LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ: ವಿಜಯೇಂದ್ರ

*  ರಾಜ್ಯ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಲು ಬಿಜೆಪಿ ಕ್ರಮ  * ಸುಮಾರು 200 ಕಿ ಮೀ ಪಾದಯಾತ್ರೆಗೆ ನಿರ್ಧಾರ * ಜೆಡಿಎಸ್‍ನಿಂದಲೂ ಪಾದಯಾತ್ರೆಗೆ ಬೆಂಬಲ  * ಇನ್ನೂ ಟೇಕಾಫ್ ಆಗದ ಡಿಕೆಶಿ ಸರ್ಕಾರ  * ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡದೆ ಅನ್ಯಾಯ * ರಿಯಲ್ ಎಸ್ಟೇಟ್ ಕಡೆಗೆ ಮಾತ್ರ ಸಿಎಂ ಆಸಕ್ತಿ

ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ವತಿಯಿಂದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. news_1787650833_0_279.webp

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಯ ನಿರ್ಲಕ್ಷ್ಯ, ರೈತರ ಸಂಕಷ್ಟ, ಬಡವರಿಗೆ ಯೋಜನೆ ನೀಡದೇ ಇರುವುದು, ಉದ್ಯೋಗಾವಕಾಶ ಸೃಷ್ಟಿಯಲ್ಲಿ ವೈಫಲ್ಯ, ಮೀಸಲಾತಿ ಜಾರಿ, ಉತ್ತರ ಕರ್ನಾಟಕದ ಸಮಸ್ಯೆ, ಹೊಸ ನೇಮಕಾತಿ ಬಗ್ಗೆ ಸಿಎಂ ಆಸಕ್ತಿ ವಹಿಸುತ್ತಿಲ್ಲ. ಇವುಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಸರ್ಕಾರದ ಬಂಡವಾಳ ಬಯಲು ಮಾಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. 
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ. ಇವರ ಬಣ್ಣವನ್ನು ಬೀದಿಗೆಳೆಯಲು ಬಿಜೆಪಿ ತೀರ್ಮಾನಿಸಿದೆ. ಸೆಪ್ಟೆಂಬರ್ 1  ರಂದು ರಾಯಚೂರಿನಿಂದ ಪಾದಯಾತ್ರೆ ಆರಂಭವಾಗಲಿದೆ. ಬಳ್ಳಾರಿಯಲ್ಲಿ ಸಮಾರೋಪ ನಡೆಯಲಿದೆ. ಸುಮಾರು 200 ಕಿ ಮೀ ಪಾದಯಾತ್ರೆ ಸಾಗಲಿದೆ. ಉದ್ಘಾಟನೆ ಮತ್ತು ಸಮಾರೋಪಕ್ಕೆ ಕೇಂದ್ರ ಸಚಿವರು ಆಗಮಿಸಲಿದ್ದಾರೆ ಎಂದರು. ಬಡವರ, ರೈತರ,ಯುವಕರ ವಿರೋಧಿ ಸರ್ಕಾರದ ಬಣ್ಣ ಬಯಲು ಮಾಡಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಈ ಹತ್ತು ದಿನಗಳ ಕಾಲ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು. 

ಜೆಡಿಎಸ್‍ನಿಂದಲೂ ಬೆಂಬಲ

ಇದು ಬಿಜೆಪಿ ಪಾದಯಾತ್ರೆ. ಇದಕ್ಕೆ ಜೆಡಿಎಸ್ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿ ಅವರೂ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು. 

ಚರ್ಚೆ ಮಾಡಲು ಬಿಡದೆ ಅನ್ಯಾಯ...

ಸತ್ಯವನ್ನು ಎದುರಿಸಲು ಸಾಧ್ಯವಾಗದೆ ಕಾಂಗ್ರೆಸ್ ಸರ್ಕಾರ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯದ ಜನರ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಲು ಬಿಡದೆ ಅನ್ಯಾಯ ಮಾಡಿದೆ. ಅಧಿವೇಶನದ ಅವಧಿಯನ್ನು ಕಡಿತ ಮಾಡಿ ಸರ್ಕಾರ ಪಲಾಯನ ಮಾಡಿದೆ ಎಂದು ದೂರಿದರು. 
ಅಧಿವೇಶನ ಆರಂಭಕ್ಕೂ ಮುನ್ನವೇ ಪತ್ರಿಕಾಗೋಷ್ಠಿ ಮಾಡಿ ವಾಲ್ಮೀಕಿ ನಿಗಮ ಹಗರಣದ ಆರೋಪಿ, ಕಳಂಕಿತ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ. ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡಿ ಎಂದು ಹೇಳಿದ್ದೆವು. ಆದರೆ ಹಾಗೆ ಮಾಡದೆ ಸರ್ಕಾರ ಅಧಿವೇಶನ ಮೊಟಕು ಮಾಡಿ ಓಡಿ ಹೋಗಿದೆ.  ರಾಜ್ಯದಲ್ಲಿನ ಭೀಕರ ಬರ, ಕೆಪಿಎಸ್‍ಸಿ ಹಗರಣ, ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕ ಸಮಸ್ಯೆ, ಬಿಡದಿ ಟೌನ್‍ಶಿಪ್, ನೈಸ್ ಮುಂತಾದವುಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೆವು. ಅದಕ್ಕೆ ಅವಕಾಶ ನೀಡಿಲ್ಲ. ಇವಕ್ಕೆಲ್ಲ ಚರ್ಚೆ ಅವಕಾಶ ನೀಡಿದರೆ ಕಾಂಗ್ರೆಸ್ ಸರ್ಕಾರದ ಮುಖವಾಡ ಬಯಲಾಗುತ್ತದೆ ಎಂದು ಹೆದರಿ ಮುಖ್ಯಮಂತ್ರಿಗಳು ಓಡಿ ಹೋಗಿದ್ದಾರೆ ಎಂದು ಟೀಕಿಸಿದರು. news_1787650834_1_846.webp

ವಾಲ್ಮೀಕಿ ನಿಗಮ ಹಗರಣ ಆದ ನಂತರ ಭೋವಿ ಸಮಾಜಕ್ಕೆ ಸೇರಿದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಅವರ ಡೆತ್ ನೋಟ್ ಎಲ್ಲ ಹೇಳುತ್ತಿದೆ.  ಸಚಿವರ ಮೌಖಿಕ ಆದೇಶದ ಮೇರೆ ಹಣ ವರ್ಗಾವಣೆ ಮಾಡಿದ್ದೇನೆ ಎಂದು ಅವರು ಬರೆದಿದ್ದಾರೆ. ಹಿಂದಿನ ಸಿಎಂ ಸಹ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಡಿಕೆಶಿ ಸಂಪುಟದ ಸಚಿವ ಶಿವಲಿಂಗೇಗೌಡ ಅವರೂ ಸಚಿವ ನಾಗೇಂದ್ರ ಆರೋಪಿ ಎಂದು ಒಪ್ಪಿಕೊಂಡಿದ್ದಾರೆ. ಇμÁ್ಟದರೂ ಸರ್ಕಾರ ಭಂಡತನ ಮಾಡುತ್ತಿದೆ ಎಂದು ಆಕ್ಷೇಪಿಸಿದರು. 
 
ಅವಕಾಶ ನೀಡದೆ ಸಮಯ ವ್ಯರ್ಥ...

ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳಿಗೆ ಅವಕಾಶ ನೀಡದೆ ಸರ್ಕಾರ ಸಮಯ ವ್ಯರ್ಥ ಮಾಡಿದೆ. ಇತ್ತೀಚೆಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನ ನೀಡುತ್ತಿಲ್ಲ. ಕಲ್ಯಾಣ ಯೋಜನೆ ನೀಡುತ್ತಿಲ್ಲ. ಈ ಎಲ್ಲವೂಗಳ ಕುರಿತ ಚರ್ಚೆಗೆ ಸರ್ಕಾರ ಅವಕಾಶ ನೀಡಲಿಲ್ಲ ಎಂದು ದೂರಿದರು.  
 
ಡಿಕೆಶಿ ಅದ್ಯತೆ ರಿಯಲ್ ಎಸ್ಟೇಟ್....

ಬಿಡದಿ ಟೌನ್‍ಶಿಪ್, ಕನಕಪುರ ವಿಮಾನ ನಿಲ್ದಾಣ, ನೈಸ್ ಯೋಜನೆ ಹೀಗೆ ಎಲ್ಲಾ ರಿಯಲ್ ಎಸ್ಟೇಟ್ ಕಡೆಗೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಸಕ್ತಿ ಇದೆ. ಈಗ ಉದ್ಯಾನ ಜಾಗ ಕಬಳಿಸಲು ಮುಂದಾಗಿದ್ದಾರೆ. ಒಂದು ಕಡೆ ಕೋಟಿ ಸಸಿ ನೆಡುವ ದಾಖಲೆ ಮತ್ತೊಂದು ಕಡೆ ರಿಯಲ್ ಎಸ್ಟೇಟ್‍ಗೆ ಉತ್ತೇಜನ. ಇದು ಸಿಎಂ ದ್ವಂದ್ವ ನೀತಿ ಎಂದರು. 

ಉತ್ಸಾಹ ಇಲ್ಲದ ಸಿಎಂ...

ಶಿವಕುಮಾರ್ ಅವರು, ಸಿಎಂ ಆದಾಗ ಬಹಳ ಉತ್ಸಾಹದಿಂದ ಇದ್ದರು. ಆದರೆ ಎರಡೂವರೆ ತಿಂಗಳಾದರೂ ಅವರಲ್ಲಿ ಯಾವ ಉತ್ಸಾಹ ಇಲ್ಲದೆ ಕಳೆÀಗುಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪಟ್ಟಿ ಬಿಡುಗಡೆಗೆ ತಡವಾಯಿತು. ಖಾತೆ ಹಂಚಿಕೆಗೆ ಅಸಮಾಧಾನ ಶುರುವಾಯಿತು. ಸಿದ್ದರಾಮಯ್ಯ ಸಹ ಮುನಿಸಿಕೊಂಡಿದ್ದಾರೆ ಎಂದರು. ಪಾದಯಾತ್ರೆಯ ಮಾರ್ಗದ ಪೆÇೀಸ್ಟರ್ ಅನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು ಎಂದು ವಿವರಿಸಿದರು.
 ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಧಾನಸಭೆಯ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಜಿ ಪಾಟೀಲ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಪ್ರಭು ಚೌಹಾಣ್, ಡಾ. ಶೈಲೇಂದ್ರ ಬೆಲ್ದಾಳೆ, ಮಾನಪ್ಪ ಡಿ. ವಜ್ಜಲ್, ಡಾ. ಎಸ್. ಶಿವರಾಜ್ ಪಾಟೀಲ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಹೆಚ್.ಸಿ. ತಮ್ಮೇಶ್ ಗೌಡ ಮತ್ತು ಮುಖಂಡ ಕೆ. ಕರಿಯಪ್ಪ ಅವರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿ ಪರ, ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಮಂಗಳೂರಿನ ಫಳ್ನೀರ್ ‌ನ ಎಂಎಫ್‌ಸಿ ರೆಸ್ಟೋರೆಂಟ್‌ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಪರಿಶೀಲನೆಶೀಘ್ರವೇ ಉರ್ದು ಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕ : ಸಚಿವ ಮಧು ಬಂಗಾರಪ್ಪಇದು ನಿಮ್ಮ ಮನೆ… ನಾನು ನಿಮ್ಮ ಸೇವಕ ಅಷ್ಟೇ’: ಸೊರಬ ಕ್ಷೇತ್ರದ ಜನರೊಂದಿಗೆ ಸಚಿವ ಮಧು ಬಂಗಾರಪ್ಪರ ಆತ್ಮೀಯ ಕ್ಷಣಇಂ. ರೆಕಾರ್ಡ್ ಗೆ 3 ವರ್ಷದ ಕಂಪ್ಲಿ ತನವ್ ನ ದಾಖಲೆಯ 600ಮೀ ಓಟಪೋಲೀಸರ ಸಭೆಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಅಸಮಾನತೆ ಪ್ರದರ್ಶನ ಸಹಿಸಲಾಗದು -ಮೋಹನ್ ಕುಮಾರ್ ದಾನಪ್ಪಜನರ ಪ್ರಶ್ನೆಗಳಿಂದ ಕಾಂಗ್ರೆಸ್ ಪಲಾಯನ; ಪ್ರಶ್ನಿಸುವ ಕರ್ತವ್ಯ ಮರೆತ ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ: ವಿಜಯೇಂದ್ರನೃತ್ಯ ನಿಕುಂಜದಿಂದ 'ಅಭಿವ್ಯಕ್ತಿ' 9ನೇ ವಾರ್ಷಿಕ ಕಥಕ್ ನೃತ್ಯೋತ್ಸವ: ಲಯ, ಮಳೆಯ ಅದ್ಬುತ ಜುಗಲ್‌ಬಂದಿಹೆಲ್ಮೆಟ್ ಜಾಗೃತಿ ಅಭಿಯಾನ:   ಸ್ಟೀಲ್‌ಬರ್ಡ್ ಕಂಪನಿಯಿಂದ 500 ಫುಲ್‌ಫೇಸ್ ಹೆಲ್ಮೆಟ್‌ಗಳ ಉಚಿತ  ವಿತರಣೆ