LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಮೋಹನ್ ಕುಮಾರ್ ದಾನಪ್ಪ ಕಾರ್ಯ

ಬೆಂಗಳೂರು: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಜೀವ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಅಂಗವಾಗಿ "ಸಲಾಮ್ ಸೋಲ್ಜರ್ಸ್" ಶೀರ್ಷಿಕೆಯಡಿಯಲ್ಲಿ ಯುವಕರು ದೇಶ ಸೇವೆಗೆ ಸೇನೆ ಸೇರುವಂತೆ ಜಾಗೃತಿಗಾಗಿ 5 ಗಂಟೆ ನಿರಂತರ ಮ್ಯಾರಥಾನ್ ಓಟ ಓಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್‌ ದಾನಪ್ಪನವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ

ಆಗಸ್ಟ್ 15 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ತಡೆರಹಿತವಾಗಿ ನಿರಂತರ 5 ಗಂಟೆಗಳ ಕಾಲಾವಧಿಯಲ್ಲಿ ಸಮುದ್ರ ಮಟ್ಟಕ್ಕಿಂತ 10.800 ಅಡಿ ಎತ್ತರದಲ್ಲಿರುವ ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ 42 ಕಿಲೋ ಮೀಟರ್ ಓಡುವ ಮೂಲಕ ವಿನೂತನ ಮ್ಯಾರಥಾನ್‌ ಓಟ ನಡೆಸಿರುವ ಪ್ರಥಮ ವ್ಯಕ್ತಿಯೆಂದು ಪರಿಗಣಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಸಂಪಾದಕೀಯ ಮಂಡಳಿಯು ಸೆಪ್ಟೆಂಬರ್ 18, 2023 ರಂದು ದಾಖಲೆಗಳನ್ನ ಪರಿಶೀಲಿಸಿ ದೃಢೀಕರಿಸಿ ಆಯ್ಕೆ ಮಾಡಿ ಅನುಮೋದಿಸಿ ಭಾರತ ದಾಖಲೆ ಪುಸ್ತಕ (ಇಂಡಿಯಾ ಬುಕ್ ಆಫ್ ರೆಕಾರ್ಡ್)ಕ್ಕೆ ಮೋಹನ್ ಕುಮಾರ್‌ ದಾನಪ್ಪನವರನ್ನ ದಾಖಲೆಗಾರನೆಂದು ಸೇರ್ಪಡಿಸಲಾಗಿದೆ,

ಮೋಹನ್ ಕುಮಾರ್ ದಾನಪ್ಪನವರು ಸದರಿ ಓಟದಲ್ಲಿ ತೋರಿದ ತಾಳ್ಮೆ,ಧೈರ್ಯ ಹಾಗೂ ಪ್ರಯತ್ನ, ಇವರ ಕೌಶಲ್ಯವನ್ನ ಪ್ರಶಂಸಿಸಿ ಅಂಗೀಕರಿಸಲಾಗಿದೆ ಶೀಘ್ರದಲ್ಲೇ ಅಧಿಕೃತ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನ ಮೋಹನ್‌ ಕುಮಾರ್‌ರವರಿಗೆ ಕಳುಹಿಸಲಾಗುವುದೆಂದು ಸಂಸ್ಥೆಯು ತಿಳಿಸಿದೆ!
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಜನಕಲ್ಯಾಣ ಯೋಜನೆಗಳ ಬಗ್ಗೆ ಬಿಜೆಪಿಯವರ ಸುಳ್ಳು ವದಂತಿ ಅಂಕಿ ಅಂಶಗಳ ಸತ್ಯವೇ ಬೇರೆ: ಸುರ್ಜೆವಾಲಬೆಂಗಳೂರು ರಿಯಲ್ ಎಸ್ಟೇಟ್ ಗೆ  ‘ಡೀಲ್‌ಕ್ಲೇವ್’ ನಾಯಕತ್ವ ವೇದಿಕೆ: ಪ್ರಥಮ ಆವೃತ್ತಿ ಯಶಸ್ವಿಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಪರಂಪರೆ ಎಂದೆಂದಿಗೂ ಶಾಶ್ವತ: ಕರಜಗಿಬೆಂಗಳೂರು ಉಳಿಸಿ" – ಹಸಿರು, ಸ್ವಚ್ಛ ಮತ್ತು ವಾಸಯೋಗ್ಯ ಬೆಂಗಳೂರಿಗಾಗಿ ಎಎಪಿ ಹಸಿರು ಕಾರ್ಯಸೂಚಿ  ಪ್ರಣಾಳಿಕೆ ಬಿಡುಗಡೆಖ್ಯಾತ ಸಿನಿತಾರೆ ಕರಣ್ ಕುಂದ್ರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಅದ್ಧೂರಿ ಚಾಲನೆಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪದ್ಮನಾಭನಗರದಲ್ಲಿ ಗುರುಪಾದ ಪೂಜೆ, ಭಜನೆ ಹಾಗೂ ಧಾರ್ಮಿಕ ಜಾಗೃತಿ ಮೆರವಣಿಗೆ ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : BO, ಎ.ಜೆ.ಕೃಷ್ಣೇಗೌಡ ಅಭಿನಂದನೆಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದಿಂದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ!