು ಬಂದಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿಯಾಗಿದ್ದು ಅವರ ಸನ್ಮಾರ್ಗದಲ್ಲಿ ನಡೆಯುತ್ತಾ ಬಂದಿದ್ದಾರೆ. ಮುಂದೆಯೂ ಅದೇ ಹಾದಿಯಲ್ಲಿ ಬದುಕುತ್ತೇನೆ ಎಂದರು.


ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಮೊದಲನೇ ಪ್ರಶಸ್ತಿದ ಮತವನ್ನು ಹಾಕುವ ಮೂಲಕ ಮಹಿಳಾ ಮೀಸಲಾತಿ ಅಡಿ ಸದಸ್ಯರನ್ನು ಆಯ್ಕೆ ಮಾಡಿ ಎಂದು ವಕೀಲ ಮಿತ್ರರಲ್ಲಿ ಮನವಿ ಮಾಡಿಕೊಂಡರು. ಇವರ ಬೆಂಬಲಕ್ಕೆ ಹಲವು ಭಾಗಗಳಲ್ಲಿ ವಕೀಲ ಮಿತ್ರರು ನಿಂದಿದ್ದು ಚುನಾವಣೆಯಲ್ಲಿ ಸಹಕಾರ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಅರುಂಧತಿ ವೈ ಯವರು ಸಾಕಷ್ಟು ಆದ್ಯತೆಗಳನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ, ವಕೀಲ ವೃತ್ತಿಯ ಗೌರವ ರಕ್ಷಣೆ ಯುವ ವಕೀಲರ ಭವಿಷ್ಯಕ್ಕೆ ಬಲ ಎದುರಾಗುವ ಸಮಸ್ಯೆಗಳಿಗೆ ಪರಿಹಾರಕ್ಕೆ ಮೊದಲ ಆದ್ಯತೆಯನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.


ಅಲ್ಲದೆ ವಕೀಲ ವೃತ್ತಿಯಲ್ಲಿರುವ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ಕೊಡುವ ಹಾಗೂ ಆರೋಗ್ಯ ದೃಷ್ಟಿಯಿಂದ ವಿಮೆ ಹಾಗೂ ಮಹಿಳಾ ವಕೀಲರಿಗಾಗಿ ವಿಶೇಷ ಕಲ್ಯಾಣ ಸುರಕ್ಷತೆ ಮತ್ತು ಸೌಲಭ್ಯ ಒದಗಿಸುವುದು ಗ್ರಾಮೀಣ ನಗರ ವಕೀಲರಿಗೆ ಸಮಾನ ಅವಕಾಶ ತರಬೇತಿ ಸೌಲಭ್ಯಗಳನ್ನು ಒದಗಿಸುವ ಮಹತ್ವದ ಯೋಜನೆ ಹಾಕಿಕೊಳ್ಳಲಾಗಿದೆ ವಕೀಲರ ಕಲ್ಯಾಣ ನಿಧಿ, ನಿವೃತ್ತ ಮಹಿಳಾ ವಕೀಲರಿಗೆ ಪಿಂಚಣಿ ವ್ಯವಸ್ಥೆ ಮಾಡುವ ಉದ್ದೇಶವನ್ನು ಸಹ ಇಟ್ಟುಕೊಂಡು ಬಂದಿದ್ದೇನೆ ಎಂದರು.


ಈ ಬಾರಿಯ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ವಕೀಲ ಮಿತ್ರರು ಮಹಿಳಾ ಕೋಟದಡಿ  ಅರುಂಧತಿ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು. ವಕೀಲರ ಪರಿಷತ್ ನಲ್ಲಿ ಮಹಿಳೆಯರಿಗೆ ಸಿಗುವ ಸೌವಲತ್ತು ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.


ರಾಜ್ಯದ ಮೂಲೆ ಮೂಲೆಗಳಿಂದ ವಕೀಲ ಮಿತ್ರರು ನನ್ನ ಬೆಂಬಲಕ್ಕೆ ನಿಂತಿದ್ದು , ಈ ಭಾರಿ ನನಗೆ ಮತವನ್ನು ಹಾಕಿ ಗೆಲ್ಲಿಸುವ ಮೂಲಕ ಒಂದು ಅವಕಾಶ ನೀಡಿ ಎಂದು ರಾಜ್ಯದ ಹಿರಿಯ,ಕಿರಿಯ ನ್ಯಾಯವಾದಿಗಳಲ್ಲಿ ಮನವಿ ಮಾಡಿಕೊಂಡರು.


ಪ್ರಣಾಳಿಕೆಗಳು:


1.ವಕೀಲ ಪರಿಷತ್‌ನಲ್ಲಿ ಇರುವ ಆಡಳಿತ ವ್ಯವಸ್ಥೆಯನ್ನು ಉತ್ತುಂಗಕ್ಕೆ ಏರಿಸುವುದು ಹಾಗೂ ವಕೀಲ ಪರಿಷತ್ ಆಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಗೆ ಸೂಕ್ತ ಸಲಹೆ, ಸೂಚನೆ, ನಿದರ್ಶನಗಳನ್ನು ಸಂವಿಧಾನಿಕ ಅಡಿಯಲ್ಲಿ ನೀಡುವುದು.


2. ಕರ್ನಾಟಕ ರಾಜ್ಯದ ಎಲ್ಲಾ ವಕೀಲರಿಗಾಗಿ, ವಕೀಲರಿಗೊಸ್ಕರ ಘನತೆ ಗೌರವ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಅಖಾಂಡತೆಯನ್ನು ಎತ್ತಿ ಹಿಡಿಯುವುದು ಮೂಲ ಗುರಿಯಾಗಿರುತ್ತದೆ.


3. ಗ್ರಾಮೀಣ ನಗರ ವಕೀಲರಿಗೆ ಸಮಾನ ಅವಕಾಶ ತರಬೇತಿ ಸೌಲಭ್ಯಗಳನ್ನು ಒದಗಿಸುವ ಮಹತ್ವದ ಯೋಜನೆ ಹಾಕಿಕೊಳ್ಳಲಾಗಿದೆ.


4. ವಕೀಲ ವೃತ್ತಿಯ ಗೌರವ ರಕ್ಷಣೆ ಯುವ ವಕೀಲರ ಭವಿಷ್ಯಕ್ಕೆ ಬಲ ಎದುರಾಗುವ ಸಮಸ್ಯೆಗಳಿಗೆ ಪರಿಹಾರಕ್ಕೆ ಮೊದಲ ಆದ್ಯತೆ.


ಹೀಗೆ ಹತ್ತು ಹಲವು ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ನ್ಯಾಯವಾದಿಗಳು ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಮಹಿಳಾ ಕೋಟಾದ ಅಡಿ ಒಂದು ಅವಕಾಶವನ್ನು ಮಹಿಳೆಯರಿಗೆ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ